ಕರ್ನಾಟಕ

karnataka

ಚುನಾವಣೆ ನಂತರ 54 ಸಾವಿರ ಬಿಎಸ್​ಎನ್​ಎಲ್​ ನೌಕರರಿಗೆ ಗೇಟ್​ ಪಾಸ್​?... ಯಾಕೀ ಕಠಿಣ ನಿರ್ಧಾರ?

ಹಣಕಾಸು ಚೇತರಿಕೆ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಯಿತು. ಸಮಿತಿಯ 3 ಸದಸ್ಯರು 10 ಶಿಫಾಸುಗಳನ್ನು ಆಡಳಿತ ಮಂಡಳಿ ಮುಂದಿಟಿದೆ. ಅದರಲ್ಲಿ ಮೂರು ಅಂಶಗಳನ್ನು ಜಾರಿ ಮಾಡಲು ಗ್ರೀನ್​ ಸಿಗ್ನಲ್​ ನೀಡಿದ್ದು, ಸುಮಾರು 54 ಸಾವಿರ ಸಿಬ್ಬಂದಿ ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ.

By

Published : Apr 4, 2019, 9:43 AM IST

Published : Apr 4, 2019, 9:43 AM IST

Updated : Apr 4, 2019, 1:34 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ 'ಭಾರತ್​ ಸಂಚಾರ್​ ನಿಗಮ ನಿಯಮಿತ (ಬಿಎಸ್​ಎನ್​ಎಲ್) ಸುಮಾರು 54 ಸಾವಿರ ಉದ್ಯೋಗಿಗಳನ್ನು ಕೈಬಿಡುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದೆ.

ಸಾವಿರಾರು ಕೋಟಿ ನಷ್ಟದ ಕೂಪದಲ್ಲಿರುವ ಬಿಎಸ್​​ಎನ್​​ಎಲ್ ಹೊರ ಬರಬೇಕಾಗದರೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಮಗ್ರವಾಗಿ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಯಿತು. ಸಮಿತಿಯ 3 ಸದಸ್ಯರು 10 ಶಿಫಾಸುಗಳನ್ನು ಆಡಳಿತ ಮಂಡಳಿ ಮುಂದಿಟಿದೆ. ಅದರಲ್ಲಿ ಮೂರು ಅಂಶಗಳನ್ನು ಜಾರಿ ಮಾಡಲು ಗ್ರೀನ್​ ಸಿಗ್ನಲ್​ ನೀಡಿದ್ದು, ಸುಮಾರು 54 ಸಾವಿರ ಸಿಬ್ಬಂದಿ ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ.

ಸಮಿತಿಯ ಶಿಫಾರಸು ಮೇರೆಗೆ ಕೇಂದ್ರದ ಮುಂದೆ ಬಿಎಸ್​ಎನ್​ಎಲ್​ ಪ್ರಸ್ತಾಪಿಸಿದೆ. 'ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ತಡೆಹಿಡಿದಿದೆ. ಮುಂದಿನ ನಿರ್ದೇಶನದವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಆದೇಶಿಸಿದೆ ಎಂದು ಹೇಳಲಾಗುತ್ತಿದೆ.

ನಿವೃತ್ತಿ ವಯೋಮಿತಿ ಇಳಿಕೆ, 50 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್​ಎಸ್) ಘೋಷಿಸುವ ಶಿಫಾರಸನ್ನು ಮಂಡಳಿ ಗ್ರೀನ್ ಸಿಗ್ನಲ್​ ನೀಡಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಜಾರಿಯಾದರೆ ಸುಮಾರು 54,451 ಹುದ್ದೆ ಖಾಲಿಯಾಗಲಿದೆ.

ಸಂಸ್ಥೆಯ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ 31ರಷ್ಟು (1,74,312 ಸಿಬ್ಬಂದಿ) ಕಡಿತವಾಗಲಿದೆ. ವಾರ್ಷಿಕ ಸುಮಾರು ₹ 2 ಸಾವಿರ ಕೋಟಿ ಉಳಿಯಲಿದೆ ಎಂದು ಅಂದಾಜಿಸಲಾಗಿದೆ. ಈಗಿನ ಸ್ಪರ್ಧಾತ್ಮಕತೆಗೆ ತಕ್ಕಂತೆ 4ಜಿ ತರಂಗಾಂತರದ ವೇಗ ಹೆಚ್ಚಿಸುವ ಶಿಫಾರಸಿಗೆ ಬಿಎಸ್​ಎನ್​ಎಲ್ ಮಂಡಳಿ ಸಮ್ಮತಿಸಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

Last Updated : Apr 4, 2019, 1:34 PM IST

ABOUT THE AUTHOR

...view details