ನವದೆಹಲಿ: ವಿತ್ತೀಯ ಸಚಿವಾಲಯದ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ತಮ್ಮ ವೃತ್ತಿ ಜೀವನದ ಕೊನೆಯ ಕೆಲಸದ ಅವಧಿಯನ್ನು ಶನಿವಾರ ಪೂರ್ಣಗೊಳಿಸಿದರು.
ನಿವೃತ್ತಿಯ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಭಾವನಾತ್ಮಕ ಸಂದೇಶವನ್ನು ರಾಜೀವ್ ಕುಮಾರ್ ಅವರು ಬರೆದುಕೊಂಡಿದ್ದಾರೆ.

'ನಾನು ಓರ್ವ ನಾಗರಿಕ ಸೇವಕನಾದ ನಂತರ (ಯಾವಾಗಲೂ ನಾಗರಿಕ ಮತ್ತು ಸಾರ್ವಜನಿಕ ಸೇವಕನೆಂಬ ಪ್ರಜ್ಞೆ) 38 ವರ್ಷಗಳಿಗೂ ಹೆಚ್ಚಿನ ಪ್ರಯಾಣವು ತ್ಯಾಗಕ್ಕೂ ಹೆಚ್ಚಿನದು. ಸಮಾಜಕ್ಕೆ ಮಾಹಿತಿ ಮತ್ತು ಪಾರದರ್ಶಕ ಸೇವೆ, ನ್ಯಾಯಯುತವಾದ ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ಕಾರಣವಾದವು. ಸಾಮಾಜಿಕ ಸಮಾನತೆ ಆಳವಾಗಿ ಬೇರೂರಿದವು ಎಂದು ತಮ್ಮ ಸೇವಾ ಅವಧಿಯ ಏಳು-ಬೀಳುಗಳ ಬಗ್ಗೆ ಬರೆದುಕೊಂಡಿದ್ದಾರೆ.
ಆಧಾರ ಸ್ತಂಭ, ಶಕ್ತಿಯ ಮೂಲ, ಯಾವುದೇ ಬೇಡಿಕೆಯಿಲ್ಲದ ಮತ್ತು ಇಷ್ಟು ವರ್ಷಗಳಲ್ಲಿ ಒಂದಾಗಿರುವುದಕ್ಕೆ ಧನ್ಯವಾದಗಳು. ಕೆಳಗಿಳಿದು ಸೂರ್ಯಾಸ್ತದ ಮೊದಲು ಕಚೇರಿಯನ್ನು ತೊರೆದು ನಿನ್ನೊಂದಿಗೆ ಕಳೆಯುವುದು ಬಹು ಸಂತೋಷ. ಇನ್ನೂ ಅನೇಕ ದಿನಗಳನ್ನು ನಿನೊಂದಿಗೆ ಸಾಗಲು ಎದುರು ನೋಡುತ್ತಿದ್ದೇನೆ ಎಂದು ಪತ್ನಿಯೊಂದಿಗಿನ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.