ಕರ್ನಾಟಕ

karnataka

ETV Bharat / business

ಷಿಯೋಮಿ ಬಿಗಿ ಹಿಡಿತದಲ್ಲಿ ಭಾರತದ ಸ್ಮಾರ್ಟ್​ಫೋನ್ ಮಾರ್ಕೆಟ್..! - ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಷಿಯೋಮಿ ಮುಂದು

ಭಾರತ ಮೊಬೈಲ್ ಮಾರುಕಟ್ಟೆಯಲ್ಲಿ ಷಿಯೋಮಿ ಸಂಸ್ಥೆ ಶೇ.26ರಷ್ಟು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದು, ಶೇ.20ರಷ್ಟು ಸ್ಯಾಮ್​ಸಂಗ್ ಸಂಸ್ಥೆ ಎರಡನೇ ಸ್ಥಾನದಲ್ಲಿದೆ. ವಿವೋ ಶೇ.17, ರಿಯಲ್​ಮಿ ಶೇ.16 ಹಾಗೂ ಒಪ್ಪೋ ಶೇ.8ರಷ್ಟು ಭಾರತೀಯ ಮಾರುಕಟ್ಟೆ ಹೊಂದಿದೆ.

ಷಿಯೋಮಿ

By

Published : Oct 28, 2019, 12:39 PM IST

ನವದೆಹಲಿ:ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಷಿಯೋಮಿ ಸಂಸ್ಥೆ ತನ್ನ ಪ್ರಾಬಲ್ಯ ಮುಂದುವರೆಸಿದ್ದು, ಸಂಸ್ಥೆಯ ಮೊಬೈಲ್​ಗಳ ಮಾರಾಟದಲ್ಲಿ ಶೇ.7ರಷ್ಟು ಏರಿಕೆಯಾಗಿದೆ.

ಷಿಯೋಮಿ ಸಂಸ್ಥೆಯ ಕಳೆದ ತ್ರೈಮಾಸಿಕದಲ್ಲಿ ನಾಲ್ಕು ಕೋಟಿಗೂ ಅಧಿಕ ಸ್ಮಾರ್ಟ್​ಫೋನ್ ಬಿಕರಿಯಾಗಿ ಭಾರಿ ಲಾಭ ತಂದುಕೊಟ್ಟಿದೆ. ಆನ್​ಲೈನ್ ವ್ಯಾಪಾರ,​​ ಡಿಸ್ಕೌಂಟ್ ಹಾಗೂ ಹಬ್ಬದ ದಿನಗಳ ಮಾರಾಟ ಷಿಯೋಮಿ ಮೊಬೈಲ್​ಗಳ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ.

ಭಾರತ ಮೊಬೈಲ್ ಮಾರುಕಟ್ಟೆಯಲ್ಲಿ ಷಿಯೋಮಿ ಸಂಸ್ಥೆ ಶೇ.26ರಷ್ಟು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದು, ಶೇ.20ರಷ್ಟು ಸ್ಯಾಮ್​ಸಂಗ್ ಸಂಸ್ಥೆ ಎರಡನೇ ಸ್ಥಾನದಲ್ಲಿದೆ. ವಿವೋ ಶೇ.17, ರಿಯಲ್​ಮಿ ಶೇ.16 ಹಾಗೂ ಒಪ್ಪೋ ಶೇ.8ರಷ್ಟು ಭಾರತೀಯ ಮಾರುಕಟ್ಟೆ ಹೊಂದಿದೆ.

ಸ್ಯಾಮ್​​ಸಂಗ್ ಕಳೆದ ತ್ರೈಮಾಸಿಕದಲ್ಲಿ ಕೊಂಚ ಇಳಿಕೆಯ ಹಾದಿ ಹಿಡಿದಿದ್ದು, ಶೇ.4ರಷ್ಟು ಕುಸಿತ ಕಂಡಿದೆ. ಚೀನಾ ಮೂಲದ ವಿವೋ, ರೀಯಲ್​ಮಿ ಹಾಗೂ ಒಪ್ಪೋ ಮೊಬೈಲ್​ಗಳ ತೀವ್ರ ಸ್ಫರ್ಧೆಯಿಂದ ಸ್ಯಾಮ್​ಸಂಗ್ ಮಾರುಕಟ್ಟೆ ಕೊಂಚ ವಿಚಲಿತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details