ನವದೆಹಲಿ: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ಒನ್ಪ್ಲಸ್ ಹೊಸ 5 ಜಿ ಶ್ರೇಣಿಯ ಒನ್ಪ್ಲಸ್ 8 ಪ್ರೊ ಮತ್ತು ಕಾಂಪ್ಯಾಕ್ಟ್ ಫ್ಲ್ಯಾಗ್ಶಿಪ್ ಒನ್ಪ್ಲಸ್ 8 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ್ದು, ಶೀಘ್ರವೇ ಭಾರತದಲ್ಲಿ ಈ ಸ್ಮಾರ್ಟ್ಫೋನ್ಗಳು ಲಭ್ಯವಾಗಲಿವೆ.
ಅಮೆರಿಕದಲ್ಲಿ ಒನ್ಪ್ಲಸ್ 8 (8 ಜಿಬಿ+128 ಜಿಬಿ) ಸ್ಮಾರ್ಟ್ಫೋನ್ ಬೆಲೆ 53 ಸಾವಿರ ರೂಪಾಯಿ ಇದ್ದರೆ, 12 ಜಿಬಿ + 265 ಜಿಬಿ ಆವೃತ್ತಿಯ ಫೋನ್ಗಳು 60 ಸಾವಿರ ರೂಪಾಯಿ ಬೆಲೆ ಇವೆ.
ಇದೇ ಬೇಸಿಗೆಯಿಂದ ಭಾರತದಲ್ಲಿ ಲಭ್ಯವಾಗುವ ಈ ಸ್ಮಾರ್ಟ್ಫೋನ್ಗಳ ಸ್ಥಳೀಯ ಬೆಲೆಯನ್ನು ಸದ್ಯದಲ್ಲೇ ತಿಳಿಸಲಾಗುತ್ತದೆ.
ಒನ್ಪ್ಲಸ್ 8 ಪ್ರೊ(OnePlus 8 Pro) ವೈಶಿಷ್ಟ್ಯಗಳು:
- ಒನ್ಪ್ಲಸ್ 8 ಪ್ರೊ 6.78-ಇಂಚಿನ 120 ಹರ್ಟ್ಜ್ QHD ಫ್ಲೂಯಿಡ್ ಡಿಸ್ಪ್ಲೇ ಹೊಂದಿದೆ. ಡಿಸ್ಪ್ಲೇ ವಿಮರ್ಶೆ ಸಂಸ್ಥೆಯಾದ ಡಿಸ್ಪ್ಲೇಮೇಟ್ನಿಂದ A+ ರೇಟಿಂಗ್ ಗಳಿಸಿದೆ.
- ಈ ಫೋನ್ 12 ಜಿಬಿ RAM ಮತ್ತು 256 ಜಿಬಿ ಮೆಮೊರಿ ಹೊಂದಿದೆ.
- ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ x55 5ಜಿ ಮೋಡೆಮ್-ಆರ್ಎಫ್ ಸಿಸ್ಟಮ್ನೊಂದಿಗೆ ಈ ಸ್ಮಾರ್ಟ್ ಫೋನ್ ಸ್ನ್ಯಾಪ್ಡ್ರ್ಯಾಗನ್ 865 ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಮಲ್ಟಿ-ಗಿಗಾಬೈಟ್ 5ಜಿ ಸಂಪರ್ಕ ಮತ್ತು ಸುಧಾರಿತ ವೈ-ಫೈ 6 ಕಾರ್ಯಕ್ಷಮತೆಯನ್ನು ಹೊಂದಿದೆ.
- ಈ ಸ್ಮಾರ್ಟ್ ಫೋನ್ ಕ್ವಾಡ್-ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ, 48 ಎಂಪಿ ಮುಖ್ಯ ಕ್ಯಾಮರಾವನ್ನು ಹೊಂದಿದೆ. ಮತ್ತೊಂದು 48 ಎಂಪಿ ಅಲ್ಟ್ರಾ-ವೈಡ್ ಲೆನ್ಸ್, 120 ಡಿಗ್ರಿಯಲ್ಲಿ ವಿಡಿಯೋ ಸೆರೆಹಿಡಿಯಬಹುದು. 5 ಎಂಪಿ ವಿಶಿಷ್ಟ ಕಲರ್ ಫಿಲ್ಟರ್ ಕ್ಯಾಮರಾವನ್ನು ಹೊಂದಿದ್ದು, ಕ್ಯಾಮರಾದಲ್ಲಿ ಸೋನಿಯ ಸೆನ್ಸಾರ್ ಬಳಸಲಾಗಿದೆ.
- ಕ್ಯಾಮರಾ ಸೆಟಪ್ ಹೈಬ್ರಿಡ್ ಇಮೇಜ್ ಸ್ಟೆಬಿಲೈಸೇಶನ್ ಹೊಂದಿದ್ದು, ಹೆಚ್ಚು ಸ್ಥಿರವಾದ ವಿಡಿಯೋಗಳಿಗಾಗಿ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಷನ್ ಇದೆ.
- 16 ಎಂಪಿ ಫ್ರಂಟ್ ಕ್ಯಾಮರಾವನ್ನು ಸಹ ಒಳಗೊಂಡಿದೆ.
- ಒನ್ಪ್ಲಸ್ 8 ಪ್ರೊ ಸ್ಮಾರ್ಟ್ಫೋನ್ 4510 ಎಂಎಹೆಚ್ ಬ್ಯಾಟರಿಯನ್ನು ಹೊಂದಿದೆ. ವೈರ್ಲೆಸ್ ಚಾರ್ಜಿಂಗ್ ಸೌಲಭ್ಯವಿದ್ದು, ಇದು ಕೇವಲ 30 ನಿಮಿಷಗಳಲ್ಲಿ 50 ರಷ್ಟು ಚಾರ್ಜ್ ಮಾಡಬಲ್ಲದು.
- ಆಕರ್ಷಕವಾದ ಕಪ್ಪು, ನೀಲಿ ಮತ್ತು ತಿಳಿ ಹಸಿರು ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.