ಕರ್ನಾಟಕ

karnataka

ದೇಶದ ಖಜಾನೆ ನಿರ್ವಹಣೆಯಲ್ಲಿ ಇನ್ಫೋಸಿಸ್​ ಪಾತ್ರ ದೊಡ್ಡದು: ಕೇಂದ್ರ ಸರ್ಕಾರ

ತೆರಿಗೆದಾರರ ಕುಂದುಕೊರತೆಗಳು ಇನ್ಫೋಸಿಸ್ ಮೇಲಿನ ಸುಳ್ಳುಗಳನ್ನು ಪರಿಹರಿಸುವಲ್ಲಿ ಹೆಚ್ಚಿನ ಆದ್ಯತೆ ಮತ್ತು ಹೊಣೆಗಾರಿಕೆ ಇದೆ ಎಂದು ಸರ್ಕಾರವು ದೆಹಲಿಯಲ್ಲಿ ನಡೆದ ತೆರಿಗೆ ಸಂಗ್ರಹ ಸಂಬಂಧಿತ ಸುಧಾರಣಾ ಸಭೆಯಲ್ಲಿ ಇನ್ಫಿಗೆ ಮನವರಿಕೆ ಮಾಡಿತು.

By

Published : Mar 6, 2020, 9:05 PM IST

Published : Mar 6, 2020, 9:05 PM IST

Infosysy
ಇನ್ಫೋಸಿಸ್

ನವದೆಹಲಿ: ಜಿಎಸ್​ಟಿ ಪೋರ್ಟಲ್ ಕಾರ್ಯಕ್ಷಮತೆಯ ಜವಾಬ್ದಾರಿಯನ್ನು ಇನ್ಫೋಸಿಸ್​ಗೆ ವಹಿಸಿದ ಹಣಕಾಸು ಸಚಿವಾಲಯ, ತೆರಿಗೆ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ತಕ್ಷಣವೇ ಪರಿಹರಿಸಲು ಐಟಿ ಸೇವಾ ಪೂರೈಕೆದಾರಿಗೆ ಮನವಿ ಮಾಡಿತು.

ತೆರಿಗೆದಾರರ ಕುಂದುಕೊರತೆಗಳು ಇನ್ಫೋಸಿಸ್ ಮೇಲಿನ ಸುಳ್ಳುಗಳನ್ನು ಪರಿಹರಿಸುವಲ್ಲಿ ಹೆಚ್ಚಿನ ಆದ್ಯತೆ ಮತ್ತು ಹೊಣೆಗಾರಿಕೆ ಇದೆ ಎಂದು ಸರ್ಕಾರವು ದೆಹಲಿಯಲ್ಲಿ ನಡೆದ ತೆರಿಗೆ ಸಂಗ್ರಹ ಸಂಬಂಧಿತ ಸುಧಾರಣಾ ಸಭೆಯಲ್ಲಿ ಇನ್ಫಿಗೆ ಮನವರಿಕೆ ಮಾಡಿತು.

ವ್ಯವಹಾರ ಅಂಕಿಅಂಶಗಳು, ಐಟಿ ರಿಟರ್ನ್ಸ್ ಸಲ್ಲಿಕೆ, ಆರಂಭಿಸಬೇಕಾದ ಸೌಲಭ್ಯಗಳು, ಜಿಎಸ್​ಟಿ ಪೋರ್ಟಲ್​ ಸಾಮರ್ಥ್ಯ ವಿಸ್ತರಣೆ ಮತ್ತು ತೆರಿಗೆದಾರರು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಇನ್ಫೋಸಿಸ್ ಸಭೆಯಲ್ಲಿ ಪ್ರಸ್ತಾಪಿಸಿತು.

ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ವಹಿಸಿದ್ದರು. ರಾಜ್ಯ ತೆರಿಗೆ ಆಯುಕ್ತರು ಮತ್ತು ಕೇಂದ್ರ ತೆರಿಗೆ ವಲಯದ ಮುಖ್ಯ ಆಯುಕ್ತರು ಕೂಡ ಭಾಗವಹಿಸಿದ್ದರು.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೂಡ ಸಭೆಯಲ್ಲಿ ಪಾಲ್ಗೊಂಡು ತೆರಿಗೆದಾರರ ಕುಂದುಕೊರತೆಗಳನ್ನು ಪರಿಹರಿಸಲು ಜಿಎಸ್​ಟಿ ಪೋರ್ಟಸ್​ ಸ್ಥಿತಿಗತಿಯ ಬಗ್ಗೆ ತೀವ್ರವಾಗಿ ಚರ್ಚಿಸಿದರು ಎಂದು ಜಿಎಸ್​ಟಿ ಮಂಡಳಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಜಿಎಸ್​ಟಿ ರಿಟರ್ನ್ ಫೈಲಿಂಗ್ ಪ್ರಕ್ರಿಯೆ ಸುಗಮಗೊಳಿಸುವಿಕೆ, ಆದಾಯ ವೃದ್ಧಿ ಮತ್ತು ಕೇಂದ್ರೀಕೃತ ಅನುಸರಣೆ ನಿರ್ವಹಣೆಗೆ ವಿವಿಧ ಕ್ರಮಗಳ ಬಗ್ಗೆ ಚರ್ಚಿಸಿದರು.

ABOUT THE AUTHOR

...view details