ನವದೆಹಲಿ :ಎರಡು ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಮುದ್ರಣ ನಿಲ್ಲಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹಣಕಾಸು ಸಚಿವಾಲಯ ಶನಿವಾರ ಲೋಕಸಭೆಗೆ ತಿಳಿಸಿದೆ. ಲಿಖಿತ ಉತ್ತರ ನೀಡಿದ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್, ನಿರ್ದಿಷ್ಟ ವರ್ಗದ ಬ್ಯಾಂಕ್ ನೋಟುಗಳ ಮುದ್ರಣವನ್ನು ಆರ್‌ಬಿಐಯೊಂದಿಗೆ ಸಮಾಲೋಚಿಸಿ ಸಾರ್ವಜನಿಕರ ವಹಿವಾಟಿನ ಬೇಡಿಕೆಗೆ ಅನುಕೂಲವಾಗುವಂತೆ ಅಪೇಕ್ಷಿತ ವರ್ಗದ ಮಿಶ್ರಣ ಕಾಪಾಡಿಕೊಳ್ಳಲು ಸರ್ಕಾರ ನಿರ್ಧರಿಸುತ್ತದೆ ಎಂದರು.
2000 ರೂ. ನೋಟು ಮುದ್ರಣ ಸ್ಥಗಿತಗೊಳಿಸಲ್ಲ.. ಸಚಿವ ಅನುರಾಗ್ ಠಾಗೂರ್ ಸ್ಪಷ್ಟನೆ - 2000 ರೂಪಾಯಿ ನೋಟು
2019ರ ಮಾರ್ಚ್ 31ರಂದು 32,910 ಲಕ್ಷ ನೋಟುಗಳಿಗೆ ಹೋಲಿಸಿದ್ರೆ 2020ರ ಮಾರ್ಚ್ 31ರ ವೇಳೆಗೆ 2,000 ರೂ. ನೋಟುಗಳ 27,398 ಲಕ್ಷದಷ್ಟು ಚಲಾವಣೆಯಲ್ಲಿವೆ ಎಂದು ಮಾಹಿತಿ ನೀಡಿದರು..
2019-20 ಮತ್ತು 2020-21ರ ಅವಧಿಯಲ್ಲಿ 2,000 ರೂ. ಮುಖಬೆಲೆಯ ನೋಟು ಮುದ್ರಿಸಲು ಮುದ್ರಣಾಲಯಗಳೊಂದಿಗೆ ಯಾವುದೇ ಇಂಡೆಂಟ್ ಇರಿಸಲಾಗಿಲ್ಲ. 2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲಿಸುವ ಯಾವುದೇ ನಿರ್ಧಾರ ಸರ್ಕಾರದ ಮುಂದೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. 2019ರ ಮಾರ್ಚ್ 31ರಂದು 32,910 ಲಕ್ಷ ನೋಟುಗಳಿಗೆ ಹೋಲಿಸಿದ್ರೆ 2020ರ ಮಾರ್ಚ್ 31ರ ವೇಳೆಗೆ 2,000 ರೂ. ನೋಟುಗಳ 27,398 ಲಕ್ಷದಷ್ಟು ಚಲಾವಣೆಯಲ್ಲಿವೆ ಎಂದು ಮಾಹಿತಿ ನೀಡಿದರು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ವಿಧಿಸಿದ್ದ ಲಾಕ್ಡೌನ್ನಿಂದ ನೋಟುಗಳ ಮುದ್ರಣ ತಾತ್ಕಾಲಿಕವಾಗಿ ನಿಂತು ಹೋಗಿದೆ ಎಂದು ಆರ್‌ಬಿಐ ತಿಳಿಸಿದೆ. ಕೇಂದ್ರ/ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ನೋಟ್ ಪ್ರಿಂಟಿಂಗ್ ಪ್ರೆಸ್ಗಳು ಹಂತ-ಹಂತವಾಗಿ ಉತ್ಪಾದನೆ ಪುನಾರಂಭಿಸಿವೆ ಎಂದರು.