ನವದೆಹಲಿ:ಕಳೆದ ಕೆಲ ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಇಂದು 251 ರೂ. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 46,615 ರೂ.ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡುಬಂದಿದ್ದು, ಇಂದು 256 ರೂ ಕಡಿಮೆಯಾಗಿದೆ. ಹೀಗಾಗಿ ಸದ್ಯ ಒಂದು ಕೆ.ಜಿ ಬೆಳ್ಳಿ ಬೆಲೆ 68,458 ರೂ. ಆಗಿದೆ. ಈ ಹಿಂದಿನ ಬೆಲೆ 68,714 ರೂ. ಇತ್ತು. ಉಳಿದಂತೆ 24 ಕ್ಯಾರೆಟ್ ಚಿನ್ನದ ಬೆಲೆ ಸದ್ಯ 47,190 ರೂ ಆಗಿದ್ದು, 22 ಕ್ಯಾರೆಟ್ ಬಂಗಾರ 46,190 ರೂ.ಇದೆ.