ಕರ್ನಾಟಕ

karnataka

ETV Bharat / business

ಎನ್​ಐಪಿಎಆರ್ ಪ್ರಗತಿ ಪರಿಶೀಲನಾ ಸಭೆ: ಔಷಧಿ ಮರುಬಳಕೆ, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಿ- ಸದಾನಂದಗೌಡ - ಡಿವಿ ಸದಾನಂದ ಗೌಡ

ಬೃಹತ್ ಔಷಧ ಮತ್ತು ವೈದ್ಯಕೀಯ ಸಾಧನ ಪಾರ್ಕ್​​ಗಳ ಅಭಿವೃದ್ಧಿಯಲ್ಲಿ ಎನ್‍ಐಪಿಇಆರ್​ಗಳು ಮುಖ್ಯ ಪಾತ್ರ ವಹಿಸುತ್ತವೆ. ಕ್ಷಯ, ಮಲೇರಿಯಾ, ಕಾಲಾ ಅಜರ್, ಕ್ಯಾನ್ಸರ್, ಮಧುಮೇಹ, ಬೊಜ್ಜು ಇತರೆ ಕಾಯಿಲೆಗಳಿಗೆ ಔಷಧ ಅನ್ವೇಷಣೆಯತ್ತ ಗಮನ ಹರಿಸಬೇಕು. ಔಷಧ ಮರುಬಳಕೆ ಮತ್ತು ಔಷಧಿ ಅಭಿವೃದ್ಧಿಯ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.

Gowda
ಸದಾನಂದಗೌಡ ಸಲಹೆ

By

Published : Sep 2, 2020, 8:31 PM IST

ನವದೆಹಲಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ಮೊಹಾಲಿ ಮತ್ತು ರಾಯ್​ಬರೇಲಿಯ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಎನ್‍ಐಪಿಇಆರ್) ಕಾರ್ಯವೈಖರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು.

ಬೃಹತ್ ಔಷಧ ಮತ್ತು ವೈದ್ಯಕೀಯ ಸಾಧನ ಪಾರ್ಕ್​​ಗಳ ಅಭಿವೃದ್ಧಿಯಲ್ಲಿ ಎನ್‍ಐಪಿಇಆರ್​ಗಳು ಮುಖ್ಯ ಪಾತ್ರ ವಹಿಸುತ್ತವೆ. ಕ್ಷಯ, ಮಲೇರಿಯಾ, ಕಾಲಾ ಅಜರ್, ಕ್ಯಾನ್ಸರ್, ಮಧುಮೇಹ, ಬೊಜ್ಜು ಇತರೆ ಕಾಯಿಲೆಗಳಿಗೆ ಔಷಧ ಅನ್ವೇಷಣೆಯತ್ತ ಗಮನ ಹರಿಸಬೇಕು. ಔಷಧ ಮರುಬಳಕೆ ಮತ್ತು ಔಷಧಿ ಅಭಿವೃದ್ಧಿಯ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಮೊಹಾಲಿಯಂತಹ ಎನ್‍ಐಪಿಇಆರ್ ತಮ್ಮದೇ ಆದ ಶ್ರೇಷ್ಠತಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕು. ಪರೀಕ್ಷೆ, ಸಲಹೆ ಮತ್ತು ಇನ್ಕುಬೇಷನ್ ಕೇಂದ್ರಗಳಂತಹ ಸೇವೆಗಳನ್ನು ವಿಸ್ತರಿಸುವ ಮೂಲಕ ಉದ್ಯಮಕ್ಕೆ ವಿಶೇಷವಾಗಿ ಎಂಎಸ್‌ಎಂಇ ವಲಯಕ್ಕೆ ಬೆಂಬಲ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.

ಆದಾಯದ ಉತ್ಪಾದನೆಗಿರುವ ಪ್ರತಿಯೊಂದು ಆಯಾಮವನ್ನೂ ಅನ್ವೇಷಿಸಬೇಕು ಮತ್ತು ಎನ್‍ಐಪಿಇಆರ್ ಗಳು ಸ್ವಾವಲಂಬಿ ಸಂಸ್ಥೆಗಳಾಗಿ ಅಭಿವೃದ್ಧಿ ಹೊಂದಬೇಕು. ಉದ್ಯಮ ಅಕಾಡೆಮಿಯಾ ಸಂಪರ್ಕಗಳನ್ನು ಬಲಪಡಿಸಬೇಕು. ಇದರಿಂದ ಎನ್‍ಐಪಿಇಆರ್​ಗಳು ಹೊಂದಿರುವ ಪೇಟೆಂಟ್‌ಗಳ ವ್ಯಾಪಾರೀಕರಿಕರಣದ ಪ್ರಯೋಜನ ಪಡೆಯಬಹುದು ಎಂದು ಸಚಿವರು ತಿಳಿಸಿದರು.

ಜನರ ಯೋಗಕ್ಷೇಮದ ಮೇಲೆ ಉತ್ತಮ ಪರಿಣಾಮ ಬೀರುವ ಸಂಶೋಧನಾ ಕಾರ್ಯಗಳಿಗೆ ಆದ್ಯತೆ ನೀಡಬೇಕು ಮತ್ತು ಚುರುಕುಗೊಳಿಸಬೇಕು ಎಂದು ರಾಸಾಯನಿಕ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.

ಎನ್ಐಪಿಇಆರ್ ಮೊಹಾಲಿಯ ಹೆಚ್ಚುವರಿ ಹೊಣೆಯನ್ನು ಹೊತ್ತಿರುವ ರಾಯ್​ಬರೇಲಿ ಎನ್‍ಐಪಿಇಆರ್ ನಿರ್ದೇಶಕರಾದ ಡಾ.ಎಸ್.ಜೆ.ಎಸ್. ಫ್ಲೋರಾ ಎನ್ಐಪಿಇಆರ್ ಮೊಹಾಲಿ ಮತ್ತು ರಾಯ್ ಬರೇಲಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಂಕ್ಷಿಪ್ತ ಪ್ರಸ್ತುತಿ ನೀಡಿದರು.

ಫಾರ್ಮಸಿ ವಲಯದ ಎನ್‌ಐಆರ್‌ಎಫ್ ನ ಶ್ರೇಯಾಂಕದಲ್ಲಿ ಎನ್ಐಪಿಇಆರ್ ಮೊಹಾಲಿ 3ನೇ ಮತ್ತು ಎನ್ಐಪಿಇಆರ್ ರಾಯ್​ಬರೇಲಿ 18ನೇ ಸ್ಥಾನದಲ್ಲಿವೆ ಎಂದು ಹೇಳಿದರು.

ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ 2020ರ ಸೆಪ್ಟೆಂಬರ್ 28ರಂದು ಎನ್ಐಪಿಇಆರ್ ಜಂಟಿ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುವುದು. ಅಕ್ಟೋಬರ್‌ನಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಬಹುದು ಎಂದು ತಿಳಿಸಿದರು.

ABOUT THE AUTHOR

...view details