ಕರ್ನಾಟಕ

karnataka

ETV Bharat / business

ಬೇಸಾಯಕ್ಕೆ 'ಬ್ರಾಂಡ್ ಇಂಡಿಯಾ' ಲೇಪನ: ಏಕರೂಪ 'ಕೃಷಿ ಆರ್ಥಿಕ ಕಾಯ್ದೆ'ಗೆ ಮೋದಿ ಚಿಂತನೆ..! - ಕೃಷಿ ಕ್ಷೇತ್ರ

ಬೇಸಾಯದ ಆರ್ಥಿಕತೆಯಲ್ಲಿ ಬಂಡವಾಳ ಮತ್ತು ತಂತ್ರಜ್ಞಾನ ತುಂಬುವ ಕೃಷಿಗೆ ಹೊಸ ಮಾರ್ಗಗಳನ್ನು ಸುಗಮಗೊಳಿಸಲು ದೇಶದಲ್ಲಿ ಏಕರೂಪದ ಶಾಸನಬದ್ಧ ಚೌಕಟ್ಟಿನ ಸಾಧ್ಯತೆಗಳ ಬಗ್ಗೆ ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಮಾದರಿ ಕೃಷಿ ಭೂ ಗುತ್ತಿಗೆ ಕಾಯ್ದೆ, 2016ರ ಸವಾಲು ಹಾಗೂ ಸಣ್ಣ ಮತ್ತು ಕಿರು ರೈತರ ಹಿತಾಸಕ್ತಿಯನ್ನು ಹೇಗೆ ಕಾಪಾಡುವುದು ಎಂಬುದರ ಬಗ್ಗೆ ವಿವರವಾಗಿ ಚರ್ಚಿಸಿದರು.

Prime Minister Narendra Modi
ಪ್ರಧಾನಿ ಮೋದಿ

By

Published : May 2, 2020, 7:44 PM IST

ನವದೆಹಲಿ: ಕೊರೊನಾ ವೈರಸ್ ಪ್ರೇರಿತ ಲಾಕ್‌ಡೌನ್ ನಡುವೆ ಕೃಷಿ ಮಾರುಕಟ್ಟೆ, ರೈತರಿಗೆ ಸಾಂಸ್ಥಿಕ ಸಾಲ ನೀಡಿಕೆ ಮತ್ತು ವಿವಿಧ ನಿರ್ಬಂಧಗಳ ನಡುವೆಯೂ ಲಭ್ಯ ಕಾನೂನಿನಡಿ ಸೂಕ್ತ ಬೆಂಬಲ ನೀಡಿ ಕೃಷಿ ಕ್ಷೇತ್ರ ಸುಧಾರಿಸುವ ಮಾರ್ಗಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚರ್ಚಿಸಿದರು.

ಕೋವಿಡ್​-19ನ ಲಾಕ್‌ಡೌನ್ ಹೊರತಾಗಿಯೂ ಕೃಷಿ ಕ್ಷೇತ್ರ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇತರ ಕ್ಷೇತ್ರಗಳಂತೆ ಕೃಷಿ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹೇಳಿದೆ.

ಜೈವಿಕ ತಂತ್ರಜ್ಞಾನದ ಬೆಳವಣಿಗೆ, ಉತ್ಪಾದಕತೆ ವರ್ಧನೆ ಮತ್ತು ಉತ್ಪಾದಕ ವೆಚ್ಚವನ್ನು ಕಡಿಮೆ ಮಾಡುವುದರ ಸಾಧಕ- ಬಾಧಕಗಳ ಬಗ್ಗೆ ಚರ್ಚಿಸಲಾಗಿದೆ. ಈಗ ಚಾಲ್ತಿಯಲ್ಲಿರುವ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾರ್ಯತಂತ್ರದ ಮುಖೇನ ಮಧ್ಯಸ್ಥಿಕೆ ಮತ್ತು ತ್ವರಿತ ಕೃಷಿ ಅಭಿವೃದ್ಧಿಯ ಸೂಕ್ತ ಸುಧಾರಣೆಗಳು ತರುವ ಬಗ್ಗೆಯೂ ಸಭೆ ಗಮನಹರಿಸಿತು.

