ನವದೆಹಲಿ: ತಕ್ಷಣದಿಂದ ಜಾರಿಗೆ ಬರುವಂತೆ ಮಹೀಂದ್ರಾ ಅಂಡ್ ಮಹೀಂದ್ರಾ (ಎಂ&ಎಂ) ತನ್ನ ಪರ್ಸನಲ್ ಮತ್ತು ವಾಣಿಜ್ಯ ವಾಹನಗಳ ದರವನ್ನು ಶೇ 1.9ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದೆ.
19.4 ಬಿಲಿಯನ್ ಡಾಲರ್ನ ಮಹೀಂದ್ರಾ ಗ್ರೂಪ್ನ ಭಾಗವಾಗಿರುವ ಮಹೀಂದ್ರಾ ಅಂಡ್ ಮಹೀಂದ್ರಾದ (ಎಂ&ಎಂ) ವೈಯಕ್ತಿಕ ಮತ್ತು ವಾಣಿಜ್ಯ ವಾಹನಗಳ ಶ್ರೇಣಿಯ ಬೆಲೆಯಲ್ಲಿ 4,500 - 40,000 ರೂ. ತನಕ ಏರಿಕೆ ಆಗಲಿದೆ. ಈ ದರ ಹೆಚ್ಚಳವು ವಿವಿಧ ಮಾದರಿಯ ವಾಹನಗಳನ್ನು ಅವಲಂಭಿಸಿರುತ್ತದೆ ಎಂದು ಮುಂಬೈ ಮೂಲದ ವಾಹನ ತಯಾರಕ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದ್ದಾರೆ.
ಹೊಸ ಥಾರ್‌ನ ಬಿಡುಗಡೆಯ ಪ್ರಸ್ತುತ ಬೆಲೆ ಹೆಚ್ಚಳವು 2020ರ ಡಿಸೆಂಬರ್ 1 ಮತ್ತು 2021ರ ಜನವರಿ 7ರ ನಡುವೆ ಮಾಡಿದ ಎಲ್ಲ ಬುಕ್ಕಿಂಗ್‌ಗಳಿಗೆ ಅನ್ವಯಿಸಲಿದೆ. 2021ರ ಜನವರಿ 8ರಿಂದ ಹೊಸ ಥಾರ್‌ಗೆ ನೂತನ ಬುಕ್ಕಿಂಗ್ಗಳ ವಿತರಣಾ ದಿನಾಂಕದಂದು ಅನ್ವಯವಾಗುವಂತೆ ದರ ಹೊಂದಿರುತ್ತದೆ ಎಂದು ಕಂಪನಿ ತಿಳಿಸಿದೆ.