ಕರ್ನಾಟಕ

karnataka

ETV Bharat / business

4,335 ಕೋಟಿ ರೂ. ಪಿಎಂಸಿ ಬ್ಯಾಂಕ್ ಹಗರಣ: ರಾಕೇಶ್ ವಾಧವನ್ ಜಾಮೀನು ಅರ್ಜಿ ವಜಾ - ಪಿಎಂಎಲ್ಎ ನ್ಯಾಯಾಲಯ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೆಳಕಿಗೆ ಬಂದ 4,355 ಕೋಟಿ ರೂ. ಪಿಎಂಸಿ ಬ್ಯಾಂಕ್ ಹಗರಣದಲ್ಲಿ ಹೌಸಿಂಗ್ ಡೆವಲಪ್‌ಮೆಂಟ್ ಆ್ಯಂಡ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಪ್ರವರ್ತಕರಾದ ರಾಕೇಶ್ ವಾಧವನ್, ಅವರ ಪುತ್ರ ಸರಂಗ್ ಮತ್ತು ಇತರರು ಆರೋಪಿಯಾಗಿದ್ದಾರೆ. ಜೈಲಿನೊಳಗೆ ಕೊರೊನಾ ವೈರಸ್​ ಪಾಸಿಟಿವ್​ ಬಂದಿದ್ದರಿಂದ ತನ್ನ ಮನವಿಯನ್ನು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

Bank scam case
ಬ್ಯಾಂಕ್ ವಂಚನೆ

By

Published : Jul 14, 2020, 9:02 PM IST

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಮ್‌ಸಿ) ಬ್ಯಾಂಕ್​ನ 4,355 ಕೋಟಿ ರೂ. ಹಗರಣದ ಆರೋಪಿ, ಎಚ್‌ಡಿಐಎಲ್ ಪ್ರವರ್ತಕ ರಾಕೇಶ್ ವಾಧವನ್ ಅವರ ಜಾಮೀನು ಅರ್ಜಿಯನ್ನು ಮುಂಬೈನ ಪಿಎಂಎಲ್‌ಎ ನ್ಯಾಯಾಲಯ ತಿರಸ್ಕರಿಸಿದೆ.

ತಾನು ಯಾವುದೇ ಬ್ಯಾಂಕಿಂಗ್ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಹೇಳಿ ವಾಧವನ್ ಜಾಮೀನು ಕೋರಿದ್ದು, ಜೈಲಿನೊಳಗೆ ಕೊರೊನಾ ವೈರಸ್​ ಪಾಸಿಟಿವ್​ ಬಂದಿದ್ದರಿಂದ ತನ್ನ ಮನವಿಯನ್ನು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ವಿಶೇಷ ನ್ಯಾಯಮೂರ್ತಿ ಪ್ರಶಾಂತ್ ಪಿ ರಾಜವೈದ್ಯ ಅವರ ವಾಧವನ್​ ಮನವಿಯನ್ನು ತಿರಸ್ಕರಿಸಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೆಳಕಿಗೆ ಬಂದ 4,355 ಕೋಟಿ ರೂ. ಪಿಎಂಸಿ ಬ್ಯಾಂಕ್ ಹಗರಣದಲ್ಲಿ ಹೌಸಿಂಗ್ ಡೆವಲಪ್‌ಮೆಂಟ್ ಆ್ಯಂಡ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಪ್ರವರ್ತಕರಾದ ರಾಕೇಶ್ ವಾಧವನ್, ಅವರ ಪುತ್ರ ಸರಂಗ್ ಮತ್ತು ಇತರರು ಆರೋಪಿಯಾಗಿದ್ದಾರೆ.

ABOUT THE AUTHOR

...view details