ನವದೆಹಲಿ:ಜಾಗತಿಕವಾಗಿ ಕಳೆದ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ಬಂಗಾರಕ್ಕೆ ಶೇ 50 ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಇದೇ ವೇಳೆ 2021ನೇ ಸಾಲಿನಲ್ಲಿ ಒಟ್ಟಾರೆ ಶೇ 10 ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ ಎಂದು ವಿಶ್ವ ಚಿನ್ನ ಸಮಿತಿ( ವರ್ಲ್ಡ್ ಗೋಲ್ಡ್ ಕೌನ್ಸಿಲ್) ಹೇಳಿದೆ. ಜಾಗತಿಕವಾಗಿ 4021 ಟನ್ ಬಂಗಾರಕ್ಕೆ ಬೇಡಿಕೆ ಇದೆ ಎಂದು ಅಂಕಿ- ಅಂಶಗಳು ಹೇಳುತ್ತಿವೆ.
ಗ್ರಾಹಕ - ಚಾಲಿತ ಆಭರಣಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಗ್ರಾಹಕರ ಭಾವನೆಗೆ ಅನುಗುಣವಾಗಿ ವರ್ಷವಿಡೀ ಬಂಗಾರದ ವ್ಯವಹಾರವು ಚೇತರಿಸಿಕೊಂಡಿದೆ. ಇನ್ನು ಕೇಂದ್ರ ಬ್ಯಾಂಕನ ಬಂಗಾರ ನಿಧಿ ಕಳೆದ ಬಾರಿಗಿಂತ ಹೆಚ್ಚಾಗಿದೆ. ಹೂಡಿಕೆ ಬೇಡಿಕೆ ಪರಸ್ಪರ ಏರಿಕೆ ಮತ್ತು ಇಳಿಕೆಯ ಮಿಶ್ರಣವಾಗಿದೆ ಎಂದು ಗೋಲ್ಡ್ ಕೌನ್ಸಿಲ್ ಹೇಳಿದೆ.
ಆಭರಣ ತಯಾರಿಕೆ ವಿಭಾಗವು 2021 ರಲ್ಲಿ ಬಲವಾದ ಚೇತರಿಕೆ ಕಂಡಿದ್ದು, 2021 ರಲ್ಲಿ 2,221 ಟನ್ಗಳಷ್ಟಾಗಿದೆ. ಅಂದರೆ ಸುಮಾರು ಶೇ 67 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚಿನ ಬೇಡಿಕೆ ಕಂಡು ಬಂದಿದೆ ಎಂದು ಕೌನ್ಸಿಲ್ ಹೇಳಿದೆ.