ಕರ್ನಾಟಕ

karnataka

ಬೈಕ್​ ಮಾರ್ಕೆಟ್​ಗೆ ಪೆಡಂಭೂತ... ಟಿವಿಎಸ್​ ಶೇ 25, ಬಜಾಜ್​ ಶೇ 12ರಷ್ಟು ಮಾರಾಟ ಕುಸಿತ

ಟಿವಿಎಸ್ ಮೋಟಾರ್ ಕಂಪೆನಿಯ ವಾಹನಗಳ ಮಾರಾಟ ಕಳೆದ ವರ್ಷದಲ್ಲಿ ಶೇ 25ರಷ್ಟು ಕುಸಿತ ಕಂಡಿದೆ. 2018ರ ಡಿಸೆಂಬರ್​ನಲ್ಲಿ 2,71,395 ವಾಹನಗಳು ಮಾರಾಟ ಮಾಡಿದ್ದ ಸಂಸ್ಥೆ 2019ರ ಡಿಸೆಂಬರ್ ತಿಂಗಳಲ್ಲಿ 2,31,571 ವಾಹನ ಮಾರಾಟ ಮಾಡಿದೆ. ಇನ್ನೊಂದಡೆ ಬಜಾಜ್​ ಕೂಡ ಶೇ 12ರಷ್ಟು ಮಾರಾಟ ಕುಸಿತವನ್ನು ದಾಖಲಿಸಿದೆ.

By

Published : Jan 2, 2020, 10:58 PM IST

Published : Jan 2, 2020, 10:58 PM IST

Two wheeler
ದ್ವಿಚಕ್ರ

ನವದೆಹಲಿ: ಆರ್ಥಿಕ ಕುಸಿತದ ಪರಿಣಾಮ ಡಿಸೆಂಬರ್​ನಲ್ಲಿಯೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡುಬಂದಿದೆ.

ಟಿವಿಎಸ್ ಮೋಟಾರ್ ಕಂಪೆನಿಯ ವಾಹನಗಳ ಮಾರಾಟ ಕಳೆದ ವರ್ಷದಲ್ಲಿ ಶೇ 25ರಷ್ಟು ಕುಸಿತ ಕಂಡಿದೆ. 2018ರ ಡಿಸೆಂಬರ್​ನಲ್ಲಿ 2,71,395 ವಾಹನಗಳು ಮಾರಾಟ ಮಾಡಿದ್ದ ಸಂಸ್ಥೆ 2019ರ ಡಿಸೆಂಬರ್ ತಿಂಗಳಲ್ಲಿ 2,31,571 ವಾಹನ ಮಾರಾಟ ಮಾಡಿದೆ.

ಕಂಪೆನಿಯು ಟಿವಿಎಸ್ ಅಪಾಚೆ ಆರ್​ಟಿಆರ್ ಶ್ರೇಣಿ, ಟಿವಿಎಸ್ ಜುಪಿಟರ್ ಕ್ಲಾಸಿಕ್ ಮತ್ತು ಟಿವಿಎಸ್ ಎಕ್ಸ್​ಎಲ್ ಸರಣಿಯ 2020ರ ಬಿಎಸ್-4 ವಾಹನಗಳನ್ನು ಉತ್ಪಾದಿಸಿ, ಮಾರುಕಟ್ಟೆಗೆ ಪೂರೈಸುತ್ತಿದೆ.

ಬಜಾಜ್ ಶೇ 12ರಷ್ಟು ಕುಸಿತ

ಬಜಾಜ್ ಆಟೋ ಇಂಡಿಯಾ ಕೂಡ ಶೇ 12ರಷ್ಟು ಕುಸಿತ ಕಂಡಿದ್ದು, 2019ರ ಎಪ್ರಿಲ್​​- ಡಿಸೆಂಬರ್ ಅವಧಿಯಲ್ಲಿ 19,65,547 ಯೂನಿಟ್​​ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,28,421 ಯೂನಿಟ್​​ಗಳನ್ನು ಮಾರಾಟ ಮಾಡಿತ್ತು. ಒಟ್ಟಾರೆ ದೇಶಿ ದ್ವಿಚಕ್ರ ಆಟೋಮೊಬೈಲ್​ ಉದ್ಯಮ 2019ರಲ್ಲಿ ಶೇ 3ರಷ್ಟು ಕುಸಿತ ದಾಖಲಿಸಿದೆ.

ABOUT THE AUTHOR

...view details