ನವದೆಹಲಿ: ಬ್ರಿಸ್ಬೇನ್ನ ಗಬ್ಬಾದಲ್ಲಿ ಭಾರತದ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿ ಐತಿಹಾಸಿಕ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಜಯ ಗಳಿಸಿರುವುದಕ್ಕೆ ಸರ್ಚ್ ಎಂಜಿನ್ ದೈತ್ಯ ಗೂಗಲ್ ಸಿಇಒ ಸುಂದರ್ ಪಿಚೈ ಅಭಿನಂದನೆ ಸಲ್ಲಿಸಿದ್ದಾರೆ.
ಇದೊಂದು ಅತ್ಯದ್ಭುತ ಗೆಲುವು: ಟೀಂ ಇಂಡಿಯಾ ಹಾಡಿಹೊಗಳಿದ ಗೂಗಲ್ ಸಿಇಒ ಪಿಚೈ - ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಟೆಸ್ಟ್
ಇದು ಅತ್ಯುತ್ತಮ ಟೆಸ್ಟ್ ಸರಣಿಗಳಲ್ಲಿ ಒಂದಾಗಿದೆ. ಸರಣಿ ಗೆದ್ದ ಭಾರತಕ್ಕೆ ಅಭಿನಂದನೆಗಳು. ಆಸ್ಟ್ರೇಲಿಯಾ ಸಹ ಚೆನ್ನಾಗಿ ಆಡಿದೆ. 'ವಾಟ್ ಎ ಸಿರೀಸ್' ಎಂದು ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಸುಂದರ್ ಪಿಚೈ
ಇದು ಅತ್ಯುತ್ತಮ ಟೆಸ್ಟ್ ಸರಣಿಗಳಲ್ಲಿ ಒಂದಾಗಿದೆ. ಸರಣಿ ಗೆದ್ದ ಭಾರತಕ್ಕೆ ಅಭಿನಂದನೆಗಳು. ಆಸ್ಟ್ರೇಲಿಯಾ ಸಹ ಚೆನ್ನಾಗಿ ಆಡಿದೆ. ವಾಟ್ ಎ ಸಿರೀಸ್ ಎಂದು ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾ ತಂಡ ನೀಡಿದ್ದ 328 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡದ ರಿಷಭ್ ಪಂತ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ ಅವರ ತಾಳ್ಮೆಯ ಆಟದ ನೆರವಿನಿಂದ ಟೀಂ ಇಂಡಿಯಾ 32 ವರ್ಷಗಳಿಂದ ಗೆಲುವೇ ಕಾಣದಿದ್ದ ಬ್ರಿಸ್ಬೇನ್ನಲ್ಲಿ 3 ವಿಕೆಟ್‌ಗಳಿಂದ ಜಯ ಸಾಧಿಸಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.