ಕರ್ನಾಟಕ

karnataka

ETV Bharat / business

ರಾಜ್ಯದಲ್ಲಿ ಓಡುವ ರೈಲುಗಳೂ ಸೇರಿ ಈ ಟ್ರೈನು​ಗಳ ಟಿಕೆಟ್​ಗಳಲ್ಲಿ ಶೇ 25% ಡಿಸ್ಕೌಂಟ್!​ - Railway news

ಪ್ರಯಾಣಿಕ ದಟ್ಟಣೆಯನ್ನು ಹೆಚ್ಚಳ, ಹೆಚ್ಚುವರಿ ಆದಾಯ ಸಂಗ್ರಹ ಉದ್ದೇಶದಿಂದ ಈ ರಿಯಾಯಿತಿ ದರಗಳನ್ನು ಘೋಷಿಸಲಾಗಿದೆ. ರೈಲ್ವೆ ಮಂಡಳಿಯ ವಾಣಿಜ್ಯ ನಿರ್ದೇಶನಾಲಯವು ಎಲ್ಲಾ ವಲಯಗಳ ರೈಲುಗಳಿಗೆ ಸೆಪ್ಟೆಂಬರ್ 30ರೊಳಗೆ ಮೇಲ್ದರ್ಜೆಯ ಆಸನ ಮತ್ತು ಎಕ್ಸಿಕ್ಯುಟಿವ್​ ವರ್ಗದ ಆಸನಗಳ ಲಭ್ಯತೆಯನ್ನು ಪರಿಶೀಲಿಸುವಂತೆ ಭಾರತೀಯ ರೈಲ್ವೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಸಾಂದರ್ಭಿಕ ಚಿತ್ರ

By

Published : Aug 28, 2019, 5:38 PM IST

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಆಯ್ದ ಕೆಲ ರೈಲುಗಳಲ್ಲಿನ ಎಸಿ ಮತ್ತು ಎಕ್ಸಿಕ್ಯುಟಿವ್​ ಶ್ರೇಣಿಯ ಟಿಕೆಟ್​ ದರಗಳಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಿದೆ.

ಈ ಯೋಜನೆಯಡಿ ಪ್ರಯಾಣಿಕರು ಶತಾಬ್ದಿ, ಗಟಿಮಾನ್ ತೇಜಸ್​, ಡಬಲ್ ಡೆಕ್ಕರ್​ ರೈಲುಗಳಲ್ಲಿ ಪ್ರಯಾಣಿಸಲು ಇಚ್ಚಿಸುವ ಯಾತ್ರಿಕರು ತಮ್ಮ ಟಿಕೆಟ್​ಗಳ ಮೇಲೆ ಶೇ 25ರಷ್ಟು ರಿಯಾಯಿತಿ ಪಡೆಯಲಿದ್ದಾರೆ.

ಪ್ರಯಾಣಿಕ ದಟ್ಟಣೆ ಹೆಚ್ಚಿಸಲು ಹಾಗೂ ಹೆಚ್ಚುವರಿ ಆದಾಯ ಸಂಗ್ರಹಿಸುವ ಉದ್ದೇಶದಿಂದ ಈ ರಿಯಾಯಿತಿಯನ್ನು ಒದಗಿಸುತ್ತಿದ್ದೇವೆ. ರೈಲ್ವೆ ಮಂಡಳಿಯ ವಾಣಿಜ್ಯ ನಿರ್ದೇಶನಾಲಯವು ಎಲ್ಲ ವಲಯಗಳ ರೈಲುಗಳಿಗೆ ಸೆಪ್ಟೆಂಬರ್ 30ರೊಳಗೆ ಮೇಲ್ದರ್ಜೆಯ ಆಸನ ಮತ್ತು ಎಕ್ಸಿಕ್ಯುಟಿವ್​ ವರ್ಗಗಳ ಆಸನಗಳ ಲಭ್ಯತೆಯನ್ನು ಪರಿಶೀಲಿಸಿಕೊಳ್ಳುವಂತೆ ಅಧಿಸೂಚನೆ ಮೂಲಕ ತಿಳಿಸಲಾಗಿದೆ.

ರಿಯಾಯಿತಿ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು:
1. ಹಿಂದಿನ ವರ್ಷದಲ್ಲಿ ಶೇ 50ಕ್ಕಿಂತ ಕಡಿಮೆ ಪ್ರಯಾಣಿಕರನ್ನು ಹೊಂದಿರುವ ರೈಲುಗಳಿಗೆ ಮಾತ್ರ ರಿಯಾಯಿತಿ ಲಭ್ಯ.

2. ರಿಯಾಯಿತಿಯು ಮೂಲ ಶುಲ್ಕದ ಮೇಲೆ ಶೇ 25ರಷ್ಟು ಸಿಗಲಿದೆ.

3. ಕಾಯ್ದಿರಿಸುವ ಶುಲ್ಕ, ಸೂಪರ್‌ಫಾಸ್ಟ್ ಶುಲ್ಕ, ಜಿಎಸ್‌ಟಿ ಇತ್ಯಾದಿ ಹೆಚ್ಚುವರಿ ಮೊತ್ತ ಒಳಗೊಂಡಿರುತ್ತದೆ.

4. ಪ್ರಯಾಣದ ಮೊದಲ / ಕೊನೆಯ ಹಾಗು ಮಧ್ಯಂತರ ನಿಲ್ದಾಣಗಳ ಪ್ರಯಾಣಕ್ಕೆ ರಿಯಾಯಿತಿ ಪಡೆಯಬಹುದು.

5. ರಿಯಾಯಿತಿ ಶುಲ್ಕವು ರೈಲುಗಳಲ್ಲಿ ಸಿಗುವ ಊಟಕ್ಕೂ ಸಿಗಲಿದೆ.

6. ರಿಯಾಯಿತಿ ಶುಲ್ಕವು ವರ್ಷಪೂರ್ತಿ, ವರ್ಷದ ಕೆಲಭಾಗ ಅಥವಾ ತಿಂಗಳು ಅಥವಾ ಕಾಲೋಚಿತ ಅಥವಾ ವಾರದಲ್ಲಿ ಅಥವಾ ವಾರಾಂತ್ಯದಲ್ಲಿ ಸಿಗಬಹುದು.

7. ಚೆನ್ನೈ ಸೆಂಟ್ರಲ್​-ಮೈಸೂರು ಶತಾಬ್ಧಿ ಎಕ್ಸ್​ಪ್ರೆಸ್‌ ರೈಲು ಸಂಖ್ಯೆ 12007/12008, ಅಹಮದಾಬಾದ್-ಮುಂಬೈ ಸೆಂಟ್ರಲ್ ಶತಾಬ್ಧಿ ರೈಲು ಸಂಖ್ಯೆ 12010 ಹಾಗೂ ನ್ಯೂಜಲ್ಪೈಗುರಿ-ಹೌರಾ ಶತಾಬ್ಧಿ ಎಕ್ಸ್‌ಪ್ರೆಸ್ ರೈಲ್ವೆ ಸಂಖ್ಯೆ 12042; ಈ ಮೂರು ರೈಲು ಗಳಿಗೆ ರಿಯಾಯಿತಿ ಅನ್ವಯಿಸಲಿದೆ.

ABOUT THE AUTHOR

...view details