ಕರ್ನಾಟಕ

karnataka

ETV Bharat / business

ಜನಸಾಮಾನ್ಯರ ಮುದ್ರಾ ಸಾಲ ಯೋಜನೆಯಲ್ಲಿ 17,251 ಕೋಟಿ ರೂ. ಬ್ಯಾಡ್​ ಲೋನ್​..!

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಉದ್ಯಮಶೀಲತೆ ಉತ್ತೇಜಿಸಲು ₹10 ಲಕ್ಷದವರೆಗೆ ಸಾಲ ನೀಡುವ ಮುದ್ರಾ ಯೋಜನೆಗೆ ಪ್ರಧಾನಿ ಮೋದಿ ಅವರು 2015ರ ಅಕ್ಟೋಬರ್​ 8ರಂದು ಚಾಲನೆ ನೀಡಿದ್ದರು. 2019ರ ಮಾರ್ಚ್​ವರೆಗೆ ಒಟ್ಟು 6.04 ಲಕ್ಷ ಕೋಟಿ ರೂ. ಸಾಲ ವಿತರಣೆಯಾಗಿದ್ದು, ಇದರಲ್ಲಿ 17,251.52 ಕೋಟಿ ರೂ. ವಸೂಲಾಗದ ಸಾಲವಿದೆ.

By

Published : Dec 3, 2019, 5:13 PM IST

Mudra loans
ಮುದ್ರಾ

ನವದೆಹಲಿ:ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿ ವಿತರಣೆಯಾದ ಒಟ್ಟು ₹ 6.04 ಲಕ್ಷ ಕೋಟಿ ಸಾಲದಲ್ಲಿ ಶೇ. 3ರಷ್ಟು ವಸೂಲಾಗದ ಸಾಲ ಇದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಉದ್ಯಮಶೀಲತೆ ಉತ್ತೇಜಿಸಲು ₹10 ಲಕ್ಷದವರೆಗೆ ಸಾಲ ನೀಡುವ ಮುದ್ರಾ ಯೋಜನೆಗೆ ಪ್ರಧಾನಿ ಮೋದಿ ಅವರು 2015ರ ಅಕ್ಟೋಬರ್​ 8ರಂದು ಚಾಲನೆ ನೀಡಿದ್ದರು.

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್​, ಸಾಲದ ಅರ್ಜಿಗಳ ತಿರಸ್ಕಾರ, ಮರುಪಾವತಿ ಸಮಯದ ವಿಳಂಬ (ಟಿಎಟಿ) ಮತ್ತು ಸಾಲದಾತರ ಒತ್ತಡ ಸೇರಿ ಪಿಎಂಎಂವೈ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಆಯಾ ಬ್ಯಾಂಕ್​ಗಳು ಸಮನ್ವಯವಾಗಿ ಪರಿಹರಿಸುತ್ತಿವೆ ಎಂದರು.

ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ (ಎಸ್‌ಸಿಬಿ) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳು (ಆರ್‌ಆರ್‌ಬಿ) ಪಿಎಂಎಂವೈ ಯೋಜನೆಯ ಆರಂಭದಿಂದ 2019ರ ಮಾರ್ಚ್‌ವರೆಗೆ ಒಟ್ಟು 6.04 ಲಕ್ಷ ಕೋಟಿ ರೂ. ಸಾಲ ವಿತರಣೆಯಾಗಿದೆ. ಇದರಲ್ಲಿ 17,251.52 ಕೋಟಿ ರೂ. ಶೇ. 2.86ರಷ್ಟು ವಸೂಲಾಗದ ಸಾಲವಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details