ಕರ್ನಾಟಕ

karnataka

ETV Bharat / business

ರಿಲಯನ್ಸ್ ಇಂಡಸ್ಟ್ರೀಸ್​ನಲ್ಲಿ ಮತ್ತೆ 9,555 ಕೋಟಿ ರೂ. ಹೂಡಿದ ಸೌದಿ ಕಂಪನಿ

ಆರ್‌ಆರ್‌ವಿಎಲ್‌ನಲ್ಲಿನ ಹೂಡಿಕೆಗೆ ಮುನ್ನ ಸೌದಿ ಅರೇಬಿಯಾದ ಪಬ್ಲಿಕ್​ ಇನ್ವೆಸ್ಟ್​ಮೆಂಟ್ ಫಂಡ್​ (ಪಿಐಎಫ್​), ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ಸೇವೆಗಳ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 2.32ರಷ್ಟು ಪಾಲು ಸ್ವಾಧೀನಪಡಿಸಿಕೊಂಡಿತ್ತು. ಇದರ ಮೌಲ್ಯ 11,367 ಕೋಟಿ ರೂ.ನಷ್ಟಾಗಿತ್ತು.

By

Published : Nov 5, 2020, 5:40 PM IST

Reliance Retail
ರಿಲಯನ್ಸ್

ನವದೆಹಲಿ:ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿಯು ರಿಲಯನ್ಸ್ ಇಂಡಸ್ಟ್ರೀಸ್​​ನ ಚಿಲ್ಲರೆ ವಿಭಾಗದಲ್ಲಿ 9,555 ಕೋಟಿ ರೂ. (ಅಂದಾಜು 1.3 ಬಿಲಿಯನ್ ಡಾಲರ್​) ಹೂಡಿಕೆ ಮಾಡಿ ಶೇ 2.04ರಷ್ಟು ಷೇರು ಖರೀದಿಸಿದೆ.

ಈ ಹೂಡಿಕೆಯ ಮೂಲಕ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್​ಆರ್​ವಿಎಲ್) ಈಕ್ವಿಟಿ ಮೌಲ್ಯ 4.587 ಟ್ರಿಲಿಯನ್ ರೂ. (ಅಂದಾಜು 62.4 ಬಿಲಿಯನ್ ಡಾಲರ್​) ಆಗಿದೆ ಎಂದು ಆರ್​ಐಎಲ್​ ತಿಳಿಸಿದೆ.

ಆರ್‌ಆರ್‌ವಿಎಲ್‌ನಲ್ಲಿನ ಹೂಡಿಕೆಗೆ ಮುನ್ನ ಸೌದಿ ಅರೇಬಿಯಾದ ನಿಧಿ, ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ಸೇವೆಗಳ ಅಂಗ ಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 2.32ರಷ್ಟು ಪಾಲು ಸ್ವಾಧೀನಪಡಿಸಿಕೊಂಡಿತ್ತು. ಇದರ ಮೌಲ್ಯ 11,367 ಕೋಟಿ ರೂ.ಗಳಷ್ಟಾಗಿತ್ತು.

ಈ ವ್ಯವಹಾರವು ಜಾಗತಿಕ ಮಟ್ಟದಲ್ಲಿ ನವೀನ ಮತ್ತು ಪರಿವರ್ತಕ ಮಾರುಕಟ್ಟೆಯಲ್ಲಿ ಬಲವಾದ ಸಹಭಾಗಿತ್ವ ಅಭಿವೃದ್ಧಿಪಡಿಸಲು ಸಹಾಯಕವಾಗಲಿದೆ. ಜಾಗತಿಕ ಹೂಡಿಕೆದಾರರಾಗಿ ಪಿಐಎಫ್‌ನ ಕಾರ್ಯತಂತ್ರಕ್ಕೆ ಇದು ಅನುಗುಣವಾಗಿದೆ.

ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರವು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಇದು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ 10ಕ್ಕಿಂತಲೂ ಹೆಚ್ಚಿನ ಪಾಲು ಹೊಂದಿದೆ.

ABOUT THE AUTHOR

...view details