ಕರ್ನಾಟಕ

karnataka

ETV Bharat / business

ಭಾರತದ ವಿರುದ್ಧ ಟ್ರಂಪ್‌ ಸರ್ಕಾರದ ಅಪಾಯಕಾರಿ ಹೆಜ್ಜೆ.. - ಸುಂಕ ಕಡಿತ

ಅಮೆರಿಕದ ಉತ್ಪನ್ನಗಳ ಮೇಲೆ ನವದೆಹಲಿ ವಿಧಿಸಿರುವ ಸುಂಕ ದರ 'ಇನ್ನು ಮುಂದೆ ಸ್ವೀಕಾರಾರ್ಹವಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ವ್ಯಾಪಾರ ಉದ್ವಿಗ್ನತೆ ಹೆಚ್ಚಿತ್ತು. ಟ್ರಂಪ್ ಆಡಳಿತವು ಜೂನ್‌ನಲ್ಲಿ ಜಿಎಸ್​ಪಿ ಸ್ಥಾನದಿಂದ ಭಾರತವನ್ನು ಹೊರಗಿಟ್ಟು ಭಾರತದ ಸರಕುಗಳ ಮೇಲೆ ಸುಂಕ ದರ ಏರಿಕೆ ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ಸಹ ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸಿತ್ತು. 'ಪೆಕನ್ ಆಮದಿನ ಮೇಲೆ ಭಾರತ ಪ್ರಸ್ತುತ ವಿಧಿಸುತ್ತಿರುವ ಹೆಚ್ಚಿನ ಸುಂಕ ಅಮೆರಿಕದ ಉತ್ಪಾದಕರಿಗೆ ಅಲ್ಲಿನ ಮಾರುಕಟ್ಟೆಯನ್ನು ಎದುರಿಸುವುದು ಕಷ್ಟಕರವಾಗಿದೆ ಎಂದು ಅಮೆರಿಕ ಕಾಂಗ್ರೆಸ್ಸಿಗರು ಟ್ರಂಪ್​ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 26, 2019, 7:44 PM IST

ವಾಷಿಂಗ್ಟನ್​: ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದಗಳು ಮಾತುಕತೆಯ ಹಂತದಲ್ಲಿ ಇರುವಾಗಲೇ ಪೆಕನ್ ಮೇಲೆ ಭಾರತ ಸುಂಕ ದರ ಕಡಿತಗೊಳಿಸಲು ಕೋರುವಂತೆ ಅಮೆರಿಕದ 34 ಕಾಂಗ್ರೆಸ್ಸಿಗರು ಅಮೆರಿಕ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಜೈಜರ್‌ಗೆ ಪತ್ರ ಬರೆದಿದ್ದಾರೆ.

ವ್ಯಾಪಾರ ಒಪ್ಪಂದದ ಕುರಿತು ಭಾರತ ಮತ್ತು ಅಮೆರಿಕ ನಡುವೆ ಮಾತುಕತೆಯು ಪ್ರಗತಿಯ ಹಂತದಲ್ಲಿವೆ. ಶೀಘ್ರದಲ್ಲೇ ತೀರ್ಮಾನಕ್ಕೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕಳೆದ ವಾರ ಭರವಸೆ ವ್ಯಕ್ತಪಡಿಸಿದ್ದರು.

ಅಮೆರಿಕದ ಉತ್ಪನ್ನಗಳ ಮೇಲೆ ನವದೆಹಲಿ ವಿಧಿಸಿರುವ ಸುಂಕ ದರ 'ಇನ್ನು ಮುಂದೆ ಸ್ವೀಕಾರಾರ್ಹವಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ವ್ಯಾಪಾರ ಉದ್ವಿಗ್ನತೆ ಹೆಚ್ಚಿತ್ತು. ಟ್ರಂಪ್ ಆಡಳಿತವು ಜೂನ್‌ನಲ್ಲಿ ಸಾಮಾನ್ಯ ಆದ್ಯತಾ ಕಾರ್ಯಕ್ರಮ (ಜಿಎಸ್​ಪಿ) ಸ್ಥಾನದಿಂದ ಭಾರತವನ್ನು ಹೊರಗಿಟ್ಟಿತ್ತು. ಜೊತೆಗೆ ಭಾರತದ ಸರಕುಗಳ ಮೇಲೆ ಸುಂಕ ದರ ಏರಿಕೆ ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ಸಹ ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸಿತ್ತು.

ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ವರ್ಗವು ಮರದ ಕಾಯಿಗಳಂತೆ ಗ್ರಾಹಕ ಆಧಾರಿತ ಕೃಷಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಭಾರತೀಯ ಮಾರುಕಟ್ಟೆಯು ವಿಶ್ವದ ಅತ್ಯಂತ ಕ್ರಿಯಾತ್ಮಕ ಮತ್ತು ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ ಎಂದು ಕಾಂಗ್ರೆಸ್ ಸದಸ್ಯ ಆಸ್ಟಿನ್ ಸ್ಕಾಟ್ ನೇತೃತ್ವದ ಪತ್ರದಲ್ಲಿದೆ.

ದುರದೃಷ್ಟವಶಾತ್ ಪೆಕನ್ ಆಮದಿನ ಮೇಲೆ ಭಾರತ ಪ್ರಸ್ತುತ ವಿಧಿಸುತ್ತಿರುವ ಹೆಚ್ಚಿನ ಸುಂಕ (ಶೇ.36) ಅಮೆರಿಕದ ಉತ್ಪಾದಕರಿಗೆ ಅಲ್ಲಿನ ಮಾರುಕಟ್ಟೆಯನ್ನು ಎದುರಿಸುವುದು ಕಷ್ಟಕರವಾಗಿದೆ. ಹೀಗಾಗಿ, ಭಾರತ ಪೆಕನ್ ಮೇಲಿನ ಸುಂಕ ಇಳಿಸುವಂತೆ ಅಮೆರಿಕ ಒಪ್ಪಂದ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details