ಕರ್ನಾಟಕ

karnataka

ETV Bharat / business

ಕೊರೊನಾ ಕಂಟಕದ ನಡುವೆ  ಮಾರ್ಚ್​ನಲ್ಲಿ 97 ಸಾವಿರ ಕೋಟಿ ರೂ. ಜಿಎಸ್​ಟಿ ಸಂಗ್ರಹ - ಜಿಎಸ್​ಟಿ ಸಂಗ್ರಹ

ಕಳೆದ ಫೆಬ್ರವರಿಯಲ್ಲಿ ಸಂಗ್ರಹಿಸಿದ ಮೊತ್ತ 1.05 ಲಕ್ಷ ಕೋಟಿ ರೂ.ಯಷ್ಟಿತ್ತು. ಅದಕ್ಕೆ ಹೋಲಿಸಿದರೆ 2,408 ಕೋಟಿ ರೂ.ಯಷ್ಟು ಕೊರತೆ ಕಂಡುಬಂದಿದೆ. ಮಾಸಿಕ 1 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಬೇಕು ಎಂಬ ಕೇಂದ್ರ ಹಣಕಾಸು ಮಹತ್ವಾಕಾಂಕ್ಷೆಗೆ ಹಿನ್ನಡೆಯಾಗಿದೆ.

Goods and Services Tax
ಸರಕು ಮತ್ತು ಸೇವಾ ತೆರಿಗೆ

By

Published : Apr 1, 2020, 6:54 PM IST

ನವದೆಹಲಿ: ಮಾರ್ಚ್‌ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ 97,597 ಕೋಟಿ ರೂ.ನಷ್ಟು ಸಂಗ್ರಹವಾಗಿದೆ.

ಕಳೆದ ಫೆಬ್ರವರಿಯಲ್ಲಿ ಸಂಗ್ರಹಿಸಿದ ಮೊತ್ತ 1.05 ಲಕ್ಷ ಕೋಟಿ ರೂ.ಯಷ್ಟಿತ್ತು. ಅದಕ್ಕೆ ಹೋಲಿಸಿದರೆ 2,408 ಕೋಟಿ ರೂ.ಯಷ್ಟು ಕೊರತೆ ಕಂಡುಬಂದಿದೆ. ಮಾಸಿಕ 1 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಬೇಕು ಎಂಬ ಕೇಂದ್ರ ಹಣಕಾಸು ಮಹತ್ವಾಕಾಂಕ್ಷೆಗೆ ಹಿನ್ನಡೆಯಾಗಿದೆ.

ಒಟ್ಟು 97,597 ಕೋಟಿ ರೂ. ಆದಾಯದಲ್ಲಿ ಕೇಂದ್ರ ಜಿಎಸ್‌ಟಿ 19,183 ಕೋಟಿ ರೂ., ರಾಜ್ಯ ಜಿಎಸ್‌ಟಿ 25,601 ಕೋಟಿ ರೂ. ಮತ್ತು ಸಮಗ್ರ ಜಿಎಸ್‌ಟಿಯನ್ನು 44,508 ಕೋಟಿ ರೂ.ಗಳಷ್ಟಿದೆ. ಇದರಲ್ಲಿ ಆಮದುಗಳ ಮೇಲೆ ಸಂಗ್ರಹಿಸಲಾದ ತೆರಿಗೆ ಮೊತ್ತ 18,056 ಕೋಟಿ ರೂ.ಯಷ್ಟಿದೆ.

2020ರ ಮಾರ್ಚ್ 31ರವರೆಗೆ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ -3 ಬಿ ರಿಟರ್ನ್‌ಗಳ ಸಂಖ್ಯೆ 76.5 ಲಕ್ಷದಷ್ಟಿದೆ.

ABOUT THE AUTHOR

...view details