ಕರ್ನಾಟಕ

karnataka

By

Published : Feb 22, 2021, 7:22 PM IST

ETV Bharat / business

2,397 ಕೋಟಿ ರೂ. ರಿಲಿಗೇರ್ ಹಗರಣ: ಮಾಜಿ ಸ್ವತಂತ್ರ ನಿರ್ದೇಶಕರ ಜಾಮೀನು ಅರ್ಜಿ ವಜಾ

ಸಾವಿರಾರು ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ರಿಲಿಗೇರ್ ಫಿನ್ವೆಸ್ಟ್ ಲಿಮಿಟೆಡ್‌ನ ಮಾಜಿ ಇಂಡಿಫೆಂಡೆಂಟ್​ ನಿರ್ದೇಶಕ ಅವಿನಾಶ್ ಚಂದರ್ ಮಹಾಜನ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್​ ವಜಾಗೊಳಿಸಿದೆ.

Religare scam
Religare scam

ನವದೆಹಲಿ:2,397 ಕೋಟಿ ರೂ. ಮೌಲ್ಯದ ಹಣ ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ರಿಲಿಗೇರ್ ಫಿನ್ವೆಸ್ಟ್ ಲಿಮಿಟೆಡ್‌ನ ಮಾಜಿ ಇಂಡಿಫೆಂಡೆಂಟ್​ ನಿರ್ದೇಶಕ ಅವಿನಾಶ್ ಚಂದರ್ ಮಹಾಜನ್ ಅವರ ಜಾಮೀನು ಅರ್ಜಿ ವಜಾಗೊಳಿಸಿದೆ.

ಪ್ರವರ್ತಕರಿಗೆ ಸಂಬಂಧಿಸಿದ ಅಥವಾ ನಿಯಂತ್ರಿಸಲ್ಪಟ್ಟ ಅಥವಾ ಸಂಬಂಧ ಹೊಂದಿರುವ 14 ಘಟಕಗಳಿಗೆ ವ್ಯಾಪಿಸಿಕೊಂಡ ಆಪಾದಿತ ಸಾಲಗಳಿಂದ ದೂರವಿರಲು ಮಹಾಜನ್ ನಿರರ್ಥಕ ಪ್ರಯತ್ನ ಮಾಡಿದ್ದಾರೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಹೇಳಿದರು.

ಇದನ್ನೂ ಓದಿ: ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ : ಫೆ.22ರ ಗೋಲ್ಡ್ ರೇಟ್ ಇಲ್ಲಿದೆ..

ಮಹಾಜನ್ ಯಾವುದೇ ಕಳವಳ ವ್ಯಕ್ತಪಡಿಸಿಲ್ಲ ಅಥವಾ ಸಾಲದ ಪ್ರಸ್ತಾಪ ವಿರೋಧಿಸಿಲ್ಲ. ಇದು ಹಣ ತಿರುಗಿಸಿದ ಆರೋಪದ ಮೇಲೆ ಪ್ರವರ್ತಕರು / ಇತರ ಆರೋಪಿಗಳೊಂದಿಗೆ ಪಿತೂರಿ ಎಂಬುದು ಸ್ಪಷ್ಟವಾಗಿದೆ.

ಅರ್ಜಿದಾರನು ಸಾಲ ಅನುಮೋದಿಸಿದ್ದು, ಮಾತ್ರವಲ್ಲದೇ ಅದನ್ನು ಅಂಗೀಕಾರ ಕೂಡ ಮಾಡಿದ್ದಾರೆ. ಹೀಗಾಗಿ, ಪ್ರವರ್ತಕರಿಗೆ ಸಂಬಂಧಿಸಿದ ಅಥವಾ ನಿಯಂತ್ರಿಸಲ್ಪಟ್ಟ ಅಥವಾ ಸಂಬಂಧ ಹೊಂದಿರುವ 14 ಘಟಕಗಳಿಗೆ ವಿಸ್ತರಿಸಲಾದ ಸಾಲಗಳಿಂದ ದೂರವಿರಲು ಅರ್ಜಿದಾರನು ನಿರರ್ಥಕ ಪ್ರಯತ್ನವನ್ನು ಮಾಡಿದ್ದಾರೆ ಎಂದು ಫೆಬ್ರವರಿ 20ರಂದು ವಜಾ ಆದೇಶ ಜಾರಿಗೆ ತಂದಿದೆ.

ಮಹಾಜನ್ ಕ್ರಿಮಿನಲ್ ಜವಾಬ್ದಾರಿಯಿಂದ ಓಡಿಹೋಗಲು ಸಾಧ್ಯವಿಲ್ಲ. ಅವರ ಕೃತ್ಯದಿಂದ ಅವರು ಆರ್​ಎಫ್ಎಲ್ ಕಂಪನಿಗೆ ತಪ್ಪು ನಷ್ಟ ಉಂಟು ಮಾಡಿ, ಪ್ರವರ್ತಕರಿಗೆ ತಪ್ಪಾದ ಲಾಭ ನೀಡಿದ್ದಾರೆ ಎಂದಿದೆ.

ABOUT THE AUTHOR

...view details