ಕರ್ನಾಟಕ

karnataka

By

Published : Feb 27, 2021, 4:29 PM IST

ETV Bharat / business

ಅಗ್ಗದ ಬೆಲೆಯ ಸುರಕ್ಷಿತ ಹೂಡಿಕೆ ಗೋಲ್ಡ್ ಬಾಂಡ್ ಖರೀದಿ ಶುರು : ಬಡ್ಡಿ ಎಷ್ಟು, ಎಲ್ಲಿ, ಹೇಗೆ? ಇಲ್ಲಿದೆ ಮಾಹಿತಿ

ಹಳದಿ ಲೋಹವನ್ನು ಕೇವಲ ಹೂಡಿಕೆ ದೃಷ್ಟಿಕೋನದಿಂದ ನೋಡುವ ಖರೀದಿದಾರರು ಭೌತಿಕ ಲೋಹ ಖರೀದಿಸುವುದಕ್ಕಿಂತ ಹೆಚ್ಚಿನ ಅನುಕೂಲಗಳಿಂದಾಗಿ ಈ ಚಿನ್ನದ ಬಾಂಡ್‌ಗಳಿಗೆ ಚಂದಾದಾರರಾಗಬಹುದು..

Gold Bond Scheme
Gold Bond Scheme

ನವದೆಹಲಿ :ಕೇಂದ್ರ ಸರ್ಕಾರ ರೂಪಿಸಿರುವ ಚಿನ್ನ ನಗದೀಕರಣ ಮತ್ತು ಸವರನ್ ಚಿನ್ನದ ಬಾಂಡ್ ಯೋಜನೆ 2020-21ರ ಹೊಸ ಸರಣಿಯು 2021ರ ಮಾರ್ಚ್ 1-5ರವರೆಗೆ ತೆರೆದಿರುತ್ತದೆ.

ಚಂದಾದಾರಿಕೆ ಅವಧಿಯಲ್ಲಿ ಬಾಂಡ್‌ನ ವಿತರಣಾ ಬೆಲೆ ಪ್ರತಿ ಗ್ರಾಂಗೆ 4,662 ರೂ. ನಿಗದಿಪಡಿಸಲಾಗಿದೆ. ಬಾಂಡ್​ ಸರಣಿ 12ನೇ ಯೋಜನೆಯಡಿ ಇತ್ಯರ್ಥ ದಿನಾಂಕವನ್ನು ಮಾರ್ಚ್ 9ಕ್ಕೆ ನಿಗದಿಪಡಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ವಿತರಣಾ ಬೆಲೆಯಿಂದ ಪ್ರತಿ ಗ್ರಾಂ‌ಗೆ 50 ರೂ.ಗಳ ರಿಯಾಯಿತಿ ನೀಡಲು ಭಾರತ ರಿಸರ್ವ್ ಬ್ಯಾಂಕ್‌ನೊಂದಿಗೆ ಸಮಾಲೋಚಿಸಿ, ಸರ್ಕಾರ ನಿರ್ಧರಿಸಿದೆ ಮತ್ತು ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡಲಾಗುತ್ತದೆ.

ಹಳದಿ ಲೋಹವನ್ನು ಕೇವಲ ಹೂಡಿಕೆ ದೃಷ್ಟಿಕೋನದಿಂದ ನೋಡುವ ಖರೀದಿದಾರರು ಭೌತಿಕ ಲೋಹ ಖರೀದಿಸುವುದಕ್ಕಿಂತ ಹೆಚ್ಚಿನ ಅನುಕೂಲಗಳಿಂದಾಗಿ ಈ ಚಿನ್ನದ ಬಾಂಡ್‌ಗಳಿಗೆ ಚಂದಾದಾರರಾಗಬಹುದು.

ಭಾರತೀಯರಿಗಷ್ಟೇ ಈ ಬಾಂಡ್​ಗಳ ಖರೀದಿಗೆ ಅವಕಾಶವಿದೆ. ಹಿಂದೂ ಅವಿಭಜಿತ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು, ಚಾರಿಟಬಲ್‌ ಸಂಸ್ಥೆಗಳು ಸಹ ಖರೀದಿಸಬಹುದು.

