ಕರ್ನಾಟಕ

karnataka

ETV Bharat / business

27 ಜೆನೆರಿಕ್ ಕೀಟನಾಶಕಗಳನ್ನು ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ! - ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

27 ಜೆನೆರಿಕ್ ಕೀಟನಾಶಕಗಳನ್ನು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಕೀಟನಾಶಕ ಉದ್ಯಮ ಸಂಸ್ಥೆ ಪಿಎಂಎಫ್‌ಐಐ ವಿರೋಧಿಸಿದೆ.

chemical
chemical

By

Published : Jun 18, 2020, 3:43 PM IST

ನವದೆಹಲಿ:ಸರ್ಕಾರವು 27 ಜೆನೆರಿಕ್ ಕೀಟನಾಶಕಗಳನ್ನು ನಿಷೇಧಿಸುವ ನಿರ್ಧಾರವನ್ನು ಉದ್ಯಮಿಗಳು ವಿರೋಧಿಸಿದ್ದು, ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿ ಆರ್.ಕೆ.ಚತುರ್ವೇದಿ, ಕೃಷಿ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದು ಈ ಕೀಟನಾಶಕಗಳನ್ನು ನಿಷೇಧಿಸುವ ನಿರ್ಧಾರ ಪ್ರಸ್ತುತ ಪರಿಸ್ಥಿತಿಯಲ್ಲಿ ಸರಿಯಾಗಿಲ್ಲ ಎಂದು ಹೇಳಿದ ಬಳಿಕ ತಯಾರಕರ ಸಂಘಕ್ಕೆ ಬೆಂಬಲ ದೊರಕಿಂತಾಗಿದೆ.

27 ಕೀಟನಾಶಕಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದ ಒಂದು ತಿಂಗಳಲ್ಲಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈ ನಿರ್ಧಾರವನ್ನು ಪರಿಶೀಲಿಸಿ, ನಿಷೇಧಿತ ಕೀಟನಾಶಕಗಳನ್ನು ರಫ್ತು ಮಾಡಲು ಪ್ರಕರಣದ ಆಧಾರದ ಮೇಲೆ ಸರ್ಕಾರ ಅನುಮತಿಸುತ್ತದೆ ಎಂದು ಹೇಳಿದರು.

27 ಕೀಟನಾಶಕಗಳನ್ನು ನಿಷೇಧಿಸುವ ಸರ್ಕಾರದ ಪ್ರಸ್ತಾಪವನ್ನು ಕೀಟನಾಶಕ ಉದ್ಯಮ ಸಂಸ್ಥೆ ಪಿಎಂಎಫ್‌ಐಐ ವಿರೋಧಿಸಿದೆ. ಇದು 6,000 ಕೋಟಿ ರೂ.ಗಳ ವ್ಯವಹಾರ ನಷ್ಟಕ್ಕೆ ಕಾರಣವಾಗುತ್ತದೆ. ಜೊತೆಗೆ ಇದು ಚೀನಾಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. ಹೀಗಾಗಿ ಕೀಟನಾಶಕಗಳ ನಿಷೇಧ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಪಿಎಂಎಫ್‌ಐಐ ಒತ್ತಾಯಿಸಿದೆ.

ABOUT THE AUTHOR

...view details