ಕರ್ನಾಟಕ

karnataka

ETV Bharat / business

ಆ್ಯಪ್ ಸಾಲ ಅಧ್ಯಯನಕ್ಕೆ RBI ಸಮಿತಿ ರಚನೆ ಬೆನ್ನಲ್ಲೇ ನಿಯಮ ಮುರಿದ ಆ್ಯಪ್​ಗಳಿಗೆ ಗೂಗಲ್ ಗೂಗ್ಲಿ!

ಗೂಗಲ್‌ನ ಉತ್ಪನ್ನಗಳಾದ್ಯಂತ ಸುರಕ್ಷಿತ ಮತ್ತು ಭದ್ರತಾ ಅನುಭವ ನೀಡುವುದು ನಮ್ಮ ಆದ್ಯತೆಯಾಗಿದೆ. ನಮ್ಮ ಜಾಗತಿಕ ಉತ್ಪನ್ನ ನೀತಿಗಳನ್ನು ಈ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ವಿನ್ಯಾಸಗೊಳಿಸಿ ಕಾರ್ಯಗತಗೊಳಿಸಲಾಗಿದೆ. ಬಳಕೆದಾರರ ಸುರಕ್ಷತೆ ಹೆಚ್ಚಿಸಲು ನಾವು ಯಾವಾಗಲೂ ನಮ್ಮ ಅಭ್ಯಾಸಗಳನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಗೂಗಲ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

By

Published : Jan 14, 2021, 9:11 PM IST

Google
ಗೂಗಲ್

ನವದೆಹಲಿ:ದೇಶದಲ್ಲಿ ನೂರಾರು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಮತ್ತು ಸರ್ಕಾರಿ ಸಂಸ್ಥೆಗಳು ಪರಿಶೀಲಿಸಿ ಅದರ ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ ಎಂದು ಟೆಕ್ ದೈತ್ಯ ಗೂಗಲ್ ತಿಳಿಸಿದೆ.

ಗುರುತಿಸಲಾದ ಅಪ್ಲಿಕೇಷನ್‌ಗಳ ಡೆವಲಪರ್‌ಗಳು ಅನ್ವಯಿಕ ಸ್ಥಳೀಯ ಕಾನೂನು ಮತ್ತು ನಿಬಂಧನೆಗಳನ್ನು ಅನುಸರಿಸುತ್ತಾರೆ ಎಂಬುದನ್ನು ಗೂಗಲ್ ಪ್ರಶ್ನಿಸಿದೆ. ಒಂದು ವೇಳೆ ನಿಯಮಗಳಿಗೆ ಬದ್ಧವಾಗಿರದ ಆ ಅಪ್ಲಿಕೇಶನ್‌ಗಳನ್ನು ಸಹ ತೆಗೆದುಹಾಕಲಾಗುತ್ತದೆ ಎಂದು ಹೇಳಿದೆ.

ಗೂಗಲ್‌ನ ಉತ್ಪನ್ನಗಳಾದ್ಯಂತ ಸುರಕ್ಷಿತ ಮತ್ತು ಭದ್ರತಾ ಅನುಭವ ನೀಡುವುದು ನಮ್ಮ ಆದ್ಯತೆಯಾಗಿದೆ. ನಮ್ಮ ಜಾಗತಿಕ ಉತ್ಪನ್ನ ನೀತಿಗಳನ್ನು ಈ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ವಿನ್ಯಾಸಗೊಳಿಸಿ ಕಾರ್ಯಗತಗೊಳಿಸಲಾಗಿದೆ. ಬಳಕೆದಾರರ ಸುರಕ್ಷತೆ ಹೆಚ್ಚಿಸಲು ನಾವು ಯಾವಾಗಲೂ ನಮ್ಮ ಅಭ್ಯಾಸಗಳನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಗೂಗಲ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ .

ತೆಗೆದುಹಾಕಲಾದ ಅಪ್ಲಿಕೇಶನ್‌ಗಳ ಹೆಸರನ್ನು ಗೂಗಲ್​ ಬಹಿರಂಗಪಡಿಸಿಲ್ಲ. ಬಳಕೆದಾರರು ಮತ್ತು ಸರ್ಕಾರಿ ಸಂಸ್ಥೆಗಳು ಸಲ್ಲಿಸಿದ ಪ್ರಸ್ತಾವನೆಯ ಆಧಾರದ ಮೇಲೆ ನಾವು ಭಾರತದಲ್ಲಿ ನೂರಾರು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿದ್ದೇವೆ. ನಮ್ಮ ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸಿದಂತೆ ಕಂಡುಬಂದ ಅಪ್ಲಿಕೇಶನ್‌ಗಳನ್ನು ತಕ್ಷಣವೇ ಪ್ಲೇಸ್ಟೋರ್​ನಿಂದ ತೆಗೆದುಹಾಕಲಾಗಿದೆ. ಗುರುತಿಸಲಾದ ಡೆವಲಪರ್‌ಗಳಿಗೆ ಅನ್ವಯವಾಗುವ ಸ್ಥಳೀಯ ಕಾನೂನು ಮತ್ತು ನಿಬಂಧನೆಗಳ ಅನುಸರಣೆಯ ಬಗ್ಗೆಯೂ ಪ್ರಶ್ನಿಸಿದ್ದೇವೆ ಎಂದು ಹೇಳಿದೆ.

ಇದನ್ನೂ ಓದಿ: ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ಪೂರೈಕೆ ಕುಸಿತ

ಕಾನೂನು ಮತ್ತು ನಿಬಂಧನೆಗಳ ಅನುಸರಣೆಯಲ್ಲಿ ವಿಫಲವಾದ ಅಪ್ಲಿಕೇಶನ್‌ಗಳನ್ನು ಮುಂದಿನ ಸೂಚನೆ ಇಲ್ಲದೆ ತೆಗೆದುಹಾಕಲಾಗುತ್ತದೆ. ಈ ಬಗೆಗಿನ ತನಿಖೆಯಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಗೂಗಲ್ ತನ್ನ ಸಹಾಯವನ್ನು ಮುಂದುವರಿಸುತ್ತದೆ ಎಂದಿದೆ.

ಡಿಜಿಟಲ್​ ಪ್ಲಾಟ್​ಫಾರ್ಮ್​ನಲ್ಲಿ ಸಾಲ ನೀಡುವ ವ್ಯವಸ್ಥೆ ನಿಯಮಬದ್ಧಗೊಳಿಸಲು ಅಗತ್ಯ ಸಲಹೆಗಳನ್ನು ನೀಡಲು ಭಾರತೀಯ ರಿಸಿರ್ವ್​ ಬ್ಯಾಂಕ್​ ಕಾರ್ಯಕಾರಿ ಸಮಿತಿಯನ್ನು ರಚಿಸಿದ. ಸಾಲ ನೀಡುವ ಸಂಬಂಧ ಈ ಸಮಿತಿ ಎಲ್ಲ ಆಯಾಮಗಳ ಬಗ್ಗೆ ಅಧ್ಯಯನ ನಡೆಸಲಿದೆ. ಇದರ ಬೆನ್ನಲ್ಲೇ ಗೂಗಲ್, ಕಾನೂನು ಉಲ್ಲಂಘಿಸಿದ ಆ್ಯಪ್​ಗಳನ್ನು ತೆಗೆದು ಹಾಕಿದೆ.

ABOUT THE AUTHOR

...view details