ಕೃಷಿಯ ಸೌಕರ್ಯಗಳನ್ನು ಬಲಪಡಿಸಲು ರಿಯಾಯಿತಿ ಸಾಲದ ಹರಿವು, ಪಿಎಂ ಕಿಸಾನ್ ಫಲಾನುಭವಿಗಳಿಗೆ ವಿಶೇಷ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ರೈತರಿಗೆ ಲಾಭ ದೊರಕುವಂತೆ ಮಾಡಲು ಅಂತರ್​ರಾಜ್ಯ ವ್ಯಾಪಾರದ ಬಗ್ಗೆ ಮಾತನಾಡಿದ್ದಾರೆ.

ಬೇಸಾಯದ ಆರ್ಥಿಕತೆಯಲ್ಲಿ ಬಂಡವಾಳ ಮತ್ತು ತಂತ್ರಜ್ಞಾನ ತುಂಬುವ ಕೃಷಿಗೆ ಹೊಸ ಮಾರ್ಗಗಳನ್ನು ಸುಗಮಗೊಳಿಸಲು ದೇಶದಲ್ಲಿ ಏಕರೂಪದ ಶಾಸನಬದ್ಧ ಚೌಕಟ್ಟಿನ ಸಾಧ್ಯತೆಗಳ ಬಗ್ಗೆ ಪ್ರಸ್ತಾಪಿಸಲಾಯಿತು. ಮಾದರಿ ಕೃಷಿ ಭೂ ಗುತ್ತಿಗೆ ಕಾಯ್ದೆ, 2016ರ ಸವಾಲು ಹಾಗೂ ಸಣ್ಣ ಮತ್ತು ಕಿರು ರೈತರ ಹಿತಾಸಕ್ತಿಯನ್ನು ಹೇಗೆ ಕಾಪಾಡುವುದು ಎಂಬುದರ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

ಅಗತ್ಯ ಸರಕುಗಳ ಕಾಯ್ದೆಯನ್ನು ಪ್ರಸ್ತುತ ಕಾಲಕ್ಕೆ ಹೊಂದಿಕೆ ಆಗುವಂತೆ ಮಾಡಿದರೇ ಉತ್ಪಾದನೆಯ ಬಳಿಕ ಕೃಷಿ ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುತ್ತದೆ. ಸರಕು ಉತ್ಪನ್ನ ಮಾರುಕಟ್ಟೆಗಳ ಮೇಲೆ ಅದು ಹೇಗೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾತುಕತೆ ನಡೆಸಿದರು.

ಬ್ರಾಂಡ್ ಇಂಡಿಯಾ ಅಭಿವೃದ್ಧಿ, ಸರಕು ನಿರ್ದಿಷ್ಟ ಮಂಡಳಿಗಳ ರಚನೆ ಮತ್ತು ಕೃಷಿ ಸಮೂಹಗಳ ಪ್ರಚಾರ, ಕೃಷಿ ಸರಕು ರಫ್ತು ಹೆಚ್ಚಿಸಲು ಕೆಲವು ಮಧ್ಯಸ್ಥಿಕೆದಾರರ ನೆರವಿನ ಬಗ್ಗೆಯೂ ಚಿಂತನೆ ನಡೆಸಲಾಯಿತು.

ಕೃಷಿಯ ಕೊನೆಯ ಮೈಲಿಗೂ ತಂತ್ರಜ್ಞಾನ ತಲುಪುವಂತೆ ಮಾಡುವುದು. ಜಾಗತಿಕ ಮೌಲ್ಯ ಸರಪಳಿಯಲ್ಲಿ ರೈತರನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಬೇಕು. ಆರ್ಥಿಕತೆಯಲ್ಲಿ ಕೃಷಿಯಿಂದ ಚೈತನ್ಯವನ್ನು ಬರಲು ವ್ಯಾಪಾರದಲ್ಲಿ ಪಾರದರ್ಶಕತೆ ಮತ್ತು ರೈತರಿಗೆ ಗರಿಷ್ಠ ಲಾಭ ತಂದುಕೊಡಬೇಕು. ಇದಕ್ಕಾಗಿ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಪಾತ್ರವನ್ನು ಇನ್ನಷ್ಟು ಬಲಪಡಿಸಬೇಕಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ABOUT THE AUTHOR

...view details