12ನೇ ಸರಣಿ ಬಾಂಡ್​ ವಿತರಣೆಯ ಮಹತ್ವದ ದಿನಗಳು :

ಸರಣಿ-12 ಚಂದಾದಾರ ದಿನಾಂಕ: ಮಾರ್ಚ್​ 1​​, ವಿತರಣೆಯ ದಿನಾಂಕ: ಮಾರ್ಚ್​ 9

ಬೆಲೆ ಮತ್ತು ಪಾವತಿ :ಭಾರತೀಯ ಚಿನ್ನ ಹಾಗೂ ಆಭರಣ ಸಂಘಟನೆ ಪ್ರಕಟಿಸುವ ದರ ಆಧರಿಸಿ ಬಾಂಡ್‌ಗಳ ಬೆಲೆ ನಿಗದಿಪಡಿಸಲಾಗುತ್ತದೆ. ಬಾಂಡ್‌ ಖರೀದಿಸುವ ಸಂದರ್ಭದಲ್ಲಿ ಮಾರುಕಟ್ಟೆಯ ಗ್ರಾಂ. ಚಿನ್ನದ ದರಕ್ಕಿಂದ ₹50 ಕಡಿಮೆ ನಿಗದಿ ಮಾಡಲಾಗುತ್ತದೆ.

ಮಾರಾಟ ಆಗುವ ಸ್ಥಳಗಳು :ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ), ಅಂಚೆ ಕಚೇರಿಗಳು, ಬ್ಯಾಂಕ್‌ಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್‌) ಮತ್ತು ಮುಂಬೈ ಷೇರು ವಿನಿಮಯ ಕೇಂದ್ರದಂಥ ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಲ್ಲಿ ಖರೀದಿಸಬಹುದು. ಕನಿಷ್ಠ ಒಂದು ಗ್ರಾಂ. ಚಿನ್ನವನ್ನು ಬಾಂಡ್ ರೂಪದಲ್ಲಿ ಖರೀದಿಸಬಹುದು. ಹಣಕಾಸು ವರ್ಷದಲ್ಲಿ ವ್ಯಕ್ತಿಯೊಬ್ಬ 500 ಗ್ರಾಂ ತನಕ ಖರೀದಿ ಅವಕಾಶವಿದೆ.

ಬಡ್ಡಿ ಮತ್ತು ಬಾಂಡ್ ಅವಧಿ :ಚಿನ್ನದ ಬಾಂಡ್‌ಗಳಿಗೆ ವಾರ್ಷಿಕ ಶೇ 2.5ರಷ್ಟು ಬಡ್ಡಿ ದೊರೆಯುತ್ತದೆ. ಬಡ್ಡಿಯನ್ನು ಪ್ರತಿ 6 ತಿಂಗಳಿಗೊಮ್ಮೆ ನೀಡಲಾಗುತ್ತದೆ. ಬಾಂಡ್‌ ಅವಧಿ 8 ವರ್ಷಗಳು. ಜತೆಗೆ 5ನೇ ವರ್ಷದಲ್ಲಿ ಯೋಜನೆಯಿಂದ ಹೊರಬರುವ ಅವಕಾಶವಿದೆ.

ತೆರಿಗೆ :ಚಿನ್ನದ ಯೋಜನೆಗಳಿಗೆ ಅನ್ವಯವಾಗುವಂತಹ ಆದಾಯ ತೆರಿಗೆ ಕಾಯ್ದೆ ಚಿನ್ನದ ಬಾಂಡ್​ಗೂ ಅನ್ವಯವಾಗುತ್ತದೆ. ಬಾಂಡ್‌ಗಳು ಗಳಿಸುವ ಬಡ್ಡಿಯನ್ನು ಹೂಡಿಕೆದಾರರ ಗಳಿಕೆಗೆ ಸೇರಿಸಿ, ತೆರಿಗೆ ವಿಧಿಸಲಾಗುತ್ತದೆ.

ABOUT THE AUTHOR

...view details