ನವದೆಹಲಿ:ತಾತ್ಕಾಲಿಕ ಆಸ್ಪತ್ರೆ ಮತ್ತು ತಾತ್ಕಾಲಿಕ ಕೋವಿಡ್ ಆರೈಕೆ ಸೌಲಭ್ಯಗಳನ್ನು ನೀಡಲು ಸಾಂಸ್ಥಿಕ ಸಾಮಾಜಿಕ ನಿಧಿಯ (ಸಿಎಸ್‌ಆರ್) ಹಣವನ್ನು ಖರ್ಚು ಮಾಡುವುದು ಅರ್ಹವಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಭಾರತದ ಕಾರ್ಪೊರೇಟ್ ವಲಯವು ತಮ್ಮ ಉದ್ಯೋಗಿಗಳಿಗೆ ಮಾತ್ರವಲ್ಲದೇ ಹೊರಗಿನ ಸಮುದಾಯಗಳಿಗೂ ಸೇವೆ ಸಲ್ಲಿಸುವ ವ್ಯಾಕ್ಸಿನೇಷನ್ ಕಾರ್ಯಕ್ರಮಗಳಿಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹಣ ಬಳಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದವು.
ಈ ಬಗ್ಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದ್ದು, ತಾತ್ಕಾಲಿಕ ಆಸ್ಪತ್ರೆ ಮತ್ತು ತಾತ್ಕಾಲಿಕ ಕೋವಿಡ್ ಆರೈಕೆ ಸೌಲಭ್ಯಗಳನ್ನು ನೀಡಲು ಸಿಎಸ್‌ಆರ್ ಹಣವನ್ನು ಖರ್ಚು ಮಾಡುವುದು ಸಿಎಸ್ಆರ್ ನಿಬಂಧನೆಗೆ ಅರ್ಹವಾಗಿದೆ ಎಂದು ತಿಳಿಸಿದೆ.
ಕಂಪನಿಯ ಕಾನೂನಿಗೆ ನಿರ್ದಿಷ್ಟ ಗಾತ್ರದ ವ್ಯವಹಾರಗಳಡಿ ಪ್ರತಿವರ್ಷ, ಕಳೆದ ಮೂರು ವರ್ಷಗಳ ಸರಾಸರಿ ವಾರ್ಷಿಕ ಲಾಭದ ಶೇ 2ರಷ್ಟು ಅನ್ನು ಸಿಎಸ್ಆರ್ ನಿಬಂಧನೆಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಚಟುವಟಿಕೆಗಳಿಗೆ ಕಡ್ಡಾಯವಾಗಿ ಖರ್ಚು ಮಾಡಬೇಕಾಗುತ್ತದೆ. ಆರೋಗ್ಯ ರಕ್ಷಣೆ, ಆರೋಗ್ಯ ಸೇವೆ ಮತ್ತು ವಿಪತ್ತು ನಿರ್ವಹಣೆಗೆ ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಸಿಎಸ್ಆರ್ನಡಿ ಸೇರಿವೆ.
2020ರ ಮಾರ್ಚ್ ವೇಳೆ, ಸರ್ಕಾರದ ಸುತ್ತೋಲೆ ಸಿವಿಎಸ್ ಹಣವನ್ನು ಕೋವಿಡ್ -19 ಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಲು ಅನುಮತಿ ನೀಡಿತು. ಉದಾರವಾದ ವ್ಯಾಖ್ಯಾನ ಅನುಮತಿಸಿದರೂ ಸಾರ್ವಜನಿಕ ವ್ಯಾಕ್ಸಿನೇಷನ್ ಕಾರ್ಯಕ್ರಮಗಳಿಗೆ ಯಾವುದೇ ಸ್ಪಷ್ಟ ನಿಬಂಧನೆಗಳನ್ನು ನೀಡಿರಲಿಲ್ಲ.