ಕರ್ನಾಟಕ

karnataka

ETV Bharat / business

ಏರುಗತಿಯಲ್ಲಿದ್ದ ಪೆಟ್ರೋಲ್​ ದರದಲ್ಲಿ 1.84 ರೂ. ಇಳಿಕೆ: ಹೇಗಾಯ್ತು? - ಪೆಟ್ರೋಲ್​

ಕಳೆದ ಅಕ್ಟೋಬರ್​ 2ರಿಂದ ಇಲ್ಲಿಯವರೆಗೆ ಲೀಟರ್ ಪೆಟ್ರೋಲ್​ ಮೇಲೆ 1.14 ರೂ. ಹಾಗೂ ಡೀಸೆಲ್​ ಮೇಲೆ 84 ಪೈಸೆಯಷ್ಟು ಇಳಿದಂತಾಗಿದೆ. ಮುಂಬೈನಲ್ಲಿ ಲೀಟರ್​ ಪೆಟ್ರೋಲ್​  80 ರೂ. ದೊರೆಯುತ್ತಿದ್ದು, ಇಲ್ಲಿನ ವಾಹನ ಚಾಲಕ ಮತ್ತು ಮಾಲೀಕರಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ. ದೇಶದ ಪ್ರಮುಖ ಮೆಟ್ರೋ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತಿ ಕಡಿಮೆ ದರದಲ್ಲಿ ಡೀಸೆಲ್​ (₹ 68.82)  ಮಾರಾಟ ಆಗುತ್ತಿದೆ.

ಸಾಂದರ್ಭಿಕ ಚಿತ್ರ

By

Published : Oct 11, 2019, 9:55 AM IST

ನವದೆಹಲಿ: ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಇಳಿಕೆಯಾಗಿದೆ.

ಕಳೆದ ಕೆಲವು ದಿನಗಳಿಂದ ಮೇಲ್ಮುಖವಾಗಿ ಸಾಗುತ್ತಿದ್ದ ಚಿಲ್ಲರೆ ಇಂಧನ ದರವು ಶುಕ್ರವಾರದ ಪೇಟೆಯಲ್ಲಿ ಇಳಿಕೆಯಾಗಿದೆ. ಪ್ರತಿ ಲೀಟರ್​ ಪೆಟ್ರೋಲ್ 11-13 ಪೈಸೆ ಹಾಗೂ ಡೀಸೆಲ್​ನಲ್ಲಿ 15-16 ಪೈಸೆಯಷ್ಟು ಇಳಿಕೆಯಾಗಿದೆ. ಕಳೆದ ತಿಂಗಳಿಂದ ಗಗನ ಮುಖಿಯಾಗಿದ್ದ ಇಂಧನವು ಈಗ ಕೆಳಮುಖವಾಗಿದೆ.

ಕಳೆದ ಅಕ್ಟೋಬರ್​ 2ರಿಂದ ಇಲ್ಲಿಯವರೆಗೆ ಲೀಟರ್ ಪೆಟ್ರೋಲ್​ ಮೇಲೆ 1.14 ರೂ. ಹಾಗೂ ಡೀಸೆಲ್​ ಮೇಲೆ 84 ಪೈಸೆಯಷ್ಟು ಇಳಿದಂತಾಗಿದೆ. ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ 80 ರೂ. ದೊರೆಯುತ್ತಿದ್ದು, ಇಲ್ಲಿನ ವಾಹನ ಚಾಲಕ ಮತ್ತು ಮಾಲೀಕರಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ. ದೇಶದ ಪ್ರಮುಖ ಮೆಟ್ರೋ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತಿ ಕಡಿಮೆ ದರದಲ್ಲಿ ಡೀಸೆಲ್​ (₹ 68.82) ಮಾರಾಟ ಆಗುತ್ತಿದೆ.

ರಾಷ್ಟ್ರರಾಜಧಾನಿ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರುನಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್​ ಕ್ರಮವಾಗಿ ₹ 73.42 & ₹ 66.60, ₹ 79.03 & 69.81, ₹ 76.07 & ₹ 68.96, 76.25 & ₹ 70.35 ಹಾಗೂ ₹ 75.87 & ₹ 68.82 ಮಾರಾಟ ಆಗುತ್ತಿದೆ.

ABOUT THE AUTHOR

...view details