ಕರ್ನಾಟಕ

karnataka

ETV Bharat / business

ಸಮರ್ಥನೀಯವಲ್ಲದ ಈಗಿನ ಡೇಟಾ, ಕರೆ ದರಗಳನ್ನು ಹೆಚ್ಚಿಸಬೇಕು: ಏರ್​ಟೆಲ್​ ಸಿಇಒ

ಕಂಪನಿಯ ಎರಡನೇ ತ್ರೈಮಾಸಿಕ ಗಳಿಕೆ ವರದಿ ಬಳಿಕದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಸಿಇಒ ಗೋಪಾಲ್ ವಿಠ್ಠಲ್ ಅವರು, ಸುಂಕ ಹೆಚ್ಚಳಕ್ಕೆ ಯಾವುದೇ ಗಡುವು ನೀಡಲಿಲ್ಲ. ಆದರೆ, ಭವಿಷ್ಯದಲ್ಲಿ ಬೆಲೆ ಏರಿಕೆಯ ಬಗ್ಗೆ ವಿಶ್ವಾಸವಿದೆ. ಟೆಲಿಕಾಂ ಕಂಪನಿಗಳು ಪ್ರತಿ ಬಳಕೆದಾರರಿಗೆ ಸರಾಸರಿ (ಎಆರ್​​ಪಿಯು- ಅರ್ಪು) 200 ಮತ್ತು 300 ರೂ. ಗಳಿಸುವ ಗುರಿ ಹೊಂದಿದೆ ಎಂದರು.

tariff
ಡೇಟಾ

By

Published : Oct 28, 2020, 7:04 PM IST

ನವದೆಹಲಿ: ಪ್ರಸ್ತುತ ಸುಂಕದ ಮಟ್ಟವು ಸಮರ್ಥನೀಯವಲ್ಲದ ಕಾರಣ ಡೇಟಾ ಮತ್ತು ಕರೆ ಸೇವೆಗಳ ಬೆಲೆಗಳನ್ನು ಹೆಚ್ಚಿಸಬೇಕಾಗಿದೆ ಎಂದು ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ಗೋಪಾಲ್ ವಿಠ್ಠಲ್ ಪ್ರತಿಪಾದಿಸಿದ್ದಾರೆ.

ಕಂಪನಿಯ ತ್ರೈಮಾಸಿಕ ಗಳಿಕೆ ವರದಿ ಘೋಷಣೆ ಬಳಿಕದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಂಕ ಹೆಚ್ಚಳಕ್ಕೆ ಯಾವುದೇ ಗಡುವು ನೀಡಲಿಲ್ಲ. ಆದರೆ, ಭವಿಷ್ಯದಲ್ಲಿ ಬೆಲೆ ಏರಿಕೆಯ ಬಗ್ಗೆ ವಿಶ್ವಾಸವಿದೆ. ಟೆಲಿಕಾಂ ಕಂಪನಿಗಳು ಪ್ರತಿ ಬಳಕೆದಾರರಿಗೆ ಸರಾಸರಿ (ಎಆರ್​​ಪಿಯು- ಅರ್ಪು) 200 ಮತ್ತು 300 ರೂ. ಗಳಿಸುವ ಗುರಿ ಹೊಂದಿದೆ ಎಂದರು.

ನಾವು ಪ್ರೀಮಿಯಂನಲ್ಲಿದ್ದೇವೆ (ಸುಂಕ ಹೆಚ್ಚಳ ಸಂಬಂಧಿತ). ಟೆಲಿಕಾಂ ಜಾಗದಲ್ಲಿ ನೀವು ಪ್ರೀಮಿಯಂ ಹೊಂದಬಹುದು. ಆದರೆ, ಒಂದು ಹಂತದ ನಂತರ ಅದು ಸಮರ್ಥನೀಯವಲ್ಲ. ನಮ್ಮ ಬೆಳವಣಿಗೆಯನ್ನು ನಿಧಾನಗೊಳಿಸಲು ನಾವು ಬಯಸುವುದಿಲ್ಲ ಎಂದು ತಿಳಿಸಿದರು.

ಟೆಲಿಕಾಂ ಆಪರೇಟರ್ ಗುಣಮಟ್ಟದ 4ಜಿ ಗ್ರಾಹಕರಿಗೆ ಸೇವೆ ನೀಡುವುದರತ್ತ ಗಮನ ಹರಿಸುತ್ತೇವೆ. ಏರ್‌ಟೆಲ್ 4ಜಿ ಬಳಕೆದಾರರ ಸಂಖ್ಯೆಯಲ್ಲಿ 14.4 ಮಿಲಿಯನ್ ಅನುಕ್ರಮ ಬೆಳವಣಿಗೆಯನ್ನು 152.7 ಮಿಲಿಯನ್‌ಗೆ ದಾಖಲಿಸಿದೆ. ಇದು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ ಶೇ 48ರಷ್ಟು ಹೆಚ್ಚಾಗಿದೆ ಎಂದರು.

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 4ಜಿ ನಿವ್ವಳ ಸೇರ್ಪಡೆ ಪಾಲು ಹೊಂದಿರುವ, 4ಜಿ ಡೇಟಾ ಗ್ರಾಹಕರು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 48.1ರಷ್ಟರಿಂದ 152.7 ಮಿಲಿಯನ್‌ಗೆ ಏರಿಕೆ ಆಗಿದೆ. ದಟ್ಟಣೆಯು ಪಿಬಿ (ಪೆಟಾಬೈಟ್) / ದಿನಕ್ಕೆ 48.9 ಪಿಬಿಯಿಂದ 77.3 ಪಿಬಿಗೆ ಹೆಚ್ಚಳವಾಗಿದೆ (ವರ್ಷದಿಂದ ವರ್ಷಕ್ಕೆ).

ABOUT THE AUTHOR

...view details