ಕರ್ನಾಟಕ

karnataka

ಧ್ವನಿ ಸಂದೇಶಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸುತ್ತಿರುವ ಟ್ವಿಟರ್

ಉತ್ತಮ ಮತ್ತು ಸುಲಭವಾದ ಡಿಎಂ ಸಂಭಾಷಣೆಗಳಿಗಾಗಿ ಟ್ವಿಟರ್ 140 ಸೆಕೆಂಡುಗಳವರೆಗೆ ಧ್ವನಿ ಸಂದೇಶಗಳನ್ನು ಪರೀಕ್ಷಿಸುತ್ತಿದೆ. ಭಾರತ, ಜಪಾನ್ ಮತ್ತು ಬ್ರೆಜಿಲ್‌ನಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ವೈಶಿಷ್ಟ್ಯವು ಲಭ್ಯ ಇರುತ್ತದೆ.

By

Published : Feb 17, 2021, 1:38 PM IST

Published : Feb 17, 2021, 1:38 PM IST

ಟ್ವಿಟರ್
ಟ್ವಿಟರ್

ನವದೆಹಲಿ:ಭಾರತದಲ್ಲಿ 140 ಸೆಕೆಂಡ್​​​​ಗಳವರೆಗೆ ನೇರ ಸಂದೇಶಗಳಲ್ಲಿ (ಡಿಎಂ) ಧ್ವನಿ ಸಂದೇಶಗಳನ್ನು ಕಳುಹಿಸುವ ಕುರಿತು ಪರೀಕ್ಷಿಸಲಾಗುತ್ತಿದೆ ಎಂದು ಟ್ವಿಟರ್ ಬುಧವಾರ ಹೇಳಿದೆ.

ಈ ಪ್ರಯೋಗವನ್ನು ಹಂತ ಹಂತವಾಗಿ ಟ್ವಿಟರ್​ ಬಳಕೆದಾರರಿಗೆ ನೀಡಲಾಗುವುದು. ಬ್ರೆಜಿಲ್ ಮತ್ತು ಜಪಾನ್ ಜೊತೆಗೆ ಭಾರತವು ಈ ಒಂದು ಹೊಸ ವೈಶಿಷ್ಟ್ಯ ಪ್ರವೇಶಿಸುತ್ತಿರುವ ಮೂರು ದೇಶಗಳಲ್ಲಿ ಒಂದಾಗಿದೆ.

ಡಿಎಂಗಳಲ್ಲಿನ ಧ್ವನಿ ಸಂದೇಶಗಳು ಜನರಿಗೆ ಸಂಭಾಷಣೆ ನಡೆಸಲು ತುಂಬಾ ಸುಲಭವಾಗಿಸುತ್ತದೆ. ಡಿಎಂಗಳ ಪ್ರಯೋಗದಲ್ಲಿನ ಧ್ವನಿ ಸಂದೇಶಗಳನ್ನು ದೇಶಕ್ಕೆ ತರಲು ನಾವು ಉತ್ಸುಕರಾಗಿದ್ದೇವೆ. ಧ್ವನಿಯನ್ನು ಕೇಳುವ ಮೂಲಕ ಇರುವ ಸೂಕ್ಷ್ಮ ವ್ಯತ್ಯಾಸಗಳು, ಭಾವನೆ ಮತ್ತು ಅನುಭೂತಿಯ ಮೂಲಕ ಸಂಪರ್ಕ ಸಾಧಿಸಲು ಇದು ಸಹಾಯ ಮಾಡುತ್ತೇವೆ" ಎಂದು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಮನೀಶ್ ಮಹೇಶ್ವರಿ ಹೇಳಿದ್ದಾರೆ.

ಪ್ರತಿಯೊಂದು ಧ್ವನಿ ಸಂದೇಶವು 140 ಸೆಕೆಂಡುಗಳವರೆಗೆ ಇರಬಹುದು ಮತ್ತು ಜನರು ತ್ವರಿತವಾಗಿ ಚಾಟ್ ಮಾಡಲು ಇದು ಸಹಾಯ ಮಾಡುತ್ತದೆ. ಚಲಿಸುತ್ತಿರುವಾಗ ಟೈಪ್​ ಮಾಡಲು ಸಾಧ್ಯ ಇಲ್ಲದಿರುವಾಗ ಧ್ವನಿ ಸಂದೇಶವನ್ನು ಕಳುಹಿಸಬಹುದಾಗಿದೆ.

