ಕರ್ನಾಟಕ

karnataka

ETV Bharat / business

ಪ್ರಯಾಣಿಕರ ಗಮನಕ್ಕೆ! ಎಲ್ಲ ಕಾರುಗಳಿಗೆ ಏರ್​ಬ್ಯಾಗ್ ಅಳವಡಿಕೆ ಕಡ್ಡಾಯ

ಪ್ರಯಾಣಿಕರ ಆಸನಕ್ಕೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಸರ್ಕಾರದ ಪ್ರಸ್ತಾವನೆಗೆ ವಾಹನ ಮಾನದಂಡಗಳ ಉನ್ನತ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿದೆ. ವಾಹನಗಳಲ್ಲಿನ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ವ್ಯವಹರಿಸುವ ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್​ಗೆ (ಎಐಎಸ್) ತಿದ್ದುಪಡಿ ತರಲು ಸರ್ಕಾರ ಕರಡು ಅಧಿಸೂಚನೆ ಮುಂದಿಟ್ಟಿದೆ.

By

Published : Dec 18, 2020, 10:42 PM IST

Airbags
ಏರ್​ಬ್ಯಾಗ್

ನವದೆಹಲಿ:ಎಕನಾಮಿ ಮಾಡಲ್ ಸೇರಿದಂತೆ ಎಲ್ಲ ಕಾರುಗಳಿಗೆ ಮುಂಭಾಗದ ಆಸನಗಳ ಪ್ರಯಾಣಿಕರ ಬದಿಯಲ್ಲಿ ಏರ್‌ಬ್ಯಾಗ್‌ಗಳ ಅಳವಡಿಕೆ ಕಡ್ಡಾಯಗೊಳಿಸುವುದಾಗಿ ಸರ್ಕಾರ ಪ್ರಕಟಿಸಿದೆ.

ಈ ಹಿಂದೆ ಎಲ್ಲ ಕಾರುಗಳಲ್ಲಿ ಚಾಲಕನ ಆಸನಕ್ಕೆ ಏರ್‌ಬ್ಯಾಗ್ ಕಡ್ಡಾಯಗೊಳಿಸಿತ್ತು. ಈ ನಿಯಮವು 2019ರ ಜುಲೈ 1ರಿಂದ ಜಾರಿಗೆ ಬಂದಿತ್ತು. ಈಗ ಚಾಲಕನ ಬದಿಯ ಸವಾರನಿಗೂ ಕಡ್ಡಾಯಗೊಳಿಸುತ್ತಿದೆ.

ಪ್ರಯಾಣಿಕರ ಆಸನಕ್ಕೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಸರ್ಕಾರದ ಪ್ರಸ್ತಾವನೆಗೆ ವಾಹನ ಮಾನದಂಡಗಳ ಉನ್ನತ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿದೆ. ವಾಹನಗಳಲ್ಲಿನ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ವ್ಯವಹರಿಸುವ ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್​ಗೆ (ಎಐಎಸ್) ತಿದ್ದುಪಡಿ ತರಲು ಸರ್ಕಾರ ಕರಡು ಅಧಿಸೂಚನೆ ಮುಂದಿಟ್ಟಿದೆ.

ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕ ರಕ್ಷಿಸಲು ವಾಹನಗಳು ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳು ಹೊಂದಿರಬೇಕು ಎಂಬುದು ಜಗತ್ತಿನಾದ್ಯಂತ ಒಮ್ಮತವಿದೆ. ವೆಚ್ಚವನ್ನು ಲೆಕ್ಕಿಸದೇ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಯಾವುದೇ ರಾಜಿ ಆಗುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಕೊರೊನಾ ತಂದೊಡ್ಡಿದ ಆರ್ಥಿಕ ಸವಾಲುಗಳ ಬಗ್ಗೆ ಚರ್ಚಿಸಿದ ಆರ್​ಬಿಐ

ಈ ಹೊಸ ನಿಯಮ ಸಾರ್ವಜನಿಕವಾಗಿ ಯಾವಾಗ ಜಾರಿಗೆ ಬರಲಿದೆ ಎಂಬುದರ ಟೈಮ್‌ಲೈನ್ ಬಗ್ಗೆ ರಸ್ತೆ ಸಾರಿಗೆ ಸಚಿವಾಲಯ ಕೆಲಸ ಮಾಡುತ್ತಿದೆ. ಕಾರು ಮಾಲೀಕರಿಗೆ ಈ ನಿಯಮವನ್ನು ಅನುಸರಿಸಲು ಒಂದು ವರ್ಷದ ಅವಧಿ ಸಾಕು ಎಂದು ಸಚಿವಾಲಯ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ಕಾರುಗಳಿಗೆ ಚಾಲಕರ ಸೀಟ್ ಏರ್‌ಬ್ಯಾಗ್ ಮಾತ್ರ ಕಡ್ಡಾಯವಾಗಿದೆ. ಮುಂಭಾಗದ ಸೀಟಿನಲ್ಲಿರುವ ಪ್ರಯಾಣಿಕರನ್ನು ಏರ್​ಬ್ಯಾಗ್​​ನ ರಕ್ಷಣೆ ಇಲ್ಲದೇ ಇರುವುದರಿಂದ ಅಪಘಾತದಲ್ಲಿ ಸಂಭವಿಸಿದಾಗ ತೀವ್ರ ಗಾಯ ಅಥವಾ ಜೀವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಕಡಿಮೆ ವೆಚ್ಚದ ಸುರಕ್ಷಿತ ಸ್ಪೀಡ್ ಅಲರ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ ಮತ್ತು ಸೀಟ್ - ಬೆಲ್ಟ್ ಜ್ಞಾಪನೆಗಳು ಬಹುತೇಕ ಕಾರುಗಳು ಹೊಂದಿವೆ. ಆದರೆ, ಜೀವ ಉಳಿಸುವ ಏರ್‌ಬ್ಯಾಗ್‌ಗಳು ಇನ್ನೂ ಕಡ್ಡಾಯವಾಗಿಲ್ಲ.

ABOUT THE AUTHOR

...view details