ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿನಿಂದ ಅಮೆರಿಕದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಫೆಡರಲ್ ರಿಸರ್ವ್ ಬೆಂಚ್ಮಾರ್ಕ್ ತನ್ನ ಬಡ್ಡಿದರವನ್ನು ಶೂನ್ಯಕ್ಕೆ ಇಳಿಸಿದೆ ಮತ್ತು 700 ಬಿಲಿಯನ್ ಬಾಂಡ್ ಖರೀದಿ ಮಾಡಬಹುದಾಗಿದೆ ಘೋಷಿಸಿದೆ.
ವಿಶ್ವದಾದ್ಯಂತ ಕೋವಿಡ್ 19 ವೈರಾಣು 1.56 ಲಕ್ಷ ಜನಕ್ಕೆ ತಗುಲಿದ್ದು, ಸುಮಾರು 5,800 ಜನ ಈಗಾಗಲೇ ಅಸುನೀಗಿದ್ದಾರೆ. ಅಮೆರಿಕದಲ್ಲಿ ಮೃತರ ಸಂಖ್ಯೆ 68ಕ್ಕೆ ತಲುಪಿದ್ದು, ಸೋಂಕಿತರ ಸಂಖ್ಯೆ 3,700 ಜನ ಇದ್ದಾರೆ.
ದೇಶದ ವಿಜ್ಞಾನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಔಷಧ ಕಂಪನಿಗಳು ಜಗತಿನಾದ್ಯಂತ ಹಬ್ಬುತ್ತಿರುವ ಕೊರೊನಾ ವಿರುದ್ಧ ಸೆಣಸಾಡಲು ಒಗ್ಗೂಡಿ ಲಸಿಕೆ ಕಂಡುಹಿಡಲು ಅವಿರತ ಪ್ರಯತ್ನ ಪಡುತ್ತಿದ್ದಾರೆ.
ಫೆಡರಲ್ ರಿಸರ್ವ್ ಭಾನುವಾರ ಪ್ರಮುಖ ಬಡ್ಡಿ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿತು. ಕೊರೊನಾ ವೈರಸ್ನಿಂದ ಆರ್ಥಿಕತೆ ಮೇಲೆ ಉಂಟಾದ ಪ್ರಭಾವ ತಗ್ಗಿಸಲು ಖಜಾನೆ ಮತ್ತು ಅಡಮಾನ ಬೆಂಬಲಿತ ಭದ್ರತೆಗೆ 700 ಬಿಲಿಯನ್ ಡಾಲರ್ ಖರೀದಿಸಿದೆ.
ಕೋವಿಡ್ 19 ಏಕಾಏಕಿ ಜಾಗತಿಕ ಸಮುದಾಯಗಳಿಗೆ ಹಾನಿಯನ್ನುಂಟುಮಾಡಿದೆ ಮತ್ತು ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ.