ಕರ್ನಾಟಕ

karnataka

ETV Bharat / business

Gold Price : ಇಂದಿನ ಚಿನ್ನ, ಬೆಳ್ಳಿಯ ದರ ಹೇಗಿದೆ? - ಆಗಸ್ಟ್ 20 ಚಿನ್ನ ದರ

ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ 20 ಪೈಸೆ ಇಳಿಕೆ ಕಂಡು 74.44ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ ಚಿನ್ನದ ಬೆಲೆ 1,786 ಡಾಲರ್‌ಗಳಷ್ಟು ಹೆಚ್ಚಿದೆ ಮತ್ತು ಬೆಳ್ಳಿ ಪ್ರತಿ ಔನ್ಸ್‌ಗೆ 23.23 ಡಾಲರ್‌ನಷ್ಟಿದೆ ಎಂದು ಹೆಚ್​ಡಿಎಫ್​ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ತಿಳಿಸಿದರು..

Gold price
ಇಂದಿನ ಚಿನ್ನ, ಬೆಳ್ಳಿಯ ದರ

By

Published : Aug 20, 2021, 5:14 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 128 ರೂ. ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನದ ಬೆಲೆ 46,353 ರೂಪಾಯಿ ಇದೆ ಎಂದು ಹೆಚ್​ಡಿಎಫ್​ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಬೆಲೆಬಾಳುವ ಲೋಹವು 10 ಗ್ರಾಂಗೆ 46,225 ರೂ. ಇತ್ತು. ಹಾಗೂ ಬೆಳ್ಳಿ ಪ್ರತಿ ಕೆಜಿಗೆ 6 ರೂ. ಏರಿದೆ. ಅಂದರೆ ರೂ. 60,891(ಹಿಂದಿನ ಬೆಲೆ) ರಿಂದ 60,897ಕ್ಕೆ ಏರಿಕೆಯಾಗಿದೆ.

ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ 20 ಪೈಸೆ ಇಳಿಕೆ ಕಂಡು 74.44ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ ಚಿನ್ನದ ಬೆಲೆ 1,786 ಡಾಲರ್‌ಗಳಷ್ಟು ಹೆಚ್ಚಿದೆ ಮತ್ತು ಬೆಳ್ಳಿ ಪ್ರತಿ ಔನ್ಸ್‌ಗೆ 23.23 ಡಾಲರ್‌ನಷ್ಟಿದೆ ಎಂದು ಹೆಚ್​ಡಿಎಫ್​ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ತಿಳಿಸಿದರು.

ABOUT THE AUTHOR

...view details