ಕರ್ನಾಟಕ

karnataka

By

Published : Mar 9, 2021, 5:29 PM IST

ETV Bharat / business

ಅಮೆರಿಕ ಕನಸಿನ H-1B ವೀಸಾ ಅರ್ಜಿ ಸಲ್ಲಿಕೆ ಶುರು: ನೀವು ತಿಳಿಯಬೇಕಾದ ಸಂಗತಿಗಳಿವು..

ಮಾರ್ಚ್ 25ರವರೆಗೆ ನೋಂದಣಿ ವಿಂಡೋ ತೆರೆದಿರಲಿದ್ದು, ಲಾಟರಿ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ ವರ್ಷದಿಂದ ವೇತನ ಆಧಾರಿತ ಅರ್ಜಿ ಮೂಲಕ ಲಾಟರಿ ವ್ಯವಸ್ಥೆ ಬದಲಾಯಿಸಬಹುದು. ಆಯ್ಕೆಯಾಗುವವರಿಗೆ ಮಾರ್ಚ್ 31ರಂದು ಈ ಬಗ್ಗೆ ತಿಳಿಸಲಾಗುತ್ತದೆ. ಏಪ್ರಿಲ್ 1ರಿಂದ ಅರ್ಜಿ ಸಲ್ಲಿಸಲು ಪ್ರಾರಂಭಿಸಬಹುದು. ಅಕ್ಟೋಬರ್ 1ರಿಂದ ಅಮೆರಿಕನ್ ಹಣಕಾಸು ವರ್ಷ ಪ್ರಾರಂಭವಾದಾಗ ಅರ್ಜಿದಾರರು ತಮ್ಮ ಕೆಲಸದ ಸ್ಥಳಗಳಿಗೆ ಸೇರಬಹುದು.

US H-1B Visa
US H-1B Visa

ನ್ಯೂಯಾರ್ಕ್​:ಅಮೆರಿಕದ ವ್ಯಾಪ್ತಿಯಲ್ಲಿ 2022ರ ವರ್ಷಕ್ಕೆ ಎಚ್-1ಬಿ ವೀಸಾಗೆ ಯುನೈಟೆಡ್ ಸ್ಟೇಟ್ಸ್ ಸಿಟಿಜನ್​ಷಿಪ್ ಆ್ಯಂಡ್ ಇಮಿಗ್ರೇಷನ್ ಸರ್ವೀಸಸ್ (ಯುಎಸ್​ಸಿಐಎಸ್) ನಿಯಮಗಳಡಿ ವೆಬ್​ಸೈಟ್​​ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ಇಂದಿನಿಂದ ಕಲ್ಪಿಸಲಾಗುತ್ತದೆ.

ಮಾರ್ಚ್ 25ರವರೆಗೆ ನೋಂದಣಿ ವಿಂಡೋ ತೆರೆದಿರಲಿದೆ. ಲಾಟರಿ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ ವರ್ಷದಿಂದ ವೇತನ ಆಧಾರಿತ ಅರ್ಜಿಯ ಮೂಲಕ ಲಾಟರಿ ವ್ಯವಸ್ಥೆ ಬದಲಾಯಿಸಬಹುದು. ಆಯ್ಕೆಯಾಗುವವರಿಗೆ ಮಾರ್ಚ್ 31ರಂದು ಈ ಬಗ್ಗೆ ತಿಳಿಸಲಾಗುತ್ತದೆ. ಏಪ್ರಿಲ್ 1ರಿಂದ ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭಿಸಬಹುದು. ಅಕ್ಟೋಬರ್ 1ರಿಂದ ಅಮೇರಿಕನ್ ಹಣಕಾಸು ವರ್ಷ ಪ್ರಾರಂಭವಾದಾಗ ಅರ್ಜಿದಾರರು ತಮ್ಮ ಕೆಲಸದ ಸ್ಥಳಗಳಿಗೆ ಸೇರಬಹುದು.

ಇದನ್ನೂ ಓದಿ: ಆಭರಣ ಪ್ರಿಯರಿಗೆ ಶಾಕ್​: 553 ರೂ. ಜಿಗಿದ ಬೆಳ್ಳಿ, ಬಂಗಾರದ ದರದಲ್ಲೂ ಏರಿಕೆ!

