ಕರ್ನಾಟಕ

karnataka

By

Published : Oct 16, 2020, 4:35 PM IST

Updated : Oct 16, 2020, 4:42 PM IST

ETV Bharat / business

ಎಚ್​​ಸಿಎಲ್​ ಟೆಕ್​ನಿಂದ 9,000 ಫ್ರೆಶರ್ಸ್​​​ ನೇಮಕ... ಈಗ್ಲೇ ಸಿವಿ ಸಿದ್ಧಪಡಿಸಿಕೊಳ್ಳಿ!

ನೇಮಕಾತಿ ಯೋಜನೆಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 1,500ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ. ಇಂದು ಬಿಡುಗಡೆಯಾದ ಗಳಿಕೆಯ ಸಂಖ್ಯೆಯ ಪ್ರಕಾರ, ನೋಯ್ಡಾ ಮೂಲದ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 18.5ರಷ್ಟು ಏರಿಕೆ ಕಂಡಿದ್ದು, ನಿವ್ವಳ ಲಾಭ 3,142 ಕೋಟಿ ರೂ.ಯಷ್ಟಿದೆ.

HCL
ಎಚ್​​ಸಿಎಲ್

ಮುಂಬೈ: ಐಟಿಇಎಸ್​​ನ ಪ್ರಮುಖ ಎಚ್​​ಸಿಎಲ್ ಟೆಕ್ನಾಲಜೀಸ್ ಈ ಹಣಕಾಸಿನ ದ್ವಿತೀಯಾರ್ಧದಲ್ಲಿ 9,000 ಫ್ರೆಶರ್​ಗಳನ್ನು ನೇಮಕ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾಗಿ ತಿಳಿಸಿದೆ.

ಕಂಪನಿಯು ಅಕ್ಟೋಬರ್ 1ರಿಂದ ಇ-3 ಮಟ್ಟಗಳವರೆಗೆ ಮತ್ತು ಜನವರಿ 1ರಿಂದ ಇ - 4 ಮತ್ತು ಅದಕ್ಕೂ ಮೇಲ್ಮಟ್ಟದ ವೇತನ ಹೆಚ್ಚಳವನ್ನು ಜಾರಿಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಕೋವಿಡ್ ಅನಿಶ್ಚಿತತೆಯ ಮಧ್ಯೆ ಮುಂದೂಡಲ್ಪಟ್ಟ ವೇತನ ಮೌಲ್ಯಮಾಪನಗಳು ಹಿಂದಿನ ವರ್ಷಕ್ಕೆ ಹೋಲುತ್ತವೆ. ಕಳೆದ ವರ್ಷ ಕಂಪನಿಯು ಭಾರತದಲ್ಲಿನ ತನ್ನ ಸಿಬ್ಬಂದಿಗೆ ಸರಾಸರಿ ಶೇ 6 ರಷ್ಟು ಹೆಚ್ಚಳ ಮತ್ತು ಸಾಗರೋತ್ತರ ನೌಕರರ ವೇತನದಲ್ಲಿ ಶೇ 2.5ರಷ್ಟು ಏರಿಕೆ ನೀಡಿತ್ತು.

2020ರ ಸೆಪ್ಟೆಂಬರ್ ತ್ರೈಮಾಸಿಕದ ಕೊನೆಯಲ್ಲಿ ಎಚ್‌ಸಿಎಲ್ 1,53,085 ಉದ್ಯೋಗಿಗಳನ್ನು ಹೊಂದಿದ್ದರೆ, ಐಟಿ ಸೇವೆಗಳಿಗೆ (ಕಳೆದ 12 ತಿಂಗಳ ಆಧಾರದ ಮೇಲೆ) ಶೇ 12.2ರಷ್ಟಿದೆ.

ನೇಮಕಾತಿ ಯೋಜನೆಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 1,500ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ. ಇಂದು ಬಿಡುಗಡೆಯಾದ ಗಳಿಕೆಯ ಸಂಖ್ಯೆಯ ಪ್ರಕಾರ, ನೋಯ್ಡಾ ಮೂಲದ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 18.5ರಷ್ಟು ಏರಿಕೆ ಕಂಡಿದ್ದು, ನಿವ್ವಳ ಲಾಭ 3,142 ಕೋಟಿ ರೂ.ಯಷ್ಟಿದೆ. ಕಂಪನಿಯ ಡೀಲ್ ಪೈಪ್‌ಲೈನ್ ಶೇ 20ರಷ್ಟು (ತ್ರೈಮಾಸಿಕದಿಂದ ತ್ರೈಮಾಸಿಕ) ಏರಿಕೆಯಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್ ಆಸ್ಟ್ರೇಲಿಯಾದ ಐಟಿ ಸಂಸ್ಥೆ ಡಿಡಬ್ಲ್ಯೂಎಸ್ ಲಿಮಿಟೆಡ್ ಅನ್ನು 115.8 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು.

Last Updated : Oct 16, 2020, 4:42 PM IST

ABOUT THE AUTHOR

...view details