ನವದೆಹಲಿ:ಕೋವಿಡ್-19 ಸಾಂಕ್ರಾಮಿಕ ರೋಗದ ಬಳಿಕ ಚೀನಾದಿಂದ ಜಾಗತಿಕ ಪೂರೈಕೆ ಸರಪಳಿಗಳು ಬೇರೆ ರಾಷ್ಟ್ರಗಳ ಆರ್ಥಿಕತೆಗಳೊಂದಿಗೆ ಬದಲಾಗುವುದರಿಂದ ಭಾರತಕ್ಕೆ ಹೆಚ್ಚಿನ ಲಾಭ ಆಗಬಹುದು ಎಂದು ಸಮೀಕ್ಷೆಯೊಂದು ತಿಳಿಸಿದೆ.
ಈ ತಿಂಗಳು ಫಿಕ್ಕಿ-ಧ್ರುವ ಸಲಹೆಗಾರರು ಭಾರತದ 150ಕ್ಕೂ ಹೆಚ್ಚು ಕಂಪನಿಗಳನ್ನು ಒಳಗೊಂಡು ಸಮೀಕ್ಷೆ ನಡೆಸಿದ್ದಾರೆ.
ಕೋವಿಡ್-19ನ ಮತ್ತೊಂದು ಪ್ರಮುಖ ಫಲಿತಾಂಶವೆಂದರೆ ಜಾಗತಿಕ ಪೂರೈಕೆ ಸರಪಳಿಗಳು ಚೀನಾದಿಂದ ಇತರ ಆರ್ಥಿಕತೆಗಳಿಗೆ ಬದಲಾಗುವ ಸಾಧ್ಯತೆ ಇದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಸುಮಾರು 70 ಪ್ರತಿಶತದಷ್ಟು ಜನರು, ಇದರಿಂದ ಭಾರತವು ಹೆಚ್ಚಿನ ಪ್ರಯೋಜನ ಪಡೆಯಬಹುದೆಂದು ಹೇಳಿದ್ದಾರೆ. ಉತ್ಪಾದನೆಯ ನ್ಯಾಯಯುತ ಪಾಲು ಬದಲಾಗಬಹುದೆಂಬ ನಿರೀಕ್ಷೆಯಿಂದ ಮುಂದಿನ ದಿನಗಳಲ್ಲಿ ಚೀನಾದಿಂದ ಭಾರತಕ್ಕೆ ಸ್ಥಳಾಂತರ ಆಗಬಹುದು ಎಂದು ಫಿಕ್ಕಿ ಹೇಳಿದೆ.
ಮುಂದಿನ ವರ್ಷದ ಆರಂಭದಲ್ಲಿ ಕೋವಿಡ್-19 ಲಸಿಕೆ ಪರಿಚಯಿಸುವ ನಿರೀಕ್ಷೆಯು ವಹಿವಾಟುಗಳ ವಿಶ್ವಾಸಾರ್ಹ ಮಟ್ಟ ಸುಧಾರಿಸಿದೆ. ಸುಮಾರು 74 ಪ್ರತಿಶತದಷ್ಟು ಸಂವಾದಿಗಳು, ಲಸಿಕೆ ಲಭ್ಯದ ನಂತರ ತಮ್ಮ ವ್ಯವಹಾರದ ಮೇಲೆ ಮಹತ್ವದ ಸಕಾರಾತ್ಮಕ ಪರಿಣಾಮ ನಿರೀಕ್ಷಿಸುತ್ತಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.