ಕರ್ನಾಟಕ

karnataka

ETV Bharat / business

ಬಜಾಜ್​ ಇ-ಸ್ಕೂಟರ್ ಬುಕ್ಕಿಂಗ್ ಶುರು​: ಸಿಂಗಲ್​ ಚಾರ್ಜ್​ಗೆ 95 ಕಿ.ಮೀ ಸಂಚಾರ, ದರ ಎಷ್ಟು ಗೊತ್ತೇ?

ಫೆಬ್ರವರಿ ಅಂತ್ಯಕ್ಕೆ ಗ್ರಾಹಕರಿಗೆ ಹೊಸ ಬಜಾಜ್ ಚೇತಕ್​ ಸಿಗಲಿದೆ. ಆರಂಭಿಕವಾಗಿ ಬೆಂಗಳೂರು ಮತ್ತು ಪುಣೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​ ಲಭ್ಯವಿರಲಿದೆ.

By

Published : Jan 14, 2020, 5:00 PM IST

Chetak e
ಬಜಾಜ್​ ಚೇತಕ್​

ಮುಂಬೈ:ಬಜಾಜ್​​ ಆಟೋದ ಬಹುನಿರೀಕ್ಷಿತ ಚೇತಕ್ ಎಲೆಕ್ಟ್ರಾನಿಕ್​ ಸ್ಕೂಟರ್​ ಬುಕ್ಕಿಂಗ್ ಜನವರಿ 15ರಿಂದ ಆರಂಭವಾಗಲಿದೆ.

2019ರ ಅಕ್ಟೋಬರ್​ನಲ್ಲಿ ಬಜಾಜ್​ ಆಟೋ ಹೊಸ ಚೇತಕ್​ ಅನಾವರಣಗೊಳಿಸಿತ್ತು. ಅರ್ಬೇನ್ ಹಾಗೂ ಪ್ರೀಮಿಯಂ ಎರಡು ಮಾದರಿಗಳಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​ ಲಭ್ಯವಿರಲಿದೆ. ಸ್ಕೂಟರ್​ನೊಂದಿಗೆ ಹೋಂ-ಚಾರ್ಜಿಂಗ್ ಸ್ಟೇಷನ್​ ಸಿಗಲಿದೆ.

ಚೇತಕ್‌ನ ಅಧಿಕೃತ ವೆಬ್​ಸೈಟ್​ನಲ್ಲಿ ಆರಂಭಿಕ ಮೊತ್ತ ₹ 2,000 ನೀಡಿ ಗ್ರಾಹಕರು ಸ್ಕೂಟರ್ ಬುಕ್ ಮಾಡಬಹುದು. ಡ್ರಮ್ ಬ್ರೇಕ್​ಗಳನ್ನು ಹೊಂದಿರುವ ಅರ್ಬೇನ್ ಮಾದರಿ ಸ್ಕೂಟರ್​ಗೆ ₹ 1 ಲಕ್ಷ, ಡಿಸ್ಕ್​​ ಬ್ರೇಕ್​ಗಳು ಹಾಗೂ ಲಕ್ಸುರಿ ಫಿನಿಷ್ ಹೊಂದಿರುವ ಚೇತಕ್ ಪ್ರೀಮಿಯಂ ಎಡಿಷನ್​​ಗೆ ₹ 1.15 ಲಕ್ಷ (ಎಕ್ಸ್​ ಷೋರೂಂ) ನಿಗದಿಯಾಗಿದೆ.

4 ಕಿ.ವ್ಯಾಟ್​ ಎಲೆಕ್ಟ್ರಿಕ್​ ಮೋಟರ್ ಹೊಂದಿದ್ದು ಲಿಥಿಯಮ್​-ಅಯಾನ್​ ಬ್ಯಾಟರಿ ಒಳಗೊಂಡಿದೆ. ಒಮ್ಮೆ ಪೂರ್ಣ ಚಾರ್ಜ್​ ಮಾಡಿದರೆ ಇಕೊ ಮೋಡ್‌​ನಲ್ಲಿ 95 ಕಿ.ಮೀ. ಕ್ರಮಿಸಬಹುದು. ಸ್ಪೋರ್ಟ್​ ಮೋಡ್​ನಲ್ಲಿ ಸ್ಕೂಟರ್‌ಗೆ 85 ಕಿ.ಮೀ ದೂರ ಸಂಚರಿಸುವ ಸಾಮರ್ಥ್ಯವಿದೆ. 3 ವರ್ಷ ಮತ್ತು 50,000 ಕಿ.ಮೀ.ವರೆಗೂ ಬ್ಯಾಟರಿಗೆ ವಾಯ್ದೆ ನೀಡಲಾಗಿದೆ.ಬೈಕ್‌ನ ಪ್ರಾರಂಭಿಕ ಬೆಲೆ ₹ 1 ಲಕ್ಷ ಇರಲಿದೆ ಎಂದು ಕಂಪನಿ ತಿಳಿಸಿದೆ.

ABOUT THE AUTHOR

...view details