ಕರ್ನಾಟಕ

karnataka

ETV Bharat / business

ಲಾಕ್‌ಡೌನ್‌ ನಡುವೆ ಪ್ರಯಾಣಿಕರ ವಾಹನಗಳ ಮಾರಾಟ ಶೇ 66ರಷ್ಟು ಇಳಿಕೆ: ವರದಿ - ಕೋವಿಡ್ 19

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ ಇತ್ತೀಚಿನ ಮಾಹಿತಿಯ ಪ್ರಕಾರ, ವಿತರಕರಿಗೆ ದ್ವಿಚಕ್ರ ವಾಹನ ರವಾನೆ ಶೇ 65ರಷ್ಟು ಇಳಿದು 3,52,717 ಯುನಿಟ್​ಗಳಿಗೆ ತಲುಪಿದೆ. ಏಪ್ರಿಲ್‌ನಲ್ಲಿ 9,95,097 ಯುನಿಟ್‌ಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಮೋಟಾರ್‌ಸೈಕಲ್ ಮಾರಾಟವು ಕಳೆದ ತಿಂಗಳು ಶೇ 56ರಷ್ಟು ಇಳಿದು 2,95,257ಕ್ಕೆ ತಲುಪಿದ್ದು, ಏಪ್ರಿಲ್‌ನಲ್ಲಿ 6,67,841 ಯುನಿಟ್‌ಗಳಷ್ಟಿತ್ತು.

passenger
passenger

By

Published : Jun 11, 2021, 3:18 PM IST

ನವದೆಹಲಿ:ಈ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಭಾರತದಲ್ಲಿ ಪ್ರಯಾಣಿಕರ ವಾಹನ ಸಗಟು ಮಾರಾಟವು ಶೇ 66ರಷ್ಟು ಕುಸಿದು 88,045 ಯೂನಿಟ್​​ಗಳಿಗೆ ತಲುಪಿದೆ. ಏಪ್ರಿಲ್‌ನಲ್ಲಿ ಪ್ರಯಾಣಿಕರ ವಾಹನ ಸಗಟು ಮಾರಾಟ 2,61,633 ಯುನಿಟ್‌ಗಳಷ್ಟಿತ್ತು.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ (ಸಿಯಾಮ್) ಇತ್ತೀಚಿನ ಮಾಹಿತಿಯ ಪ್ರಕಾರ, ವಿತರಕರಿಗೆ ದ್ವಿಚಕ್ರ ವಾಹನ ರವಾನೆ ಶೇ 65ರಷ್ಟು ಇಳಿದು 3,52,717 ಯುನಿಟ್​ಗಳಿಗೆ ತಲುಪಿದೆ. ಏಪ್ರಿಲ್‌ನಲ್ಲಿ 9,95,097 ಯುನಿಟ್‌ಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಮೋಟಾರ್‌ಸೈಕಲ್ ಮಾರಾಟವು ಕಳೆದ ತಿಂಗಳು ಶೇ 56ರಷ್ಟು ಇಳಿದು 2,95,257ಕ್ಕೆ ತಲುಪಿದ್ದು, ಏಪ್ರಿಲ್‌ನಲ್ಲಿ 6,67,841 ಯುನಿಟ್‌ಗಳಷ್ಟಿತ್ತು.

ಓದಿ: ಹಿಂದಿನ ಸಿಂಡಿಕೇಟ್ ಬ್ಯಾಂಕ್ ಶಾಖೆಗಳ IFSC ಕೋಡ್ ಜುಲೈ 1ರಿಂದ ಬದಲಾವಣೆ

ಸ್ಕೂಟರ್ ಮಾರಾಟವು ಈ ವರ್ಷದ ಏಪ್ರಿಲ್‌ನಲ್ಲಿ 3,00,462 ಯುನಿಟ್‌ಗಳಿಂದ ಶೇ 83ರಷ್ಟು ಇಳಿಕೆಯಾಗಿ 50,294ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ 13,728 ಯುನಿಟ್‌ಗಳಿಗೆ ಹೋಲಿಸಿದರೆ ತ್ರಿಚಕ್ರ ಮಾರಾಟವು ಶೇ 91ರಷ್ಟು ಕುಸಿದು 1,251ಕ್ಕೆ ತಲುಪಿದೆ. ಕಳೆದ ತಿಂಗಳು ವಿಭಾಗಗಳಲ್ಲಿ ವಾಹನಗಳ ಮಾರಾಟವು ಶೇ 65ರಷ್ಟು ಕುಸಿದು 4,42,013ಕ್ಕೆ ತಲುಪಿದ್ದು, ಈ ವರ್ಷದ ಏಪ್ರಿಲ್‌ನಲ್ಲಿ 12,70,458 ಯುನಿಟ್‌ಗಳಷ್ಟಿತ್ತು.

ಮಾರಾಟದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಯಾಮ್ ಮಹಾ ನಿರ್ದೇಶಕ ರಾಜೇಶ್ ಮೆನನ್, ಮೇ ತಿಂಗಳ ಬಹುಪಾಲು ಕೋವಿಡ್​-19 ಪ್ರಕರಣಗಳಿಂದಾಗಿ ಅನೇಕ ರಾಜ್ಯಗಳು ಲಾಕ್‌ಡೌನ್ ವಿಧಿಸಿದ್ದವು. ಇದರಿಂದಾಗಿ ತಿಂಗಳಲ್ಲಿ ಒಟ್ಟಾರೆ ಮಾರಾಟ ಮತ್ತು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ವೈದ್ಯಕೀಯ ಉದ್ದೇಶಗಳಿಗಾಗಿ ಕೈಗಾರಿಕಾ ಬಳಕೆಯಿಂದ ಆಮ್ಲಜನಕವನ್ನು ಬೇರೆಡೆಗೆ ತಿರುಗಿಸಲು ಅನೇಕ ಸದಸ್ಯರು (ಆಟೋ ಕಾಸ್) ತಮ್ಮ ಉತ್ಪಾದನಾ ಘಟಕಗಳನ್ನು ಮುಚ್ಚಿದ್ದರು ಎಂದು ಹೇಳಿದರು.

ABOUT THE AUTHOR

...view details