ನವದೆಹಲಿ:ಮುಂದಿನ ಎರಡು ದಶಕಗಳಲ್ಲಿ ವಿಶ್ವದ ಅಗ್ರ ಮೂರು ಆರ್ಥಿಕತೆ ರಾಷ್ಟ್ರಗಳಲ್ಲಿ ಭಾರತವು ಒಂದಾಗಿ ಬೆಳೆಯಲಿದೆ ಮತ್ತು ತಲಾ ಆದಾಯ ದ್ವಿಗುಣಗೊಳ್ಳಲಿದೆ ಎಂದು ಭಾರತೀಯ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹೇಳಿದ್ದಾರೆ.
ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಅವರೊಂದಿಗಿ ಫೈರ್‌ಸೈಡ್ ಚಾಟ್‌ನಲ್ಲಿ ಮಾತನಾಡಿದ ಅವರು, ದೇಶದ ಒಟ್ಟು ಕುಟುಂಬಗಳ ಪೈಕಿ ಶೇ 50ರಷ್ಟು ಮಧ್ಯಮ ವರ್ಗದ ಕುಟುಂಬಗಳಿವೆ. ಇವುಗಳು ವಾರ್ಷಿಕ ಮೂರರಿಂದ ನಾಲ್ಕು ಪ್ರತಿಶತದಲ್ಲಿ ಬೆಳವಣಿಗೆ ಕಾಣುತ್ತಿವೆ ಎಂದರು.
ಓದಿ: ಕಲಬುರಗಿಯಿಂದ ತಿರುಪತಿಗೆ ವಿಮಾನಯಾನ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್
ಮುಂದಿನ ಎರಡು ದಶಕಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿ ಬೆಳೆಯಲಿದೆ ಎಂಬುದನ್ನು ನಾನು ದೃಢವಾಗಿ ನಂಬುತ್ತೇನೆ. ಅದಕ್ಕಿಂತ ಮುಖ್ಯವಾಗಿ ಪ್ರಸ್ತುತ ಡಿಜಿಟಲ್ ಸಮಾಜವಾಗಿ ಪರಿಣಮಿಸುತ್ತಿದ್ದು, ಯುವಕರು ಇದರ ಚಾಲಕ ಶಕ್ತಿಯಾಗಿದ್ದಾರೆ. ನಮ್ಮ ತಲಾ ಆದಾಯವು 1,800-2,000 ಡಾಲರ್ಗಳಿಂದ 5,000 ಡಾಲರ್ಗೆ ತಲುಪಲಿದೆ ಎಂದು ಹೇಳಿದರು.
ಮುಂಬರುವ ದಶಕಗಳಲ್ಲಿ ವೇಗವಾಗಿ ವೃದ್ಧಿಯಾಗಲಿರುವ ಈ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯ ಭಾಗವಾಗಲು ಫೇಸ್‌ಬುಕ್ ಮತ್ತು ವಿಶ್ವದ ಇತರ ಹಲವು ಕಂಪನಿ ಹಾಗೂ ಉದ್ಯಮಿಗಳು ಭಾರತದಲ್ಲಿ ಇರುವುದು ಒಂದು ಸುವರ್ಣಾವಕಾಶ ಎಂದು ಮುಖೇಶ್ ಅಭಿಪ್ರಾಯಪಟ್ಟರು.