ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಬುಧವಾರದ ವಹಿವಾಟಿನಂದು 252 ರೂ.ನಷ್ಟು ಇಳಿದು ಪ್ರತಿ10 ಗ್ರಾಂ. 49,506 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ ಗರಿಷ್ಠ 49,758 ರೂ.ಗಳಲ್ಲಿ ಕೊನೆಗೊಂಡಿತ್ತು. ಬೆಳ್ಳಿ ದರ ಕೂಡ 933 ರೂ. ಇಳಿದು ಕೆ.ಜಿ.ಗೆ 66,493 ರೂ. ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,868 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 25.53 ಡಾಲರ್‌ನಷ್ಟು ಲಾಭದೊಂದಿಗೆ ಮಾರಾಟ ಆಗುತ್ತಿದೆ.
ಇದನ್ನೂ ಓದಿ: ಹೊಸ ಬಗೆ ಕೊರೊನಾಗೆ ಬೆದರಿದ ಏಷ್ಯಾ ಮಾರುಕಟ್ಟೆ: ನಮ್ಮ ಗೂಳಿಗಿಲ್ಲ ಚಿಂತೆ
ಅಮೆರಿಕದ ಗ್ರಾಹಕರು ಕಠಿಣ ನಿರ್ಧಾರಗಳತ್ತ ವಾಲುತ್ತಿದ್ದಾರೆ. ಇದರ ಜೊತೆಗೆ ವಸತಿ ಕ್ಷೇತ್ರದ ದತ್ತಾಂಶವು ಆರ್ಥಿಕ ಚೇತರಿಕೆಗೆ ಹೆಚ್ಚಿನ ಉತ್ತೇಜನ ನೀಡುವ ಭರವಸೆ ನೀಡಿರುವುದನ್ನು ತೋರಿಸಿವೆ. ಹೀಗಾಗಿ, ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ನ ಉಪಾಧ್ಯಕ್ಷ (ಸರಕುಗಳ ಸಂಶೋಧನೆ) ನವನೀತ್ ದಮಾನಿ ಹೇಳಿದರು.
ಬ್ರಿಟನ್ನಲ್ಲಿನ ಹೊಸ ಕೊರೊನಾ ವೈರಸ್ ಒತ್ತಡವು ವಿಶ್ವದಾದ್ಯಂತ ಹಲವು ದೇಶಗಳು ತಮ್ಮ ಗಡಿಗಳನ್ನು ಇಂಗ್ಲೆಂಡ್ ಜತೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಔಷಧ ತಯಾರಕರು ತಮ್ಮ ಕೋವಿಡ್-19 ಲಸಿಕೆಗಳನ್ನು ಪರೀಕ್ಷಿಸಲು ಪರದಾಡುತ್ತಿದ್ದಾರೆ. ಇದು ಲೋಹದ ಬೆಲೆಗಳಿಗೆ ಮತ್ತಷ್ಟು ಬೆಂಬಲವಾಗಿದೆ ಎಂದು ಅಭಿಪ್ರಾಯಪಟ್ಟರು.