ಕರ್ನಾಟಕ

karnataka

ಪಿಎಫ್ ಖಾತೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಾಟ್ಸ್​​ಆ್ಯಪ್​ನಲ್ಲೇ ಸಿಗಲಿದೆ ಪರಿಹಾರ: ಹೇಗೆ ಅಂತಿರಾ?

ಇಪಿಎಫ್‌ಒನ ಎಲ್ಲಾ 138 ಪ್ರಾದೇಶಿಕ ಕಚೇರಿಗಳು ತಮ್ಮದೇ ಆದ ವಾಟ್ಸ್​​ಆ್ಯಪ್​ ಸಹಾಯವಾಣಿ ಸಂಖ್ಯೆಗಳನ್ನು ಹೊಂದಿದ್ದು, ಚಂದಾದಾರರು ವೈಯಕ್ತಿಕ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಬಹುದು.

By

Published : Oct 14, 2020, 6:12 PM IST

Published : Oct 14, 2020, 6:12 PM IST

Updated : Oct 15, 2020, 7:47 AM IST

resolve your PF queries on Whatsapp
ಪಿಎಫ್ ಖಾತೆಗಳಿಗೆ ಸಂಬಂಧಿಸಿದ ಪ್ರಶ್ನಗೆ ವಾಟ್ಸ್​​ಆ್ಯಪ್​ನಲ್ಲೇ ಸಿಗಲಿದೆ ಪರಿಹಾರ

ಬ್ಯುಸಿನೆಸ್ ಡೆಸ್ಕ್, ಈಟಿವಿ ಭಾರತ್: ಭಾರತದಲ್ಲಿ ಸಂಬಳ ಪಡೆಯುವ ವರ್ಗವು ಈಗ ತಮ್ಮ ಭವಿಷ್ಯ ನಿಧಿ (ಪಿಎಫ್) ಖಾತೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ವಾಟ್ಸ್​ಆ್ಯಪ್ ಸಹಾಯವಾಣಿ ಮೂಲಕ ಸರಳವಾಗಿ ಮತ್ತು ತ್ವರಿತವಾಗಿ ಪರಿಹರಿಸಿಕೊಳ್ಳಬಹುದು. ಇದು ನೇರವಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಾದೇಶಿಕ ಕಚೇರಿಗಳೊಂದಿಗೆ ಸಂಪರ್ಕಿಸುತ್ತದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಚಂದಾದಾರರಿಗೆ ತಡೆ ರಹಿತ ಮತ್ತು ಅಡೆತಡೆಯಿಲ್ಲದ ಸೇವೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಇಪಿಎಫ್‌ಒ ವಾಟ್ಸ್​ಆ್ಯಪ್ ಆಧಾರಿತ ಸಹಾಯವಾಣಿ ಹಾಗೂ ಕುಂದು ಕೊರತೆ ಪರಿಹಾರ ಕಾರ್ಯ ವಿಧಾನವನ್ನು ಪ್ರಾರಂಭಿಸಿತ್ತು.

ಇದುವರೆಗೆ 1,64,040ಕ್ಕೂ ಹೆಚ್ಚು ಕುಂದು ಕೊರತೆಗಳನ್ನು ಮತ್ತು ಪ್ರಶ್ನೆಗಳನ್ನು ವಾಟ್ಸ್​ಆ್ಯಪ್​ ಮೂಲಕ ಪರಿಹರಿಸಿದೆ ಎಂದು ಇಪಿಎಫ್‌ಒ ತಿಳಿಸಿದೆ. ಇದು ಫೇಸ್‌ಬುಕ್​, ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಕುಂದು ಕೊರತೆ ಪ್ರಶ್ನೆಗಳ ನೋಂದಣಿಯನ್ನು 30ರಷ್ಟು ಇಳಿಸಿದೆ ಮತ್ತು ವಾಟ್ಸ್​​ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಪ್ರಾರಂಭಿಸಿದಾಗಿನಿಂದ ಇಪಿಎಫ್‌ಒನ ಆನ್‌ಲೈನ್ ಕುಂದು ಕೊರತೆ ರೆಸಲ್ಯೂಶನ್ ಪೋರ್ಟಲ್​​ಅನ್ನು 16ರಷ್ಟು ಕಡಿಮೆ ಮಾಡಿದೆ.

ವಾಟ್ಸ್​ಆ್ಯಪ್ ಸಹಾಯವಾಣಿ ಪರಿಣಾಮಕಾರಿ ಪರಿಹಾರೋಪಾಯದ ಕಾರ್ಯವಿಧಾನವೆಂದು ಸಾಬೀತಾಗಿದೆ. ಏಕೆಂದರೆ ಪಿಎಫ್ ಚಂದಾದಾರರಿಗೆ ಇಪಿಎಫ್‌ಒನ ಪ್ರಾದೇಶಿಕ ಕಚೇರಿಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಇದು ಒಂದು ಮಾರ್ಗದರ್ಶನ ತತ್ವಕ್ಕೆ ಬದ್ಧವಾಗಿರುತ್ತದೆ.

ನೀವು ವಾಟ್ಸ್​ಆ್ಯಪ್‌ನಲ್ಲಿ ಪಿಎಫ್​ಗೆ ಸಂಬಂಧಿತ ಪ್ರಶ್ನೆಯನ್ನು ಕೇಳಲು ಬಯಸಿದರೆ, ಅದರ ಪ್ರಕ್ರಿಯೆಗೆ ತ್ವರಿತ ಮಾರ್ಗದರ್ಶಿ ಇಲ್ಲಿದೆ:

ಇಪಿಎಫ್ ವಾಟ್ಸ್​ಆ್ಯಪ್​​ ಸಹಾಯವಾಣಿ ಪ್ಯಾನ್-ಇಂಡಿಯಾ ಸೇವೆಯೇ?

