ಕರ್ನಾಟಕ

karnataka

ETV Bharat / business

ಸಿಲಿಕಾನ್​ ಸಿಟಿಯ ಖಾಸಗಿ ನೌಕರರಿಗೆ ಸಿಹಿ ಸುದ್ದಿ ಕೊಟ್ಟ 'ಟೀಮ್ ಲೀಸ್​' ವರದಿ

ಟೀಮ್ ಲೀಸ್​ನ ವಾರ್ಷಿಕ ವರದಿಯ ಪ್ರಕಾರ, ಮೆಟ್ರೊ ನಗರಗಳಲ್ಲಿನ ಖಾಸಗಿ ಸಂಸ್ಥೆಗಳ ನೌಕರರ ವೇತನದಲ್ಲಿ ಎರಡಂಕಿ (ಶೇ 10ರಿಂದ ಶೇ 11ರಷ್ಟು) ಏರಿಕೆ ಆಗಲಿದೆ ಎಂದಿದೆ. ವಿಶ್ಲೇಷಣೆಗಾಗಿ ದೇಶದ ಪ್ರಮುಖ 9 ನಗರಗಳನ್ನು ಆಯ್ದುಕೊಂಡು 17 ವಲಯಗಳಲ್ಲಿನ 2 ಲಕ್ಷ ಸಂಬಳ ಪಡೆಯುವವರ ದಾಖಲೆಗಳನ್ನು ಬಳಸಿಕೊಂಡಿದೆ. ಇದರಲ್ಲಿ ಬೆಂಗಳೂರಿಗೆ ವೇತನ ಏರಿಕೆ ಎರಡನೇ ಸ್ಥಾನದಲ್ಲಿದೆ.

By

Published : Jul 24, 2019, 1:37 PM IST

ಸಾಂದರ್ಭಿಕ ಚಿತ್ರ

ಬೆಂಗಳೂರು:ದೇಶದ ಒಂಭತ್ತು ಅಗ್ರ ನಗರಗಳ ಪೈಕಿ ಆರು ನಗರಗಳಲ್ಲಿನ ಖಾಸಗಿ ನೌಕರರ ವೇತನದ ಬೆಳವಣಿಗೆ ದರವು ಎರಡಂಕಿ ದಾಟಲಿದೆ.

ಟೀಮ್ ಲೀಸ್​ನ ವಾರ್ಷಿಕ ವರದಿಯ ಪ್ರಕಾರ, ಮೆಟ್ರೊ ನಗರಗಳಲ್ಲಿನ ಖಾಸಗಿ ಸಂಸ್ಥೆಗಳ ನೌಕರರ ವೇತನದಲ್ಲಿ ಎರಡಂಕಿ (ಶೇ 10ರಿಂದ ಶೇ 11ರಷ್ಟು) ಏರಿಕೆ ಆಗಲಿದೆ ಎಂದಿದೆ. ವಿಶ್ಲೇಷಣೆಗಾಗಿ ದೇಶದ ಪ್ರಮುಖ 9 ನಗರಗಳನ್ನು ಆಯ್ದುಕೊಂಡು 17 ವಲಯಗಳಲ್ಲಿನ 2 ಲಕ್ಷ ಸಂಬಳ ಪಡೆಯುವವರ ದಾಖಲೆಗಳನ್ನು ಬಳಸಿಕೊಂಡಿದೆ.

ದೆಹಲಿಯ ತ್ವರಿತ ಮಾರಾಟವಾಗುವ ಗ್ರಾಹಕ ಬಳಕೆಯ ಸರಕುಗಳ (ಎಫ್ ಎಂಸಿಜಿ) ವಲಯದ ಉದ್ಯೋಗಿಗಳ ವೇತನದಲ್ಲಿ ಶೇ 11ರಷ್ಟು ಮತ್ತು ಬೆಂಗಳೂರಿನ ಟೆಕ್ ಸ್ಟಾರ್ಟ್ಅಪ್ ವಲಯದಲ್ಲಿ ಶೇ 10.8ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿದೆ.

ಉತ್ತಮ ಬೆಳವಣಿಗೆ ಕಾಣುವ ಇತರ ಕ್ಷೇತ್ರಗಳು ಬಿಎಫ್‌ಎಸ್‌ಐ, ಬಿಪಿಒ/ ಐಟಿ ಸೇವೆ, ಇ- ಕಾಮರ್ಸ್, ಶೈಕ್ಷಣಿಕ ಸೇವೆ, ಎಫ್‌ಎಂಸಿಜಿ, ಆರೋಗ್ಯ ರಕ್ಷಣೆ ಮತ್ತು ಫಾರ್ಮಾ ವಲಯಗಳು ಇದರಲ್ಲಿ ಸೇರಿವೆ.

ಬೆಂಗಳೂರಿನಲ್ಲಿ ಐಟಿ ಮತ್ತು ಟೆಕ್ ಉದ್ಯೋಗಿಗಳ ವೇತನದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದರೇ ಉಳಿದ ವಲಯಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಸಮೀಕ್ಷೆಗೆ ಒಳಪಟ್ಟ 9 ನಗರಗಳಲ್ಲಿ ಬೆಂಗಳೂರು ಮತ್ತು ಚೆನ್ನೈ ಮಾತ್ರ ಸರಾಸರಿ ಸಂಬಳದಲ್ಲಿ ಶೇ 10 ರಷ್ಟು ಬೆಳವಣಿಗೆ ಕಾಣಲಿವೆ. ಆದರೆ, ತಾತ್ಕಾಲಿಕ ಅಥವಾ ನೀಲಿ ಕಾಲರ್ ವಲಯದ ಕಾರ್ಮಿಕರು ಮತ್ತು ಖಾಯಂ ಉದ್ಯೋಗಿಗಳ ವೇತನದ ಏರಿಕೆ ಸ್ವಲ್ಪ ಕಡಿಮೆ ಆಗಲಿದೆ ಎಂದು ವಿವರಿಸಿದೆ.

For All Latest Updates

TAGGED:

ABOUT THE AUTHOR

...view details