ಕರ್ನಾಟಕ

karnataka

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್​ ಹೂಡಿಕೆ ಸ್ವಿಂಗ್​ಗೆ ಚೀನಾದ 'ಕೂ' ಆ್ಯಪ್ ಕ್ಲೀನ್ ಬೋಲ್ಡ್​!

ಈಗಿರುವ ಹೂಡಿಕೆದಾರರು ಮತ್ತು ಇನ್ವೆಸ್ಟರ್ಸ್​ ತಂಡ, ವೊಕಲ್ ಮತ್ತು ಕೂ ಮೂಲ ಕಂಪನಿಯಾದ ಬಾಂಬಿನೇಟ್ ಟೆಕ್​ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿನ ಷುನ್‌ವೇ ಕ್ಯಾಪಿಟಲ್‌ನ ಅಲ್ಪ ಪಾಲು ಖರೀದಿಸಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಒಪ್ಪಂದದ ಹಣಕಾಸಿನ ವಿವರ ಬಹಿರಂಗಪಡಿಸಲಿಲ್ಲ.

By

Published : Mar 18, 2021, 3:22 PM IST

Published : Mar 18, 2021, 3:22 PM IST

koo
koo

ನವದೆಹಲಿ:ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮತ್ತು ಮಾಜಿ ಭಾರತೀಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸೇರಿದಂತೆ ಭಾರತದ ಅಗ್ರ ಉದ್ಯಮಿಗಳ ತಂಡವೊಂದು ಚೀನಾದ ಹೂಡಿಕೆದಾರರಾದ ಷುನ್‌ವೇ ಕ್ಯಾಪಿಟಲ್‌ನ ಮೂಲ ಸಂಸ್ಥೆಯಾದ ಕೂ ಪಾಲು ಖರೀದಿಸಿದೆ.

ಬುಕ್‌ಮೈಶೋ ಸಂಸ್ಥಾಪಕ ಆಶಿಶ್ ಹೇಮ್ರಾಜನಿ, ಉಡಾನ್ ಸಹ ಸಂಸ್ಥಾಪಕ ಸುಜೀತ್ ಕುಮಾರ್ ಮತ್ತು ಜೆರೋಡಾ ಸಂಸ್ಥಾಪಕ ನಿಖಿಲ್ ಕಾಮತ್ ಸೇರಿದಂತೆ ಇತರರು ಬಾಂಬಿನೇಟ್ ಟೆಕ್​ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಷನ್‌ವೇ ಅವರ ಶೇ 9ರಷ್ಟು ಪಾಲು ಖರೀದಿಸಿದ್ದಾರೆ.

ಈಗಿರುವ ಹೂಡಿಕೆದಾರರು ಮತ್ತು ಇನ್ವೆಸ್ಟರ್ಸ್​ ತಂಡ, ವೊಕಲ್ ಮತ್ತು ಕೂ ಮೂಲ ಕಂಪನಿಯಾದ ಬಾಂಬಿನೇಟ್ ಟೆಕ್​ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿನ ಷುನ್‌ವೇ ಕ್ಯಾಪಿಟಲ್‌ನ ಅಲ್ಪ ಪಾಲು ಖರೀದಿಸಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಒಪ್ಪಂದದ ಹಣಕಾಸಿನ ವಿವರ ಬಹಿರಂಗಪಡಿಸಲಿಲ್ಲ.

ಇದನ್ನೂ ಓದಿ: ಜಾಗತಿಕ ಗೃಹ ಬೆಲೆ ಸೂಚ್ಯಂಕ: 13 ಸ್ಥಾನ ಕಳೆದುಕೊಂಡ ಭಾರತ

ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕುವ ಬಗ್ಗೆ ಕೇಂದ್ರ ಸರ್ಕಾರವು ಟ್ವಿಟರ್‌ ಜತೆ ಜಗಳವಾಡಿದ ನಂತರ ಸಾರ್ವಜನಿಕರ ಗಮನ ಸೆಳೆದ ಕೂ, ಸುಮಾರು ಒಂದು ಮಿಲಿಯನ್ ಸಕ್ರಿಯ ಬಳಕೆದಾರರೊಂದಿಗೆ 4 ಮಿಲಿಯನ್ ಡೌನ್‌ಲೋಡ್‌ ದಾಟಿದೆ.

ಕೂ ಹೂಡಿಕೆದಾರರಲ್ಲಿ ಅಕ್ಸೆಲ್ ಪಾರ್ಟ್​ನರ್ಸ್, 3 ಒನ್ 4 ಕ್ಯಾಪಿಟಲ್, ಬ್ಲೂಮ್ ವೆಂಚರ್ಸ್ ಮತ್ತು ಕಲಾರಿ ಕ್ಯಾಪಿಟಲ್ ಸೇರಿವೆ. ಇದರ ಜತೆಗೆ ಜಾಗತಿಕ ಸಾಹಸೋದ್ಯಮ ಬಂಡವಾಳ ಸಂಸ್ಥೆ, ಷುನ್​ವೇ, ಕೂ ಮೂಲ ಅಭಿವೃದ್ಧಿದಾರ ಬಾಂಬಿನೇಟ್ ಟೆಕ್​ನಾಲಜೀಸ್‌ನಲ್ಲಿ ಹೂಡಿಕೆದಾರರಾಗಿದ್ದರು. ಚೀನಾ ಮೂಲದ ಜನರನ್ನು ಒಳಗೊಂಡ ಪಾಲುದಾರಿಕೆ ತಂಡದ ನೇತೃತ್ವದಲ್ಲಿರುವ ಷನ್‌ವೇ ಕ್ಯಾಪಿಟಲ್, ವೊಕಲ್ ಎಂಬ ಅಪ್ಲಿಕೇಷನ್‌ನ ಹಿಂದಿನ ಬಾಂಬಿನೇಟ್ ಪ್ರೋಡೆಕ್ಟ್​ನಲ್ಲಿ ಹೂಡಿಕೆ ಮಾಡಿತ್ತು.

ಭಾರತದ ಮಾಜಿ ಕ್ರಿಕೆಟಿಗ ಮತ್ತು ವೇಗದ ಬೌಲರ್ ಜಾವಗಲ್ ಶ್ರೀನಾಥ್, ಕೂಗೆ ಬೆಂಬಲ ನೀಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದು ಭಾರತದ ಹೆಚ್ಚು ಚರ್ಚಿತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾಗಿದೆ. ಭಾರತೀಯ ಭಾಷಿಕರ ಧ್ವನಿಯನ್ನು ಸಾಮಾಜಿಕ ಮಾಧ್ಯಮ ಮುಂದೆ ತರಲು ಅವರೆಲ್ಲಾ ವೇದಿಕೆ ನಿರ್ಮಿಸುತ್ತಿರುವುದು ಶ್ಲಾಘನೀಯ. ಭಾರತೀಯನಾಗಿ ನಾನು ಅವರಿಗೆ ನನ್ನ ಬೆಂಬಲವನ್ನು ಹೃದಯದಿಂದ ನೀಡುತ್ತೇನೆ ಎಂದರು.

ABOUT THE AUTHOR

...view details