ಓದಿ: ಸುಮಾರು 1,352 ಕೋಟಿ ರೂ. ಚಿನ್ನದ ಆಭರಣಗಳ ಆರ್ಡರ್​ ಪಡೆದ ರಾಜೇಶ್ ಎಕ್ಸ್‌ಪೋರ್ಟ್ಸ್

"ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಬಳಕೆದಾರರು ಟ್ವಿಟರ್​​ನಲ್ಲಿ ಸಂಭಾಷಣೆ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು, ಹೆಚ್ಚಿನ ಆಯ್ಕೆಗಳನ್ನು ನೀಡಲು ನಾವು ಸಿದ್ಧರಾಗಿದ್ದೇವೆ ಎಂದು ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್​ ಮಹೇಶ್ವರಿ ಹೇಳಿದ್ದಾರೆ.

ಹೊಸ ವೈಶಿಷ್ಟ್ಯವು ಈ ರೀತಿ ಕಾರ್ಯನಿರ್ವಹಿಸುತ್ತದೆ:

ಡಿಎಂ ಸಂಭಾಷಣೆಯಲ್ಲಿ ರೆಕಾರ್ಡಿಂಗ್ ಪ್ರಾರಂಭಿಸಲು ಹೊಸ ಧ್ವನಿ ರೆಕಾರ್ಡಿಂಗ್ ಐಕಾನ್​ನನ್ನು ಒಮ್ಮೆ ಟ್ಯಾಪ್ ಮಾಡಿ.

ನೀವು ಪೂರ್ಣಗೊಳಿಸಿದಾಗ ಸ್ಟಾಪ್ ಐಕಾನ್ ಟ್ಯಾಪ್ ಮಾಡಿ ಮತ್ತು ನಿಮ್ಮ ರೆಕಾರ್ಡಿಂಗ್​ನನ್ನು ಕಳುಹಿಸುವ ಅಥವಾ ಅಳಿಸುವ ಮೊದಲು ಅದನ್ನು ಕೇಳುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಪರ್ಯಾಯವಾಗಿ, ಐಒಎಸ್​ನಲ್ಲಿ, ನೀವು ಧ್ವನಿ ರೆಕಾರ್ಡಿಂಗ್ ಐಕಾನ್​ನನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಮತ್ತು ನೀವು ಮಾತನಾಡಿದ ನಂತರ ತಕ್ಷಣ ಕಳುಹಿಸಲು ಸ್ವೈಪ್ ಮಾಡಿ ತ್ವರಿತವಾಗಿ ಕಳುಹಿಸಬಹುದು.

ಟ್ವಿಟರ್​ ಅನ್ನು ಎಲ್ಲಿ ಬಳಸಿದರೂ, ಎಲ್ಲಿಯಾದರೂ ಈ ಸಂದೇಶಗಳನ್ನು ಕೇಳಬಹುದಾಗಿದೆ. ಟ್ವಿಟರ್​ನಲ್ಲಿ ಧ್ವನಿ ಸಂದೇಶಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವು ಐಒಎಸ್ ಮತ್ತು ಆಂಡ್ರಾಯ್ಡ್​​ಗಳನ್ನು ಬಳಸುವ ಜಪಾನ್, ಬ್ರೆಜಿಲ್​​ ಹಾಗೂ ಭಾರತ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.

ಜನರು ನಿಮ್ಮ ಧ್ವನಿ ಟ್ವೀಟ್​ನನ್ನು ಇತರ ಟ್ವೀಟ್‌ಗಳ ಜೊತೆಗೆ ಅವರ ಟೈಮ್‌ಲೈನ್‌ನಲ್ಲಿ ಹಾಕಬಹುದಾಗಿದೆ.

ABOUT THE AUTHOR

...view details