ಕರ್ನಾಟಕ

karnataka

By

Published : Sep 29, 2019, 3:15 AM IST

ETV Bharat / business

ಪಿಎಂಸಿ ಬ್ಯಾಂಕ್​ ಬಳಿಕ ಮತ್ತೊಂದು ಬ್ಯಾಂಕ್​ಗೆ ಆರ್​ಬಿಐನ ಕಠಿಣ ನಿರ್ಬಂಧ

ವಸೂಲಾಗದ ಸಾಲವು ಗರಿಷ್ಠ ಮಟ್ಟದಲ್ಲಿದೆ. ಆರ್ಥಿಕ ನಷ್ಟ ಬಗೆಹರಿಸಲು ಅಗತ್ಯವಾದ ಬಂಡವಾಳ ನಿರ್ವಹಣೆ ಮಾಡದೇ ಇರುವುದು ಮತ್ತು ಸತತ ಎರಡು ವರ್ಷಗಳವರೆಗೆ ಸಂಪತ್ತಿನಿಂದ ಬರುತ್ತಿರುವ ಆದಾಯವನ್ನು ನಕರಾತ್ಮಕವಾಗಿದೆ ಎಂದು ಗಮನಿಸಿದ ಆರ್​ಬಿಐ, ಖಾಸಗಿ ವಲಯದ ಲಕ್ಷ್ಮೀ ವಿಲಾಸ್​ ಬ್ಯಾಂಕ್​ಗೆ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧ ವಿಧಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ), ಪಂಜಾಬ್​ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್​ ಲಿಮಿಟೆಡ್​ಗೆ (ಪಿಸಿಎಂ) ಕೆಲ ದಿನಗಳ ಹಿಂದೆಯಷ್ಟೇ ಕಾರ್ಯಾಚರಣೆಯ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಈಗ ಮತ್ತೊಂದು ಖಾಸಗಿ ಬ್ಯಾಂಕ್​ಗೆ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧ (ಪಿಸಿಎ) ವಿಧಿಸಿದೆ.

ಖಾಸಗಿ ವಲಯದ ಲಕ್ಷ್ಮೀ ವಿಲಾಸ್​ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹಾಕಿದೆ. ವಸೂಲಾಗದ ಸಾಲವು ಗರಿಷ್ಠ ಮಟ್ಟದಲ್ಲಿದೆ. ಆರ್ಥಿಕ ನಷ್ಟ ಬಗೆಹರಿಸಲು ಅಗತ್ಯವಾದ ಬಂಡವಾಳ ನಿರ್ವಹಣೆ ಮಾಡದೇ ಇರುವುದು ಮತ್ತು ಸತತ ಎರಡು ವರ್ಷಗಳವರೆಗೆ ಸಂಪತ್ತಿನಿಂದ ಬರುತ್ತಿರುವ ಆದಾಯವನ್ನು ನಕರಾತ್ಮಕವಾಗಿ ಇರುವುದನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಆರ್​ಬಿಐನ ಈ ನಡೆಯಿಂದ ಅದು ಹೊಸ ಶಾಖೆಯನ್ನು ತೆರೆಯುವಂತಿಲ್ಲ. ಲಾಭಾಂಶ ನೀಡುವಂತಿಲ್ಲ ಮತ್ತು ಕಾರ್ಪೊರೇಟ್​ ವಲಯಕ್ಕೆ ನೀಡುವ ಸಾಲದ ಪ್ರಮಾಣದಲ್ಲಿ ಇಳಿಕೆ ಮಾಡುವುದು ಕಡ್ಡಾಯವಾಗಿದೆ. 'ಬ್ಯಾಂಕ್​ನ ಕಾರ್ಯಕ್ಷಮತೆ ಸುಧಾರಿಸುವ ದೃಷ್ಟಿಯಿಂದ ಪಿಸಿಎ ವಿಧಿಸಲಾಗಿದೆ. ಇದರಿಂದ ದೈನಂದಿನ ಕೆಲಸಗಳಿಗೆ ಯಾವುದೇ ರೀತಿಯ ಅಡ್ಡಿ ಆಗುವುದಿಲ್ಲ' ಎಂದು ಲಕ್ಷ್ಮೀ ವಿಲಾಸ್​ ಬ್ಯಾಂಕ್ ಸ್ಪಷ್ಟನೆ ನೀಡಿದೆ.

ABOUT THE AUTHOR

...view details