ಎಚ್​-1ಬಿ ವಲಸೆರಹಿತ ವೀಸಾ ಆಗಿದ್ದು, ತಾಂತ್ರಿಕ ಪರಿಣತಿಯನ್ನು ಕೋರಿ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯುಎಸ್ ಕಂಪನಿಗಳಿಗೆ ಅವಕಾಶ ನೀಡುತ್ತದೆ. 2021ರ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ಹಣಕಾಸಿನ ವರ್ಷದಲ್ಲಿ ಯುಎಸ್​ಸಿಐಎಸ್ ಕಳೆದ ಫೈಲಿಂಗ್ ಋತುವಿನಲ್ಲಿ ಪ್ರಾಯೋಜಕ ಉದ್ಯೋಗದಾತರಿಂದ 2.75 ಲಕ್ಷ ನೋಂದಣಿ ಪಡೆದಿದೆ. ಪ್ರತಿವರ್ಷ ಸುಮಾರು 85,000 ಹೊಸ ಎಚ್ -1 ಬಿ ವೀಸಾ ನೀಡಲಾಗುತ್ತದೆ. ಇದರಲ್ಲಿ ವೀಸಾದ ಅತಿದೊಡ್ಡ ಫಲಾನುಭವಿಗಳು ಭಾರತೀಯರು ಹಾಗೂ ಭಾರತೀಯ ಐಟಿ ಸೇವಾ ಸಂಸ್ಥೆಗಳು ಪಡೆದುಕೊಳ್ಳುತ್ತಿವೆ.

ಎಚ್​-1ಬಿ ವೀಸಾ ಅರ್ಜಿ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ..

1. ಏಜೆನ್ಸಿಯು ಅಗತ್ಯ ಸಂಖ್ಯೆಯ ನೋಂದಣಿ ಸ್ವೀಕರಿಸಿದರೆ, ಮಾರ್ಚ್ 25ರೊಳಗೆ ಅದು ಅರ್ಜಿಗಳನ್ನು ಕಟ್ಟಲೆಯಿಲ್ಲದೆ (ಯಾದೃಚ್ಛಿಕ) ಆಯ್ಕೆ ಮಾಡುತ್ತದೆ. ಮಾರ್ಚ್ 31ರೊಳಗೆ ಆಯ್ಕೆ ಅಧಿಸೂಚನೆ ಕಳುಹಿಸುತ್ತದೆ.

2. ಕಾಂಗ್ರೆಸ್ ಆದೇಶದಂತೆ ಯುಎಸ್‌ಸಿಐಎಸ್‌ನಿಂದ ಗರಿಷ್ಠ 65,000 ಎಚ್ -1 ಬಿ ವೀಸಾ ನೀಡಬಹುದು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ವಿಷಯಗಳಲ್ಲಿ ಯುಎಸ್ ವಿಶ್ವವಿದ್ಯಾಲಯದಿಂದ ಉನ್ನತ ವ್ಯಾಸಂಗ ಮುಗಿಸಿದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಯುಎಸ್‌ಸಿಐಎಸ್ ಹೆಚ್ಚುವರಿಯಾಗಿ 20,000 ಎಚ್ -1 ಬಿ ವೀಸಾ ನೀಡಬಹುದು.

3. ಸಾಂಪ್ರದಾಯಿಕ ಲಾಟರಿ ವ್ಯವಸ್ಥೆಯನ್ನು 2021ರ ಡಿಸೆಂಬರ್ 31ರವರೆಗೆ ಎಚ್ -1 ಬಿ ವೀಸಾ ನೀಡಲು ಬಳಸಲಾಗುತ್ತದೆ. ಲಾಟರಿ ಆಧಾರಿತ ಆಯ್ಕೆ ಪ್ರಕ್ರಿಯೆಯನ್ನು ಈ ವರ್ಷ ಕೊನೆಯ ಬಾರಿಗೆ ಬಳಸುವ ಸಾಧ್ಯತೆ ಇದೆ. ಮುಂದಿನ ವರ್ಷ ಇದನ್ನು ವೇತನ ಆಧಾರಿತ ಆಯ್ಕೆಯೊಂದಿಗೆ ಬದಲಾಯಿಸಲಾಗುವುದು. ಬೈಡನ್ ಆಡಳಿತವು ವೇತನ ಆಧಾರಿತ ಎಚ್ -1 ಬಿ ಅರ್ಜಿಗಳನ್ನು ಡಿಸೆಂಬರ್ 31ರವರೆಗೆ ಸ್ಥಗಿತಗೊಳಿಸಿದೆ.

4. 2020ರಲ್ಲಿ 30 ವರ್ಷಗಳಲ್ಲಿ ಮೊದಲ ಬಾರಿಗೆ 85,000 ವೀಸಾಗಳ ವಾರ್ಷಿಕ ಕೋಟಾ ಭರ್ತಿ ಮಾಡಲು ಸಾಕಷ್ಟು ಅರ್ಜಿಗಳು ಸಿಗದ ಕಾರಣ ವಲಸೆ ಸಂಸ್ಥೆ ಎರಡನೇ ಲಾಟರಿಗೆ ಹೋಗಬೇಕಾಯಿತು.

ABOUT THE AUTHOR

...view details