ನವದೆಹಲಿ: ಖಾಸಗಿ ವಲಯದ ಬ್ಯಾಂಕುಗಳು ಒಂದರ ನಂತರ ಒಂದರಂತೆ ವಿಫಲವಾಗುತ್ತಿವೆ ಎಂದು ಒತ್ತಿ ಹೇಳಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ರಿಸರ್ವ್ ಬ್ಯಾಂಕ್ಅನ್ನು ಇದಕ್ಕೆ ಹೊಣೆಗಾರನನ್ನಾಗಿ ಮಾಡಿ ಸರ್ಕಾರವು ಎಲ್ಲಾ ಖಾಸಗಿ ವಲಯದ ಬ್ಯಾಂಕ್ಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.
'ಜನರ ಹಣ ದೋಚುವ ಬ್ಯಾಂಕ್ಗಳಿಗೆ ಮೂಗುದಾರ ಹಾಕಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ' - ಯೆಸ್ ಬ್ಯಾಂಕ್ ಬಿಕ್ಕಟ್ಟು
ಸಾರ್ವಜನಿಕ ಸಾಲದಾತರು ಕಷ್ಟಪಟ್ಟು ಹಣ ಸಂಪಾದಿಸಿ ಉಳಿತಾಯವನ್ನು ನಿಭಾಯಿಸಿ ಬ್ಯಾಂಕ್ಗಳಲ್ಲಿ ಠೇವಣಿ ಇರಿಸುತ್ತಾರೆ. ಬ್ಯಾಂಕ್ಗಳು ಹಣ ದುರುಪಯೋಗ ಮತ್ತು ದುರ್ಬಳಕೆ ಮಾಡಿಕೊಂಡರೆ ಬ್ಯಾಂಕ್‌ಗಳ ಹೊಣೆ ಹೊತ್ತ ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟ ಸಂಸ್ಥೆ ಹೇಳಿದೆ.

ಹೂಡಿಕೆದಾರರು ಮತ್ತು ಬ್ಯಾಂಕ್ ಗ್ರಾಹಕರ ಹಿತಾಸಕ್ತಿ ಕಾಪಾಡಲು ಯೆಸ್ ಬ್ಯಾಂಕ್ಅನ್ನು ತಕ್ಷಣವೇ ಸಾರ್ವಜನಿಕ ವಲಯದ ಅಡಿಯಲ್ಲಿ ತರಬೇಕು. ಸರ್ಕಾರದಿಂದ ವೈಭವೀಕರಿಸಲ್ಪಟ್ಟ ಖಾಸಗಿ ಬ್ಯಾಂಕ್ಗಳು ಒಂದೊಂದಾಗಿ ವಿಫಲಗೊಳ್ಳುತ್ತಿವೆ. ಕೇಂದ್ರ ಸರ್ಕಾರವು ಈ ಹಿಂದಿನ 1969ರ ನಡೆಯನ್ನು ಪುನರಾವರ್ತಿಸಬೇಕು. ಎಲ್ಲಾ ಖಾಸಗಿ ಬ್ಯಾಂಕ್ಗಳನ್ನು ಸಾರ್ವಜನಿಕ ವಲಯದ ಅಡಿಯಲ್ಲಿ ತರಬೇಕು ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿದರು.