ಕರ್ನಾಟಕ

karnataka

ETV Bharat / business

ಬ್ಯಾಂಕ್ ಫ್ರಾಡ್​ಗಿಲ್ಲ ಮೂಗುದಾರ... ಒಂದೇ ವರ್ಷದಲ್ಲಿ 71 ಸಾವಿರ ಕೋಟಿ ರೂ. ದಾಟಿದ ವಂಚನೆ

ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ) ನೀಡಿರುವ ವರದಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್​ಗಳಿಗೆ ವಂಚನೆಯ ಪ್ರಮಾಣ ಶೇ 15ರಷ್ಟು ಹೆಚ್ಚಳವಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು ₹ 71,542.93 ಕೋಟಿ ವಂಚನೆ ಆಗಿರುವುದು ಕಂಡುಬಂದಿದೆ.

By

Published : Aug 29, 2019, 10:29 PM IST

ಸಾಂದರ್ಭಿಕ ಚಿತ್ರ

ಮುಂಬೈ:ಬ್ಯಾಂಕ್​ಗಳಿಂದ ಪಡೆದ ಸಾಲವನ್ನು ಮರುಪಾವತಿಸಿದ ವಂಚಿಸಿದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಭಾರತೀಯ ರಿಸರ್ವ್​ ಬ್ಯಾಂಕ್ ನೀಡಿರುವ ವರದಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್​ಗಳಿಗೆ ವಂಚನೆಯ ಪ್ರಮಾಣ ಶೇ 15ರಷ್ಟು ಹೆಚ್ಚಳವಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು ₹ 71,542.93 ಕೋಟಿ ವಂಚನೆ ಆಗಿರುವುದು ಕಂಡುಬಂದಿದೆ.

ಕಳೆದ ವರ್ಷದ 2017-18ನೇ ಸಾಲಿನಲ್ಲಿ ₹ 41,167.04 ಕೋಟಿ ವಂಚನೆ ನಡೆದಿತ್ತು. ಆದರೆ, ಈ ವರ್ಷದ ಹೆಚ್ಚುವರಿಯಾಗಿ ₹ 30,000 ಕೋಟಿ ನಷ್ಟ ಉಂಟಾಗಿದೆ. ವಂಚನೆಯಾಗಿರುವ ಬಹುಪಾಲು ಹಣ ಸಾಲದ ರೂಪದಲ್ಲಿದ್ದು, ಒಟ್ಟು 6,801 ಬ್ಯಾಂಕ್‌ ವಂಚನೆಯ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 5,916 ಬ್ಯಾಂಕ್‌ ವಂಚನೆ ಪ್ರಕರಣಗಳಿದ್ದವು. ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಲ್ಲಿ 3,766 ಪ್ರಕರಣಗಳಿಂದ ಒಟ್ಟು ₹ 64,509.43 ಕೋಟಿ ವಂಚನೆಯಾಗಿದೆ.

ABOUT THE AUTHOR

...view details