ಇಪಿಎಫ್‌ಒನ ಎಲ್ಲಾ 138 ಪ್ರಾದೇಶಿಕ ಕಚೇರಿಗಳು ಈಗ ತಮ್ಮದೇ ಆದ ಕ್ರಿಯಾತ್ಮಕ ವಾಟ್ಸ್​ಆ್ಯಪ್​ ಸಹಾಯವಾಣಿ ಸಂಖ್ಯೆಯನ್ನು ಹೊಂದಿವೆ. ಎಲ್ಲಾ ಪ್ರಾದೇಶಿಕ ಕಚೇರಿಗಳ ಮೀಸಲಾದ ಸಹಾಯವಾಣಿ ಸಂಖ್ಯೆಗಳ ಪಟ್ಟಿಯನ್ನು ಪಡೆಯಲು, ಇಪಿಎಫ್‌ಒ ವೆಬ್‌ಸೈಟ್​ಗೆ ಭೇಟಿ ನೀಡಿ ಅಥವಾ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: https://www.epfindia.gov.in/site_docs/PDFs/Downloads_PDFs/WhatsApp_Helpline.pdf

ಚಂದಾದಾರರು ಹೇಗೆ ಪ್ರಶ್ನೆ ಕೇಳಬಹುದು?

ಪಿಎಫ್ ಖಾತೆಯನ್ನು ನಿರ್ವಹಿಸುವ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಯ ಸಹಾಯವಾಣಿ ಸಂಖ್ಯೆಯಲ್ಲಿ ವಾಟ್ಸ್​ಆ್ಯಪ್ ಸಂದೇಶವನ್ನು ಕಳಿಸುವ ಮೂಲಕ ಯಾವುದೇ ಮಧ್ಯಸ್ಥಗಾರನು ಇಪಿಎಫ್‌ಒ ಒದಗಿಸುವ ಸೇವೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಸರಳವಾಗಿ ಕುಂದು ಕೊರತೆ ಸಲ್ಲಿಸಬಹುದು ಅಥವಾ ಮಾರ್ಗದರ್ಶನ ಪಡೆಯಬಹುದು.

ಕುಂದು ಕೊರತೆಯ ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ವಾಟ್ಸ್​​ಆ್ಯಪ್​ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು, ಪ್ರತೀ ಪ್ರಾದೇಶಿಕ ಕಚೇರಿಯಲ್ಲಿ ಮೀಸಲಾದ ತಜ್ಞರ ತಂಡವನ್ನು ಹೊಂದಿದ್ದು, ಅವುಗಳು ಕೂಡಲೇ ಸಮಸ್ಯೆಗಳ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸುತ್ತವೆ.

ಪ್ರಶ್ನೆಗಳನ್ನು ಕೇಳುವ ಸಂದರ್ಭದಲ್ಲಿ ನೀವು ಯಾವ ಮಾಹಿತಿಯನ್ನು ಒದಗಿಸಬೇಕು?

ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಯನ್ನು ಕೇಳುವ ಸಂದರ್ಭದಲ್ಲಿ ಚಂದಾದಾರರು ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್)ಅನ್ನು ನಮೂದಿಸುವುದು ಕಡ್ಡಾಯವಾಗಿದೆ.

ವಾಟ್ಸ್​ಆ್ಯಪ್ ಸಹಾಯವಾಣಿ ಬಳಸುವುದರಿಂದ ಏನು ಪ್ರಯೋಜನ?

ವಾಟ್ಸ್​ಆ್ಯಪ್‌ನಲ್ಲಿ ಪ್ರಶ್ನೆ ಮತ್ತು ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳುವ ಸೌಲಭ್ಯ ಚಂದಾದಾರರು ನೇರವಾಗಿ ಇಪಿಎಫ್‌ಒ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಇಪಿಎಫ್‌ಒ ಕಚೇರಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ವಾಟ್ಸ್​ಆ್ಯಪ್​ ಬಳಸದಿದ್ದರೆ, ಪಿಎಫ್ ಸಂಬಂಧಿತ ಪ್ರಶ್ನೆಗಳನ್ನು ಪರಿಹರಿಸಲು ಇತರ ಕಾರ್ಯವಿಧಾನಗಳು ಯಾವುವು?

ವಾಟ್ಸ್​ಆ್ಯಪ್ ಸೌಲಭ್ಯದ ಹೊರತಾಗಿ ಇಪಿಎಫ್‌ಒನ ಕುಂದು ಕೊರತೆ ಪರಿಹಾರ ವೇದಿಕೆಗಳಲ್ಲಿ ವೆಬ್ ಆಧಾರಿತ ಇಪಿಎಫ್​ಐಜಿಎಂಎಸ್ ಪೋರ್ಟಲ್(EPFiGMS), ಸಿಪಿಜಿಆರ್​ಎಎಂಎಸ್(CPGRAMS), ಸೋಷಿಯಲ್ ಮೀಡಿಯಾ (ಫೇಸ್‌ಬುಕ್ ಮತ್ತು ಟ್ವಿಟರ್) ಮತ್ತು ಮೀಸಲಾದ 24x7 ಕಾಲ್ ಸೆಂಟರ್​ಗಳನ್ನು ಸಂಪರ್ಕಿಸಬಹುದಾಗಿದೆ.

Last Updated : Oct 15, 2020, 7:47 AM IST

ABOUT THE AUTHOR

...view details