ಕರ್ನಾಟಕ

karnataka

ETV Bharat / business

ಮುಂಬೈ ವಿಮಾನ ನಿಲ್ದಾಣ ಯೋಜನೆಯಲ್ಲಿ ಶೇ.74% ಷೇರು ಅದಾನಿ ಗ್ರೂಪ್​ ತೆಕ್ಕೆಗೆ

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ಜಿವಿಕೆ ಗ್ರೂಪ್ ಶೇ.50.50ರಷ್ಟು ಷೇರು ಹೊಂದಿದೆ. ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ಶೇ.74ರಷ್ಟು ಷೇರನ್ನು ಹೊಂದಿದೆ..

Adani Group
ಅದಾನಿ ಗ್ರೂಪ್

By

Published : Aug 31, 2020, 3:29 PM IST

ನವದೆಹಲಿ :ದೇಶದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಆಗಲಿರುವ ಬಿಲಿಯನೇರ್ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಮುಂಬೈ ವಿಮಾನ ನಿಲ್ದಾಣದಲ್ಲಿ ಜಿವಿಕೆಯ ಶೇ.74ರಷ್ಟು ಷೇರು ಪಾಲು ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿದೆ.

ಅದಾನಿ ಗ್ರೂಪ್ ತನ್ನ ವಿಮಾನ ನಿಲ್ದಾಣ ಉದ್ಯಮದ ಪ್ರಮುಖ ಹೋಲ್ಡಿಂಗ್ ಕಂಪನಿಯಾದ ಅದಾನಿ ಏರ್​ಪೋರ್ಟ್​ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ಮುಂಬೈ ಇಂಟರ್​ನ್ಯಾಷನಲ್ ಏರ್​​ಪೋರ್ಟ್‌ ಲಿಮಿಟೆಡ್​​ನಲ್ಲಿ (ಎಂಐಎಎಲ್​) ಜಿವಿಕೆ ಏರ್ಪೋರ್ಟ್ ಡೆವಲಪರ್ಸ್ ಲಿಮಿಟೆಡ್​ (ಎಡಿಎಲ್) ಷೇರು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಇದನ್ನು ಈಕ್ವಿಟಿ ಪಾಲಾಗಿ ಪರಿವರ್ತಿಸಲಾಗುತ್ತದೆ ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ಜಿವಿಕೆ ಗ್ರೂಪ್ ಶೇ.50.50ರಷ್ಟು ಷೇರು ಹೊಂದಿದೆ. ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ಶೇ.74ರಷ್ಟು ಷೇರನ್ನು ಹೊಂದಿದೆ. ಈ ಒಪ್ಪಂದದ ಪ್ರಕಾರ ಅದಾನಿ ಗ್ರೂಪ್​​ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಗೆ ಹಣಕಾಸಿನ ನೆರವು ನೀಡಲಿದೆ.

ಜಿವಿಕೆ ಗ್ರೂಪ್ ಮತ್ತು ಎಎಹೆಚ್ಎಲ್ ಜಿವಿಕೆಗೆ ಸ್ಟ್ಯಾಂಡ್-ಸ್ಟೀಲ್ ನೀಡುವುದಾಗಿ ಒಪ್ಪಿಕೊಂಡಿವೆ. ಹೆಚ್ಚುವರಿಯಾಗಿ ಜಿವಿಕೆ ಪವರ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡ ಸಾಲಕ್ಕೆ ಸಂಬಂಧಿಸಿದಂತೆ ಜಾಮೀನು ಬಿಡುಗಡೆ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.

ABOUT THE AUTHOR

...view details