ಸ್ಯಾನ್ ಫ್ರಾನ್ಸಿಸ್ಕೋ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಫೇಸ್‌ಬುಕ್‌ನಲ್ಲಿ ರಾಜಕೀಯ ಜಾಹೀರಾತುಗಳಿಗೆ ನಿಷೇಧ ಹೇರಿದ್ದ ಎಫ್‌ಬಿ ಸಂಸ್ಥೆ ಮತ್ತೊಂದು ತಿಂಗಳ ಅವಧಿಗೆ ನಿಷೇಧವನ್ನು ಮುಂದುವರಿಸಿದೆ.
ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ಚುನಾವಣೆಯಲ್ಲಿ ಮೊಸ ಆಗಿದೆ. ಇದರಿಂದ ಜೋ ಬೈಡನ್ ಗೆಲುವು ಸಾಧಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ತಮ್ಮ ಜಾಲತಾಣದ ಮೂಲಕ ತಪ್ಪು ಮಾಹಿತಿ ಹರಡ ಬಹುದೆಂಬ ಆತಂಕದಿಂದಾಗಿ ಫೇಸ್‌ಬುಕ್ ಸಂಸ್ಥೆ, ಅಮೆರಿಕಾದಲ್ಲಿ ರಾಜಕೀಯ ಜಾಹೀರಾತುಗಳಿಗೆ ಇನ್ನೂ 1 ತಿಂಗಳು ಬ್ರೇಕ್ ಹಾಕಿದೆ.
ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಕುರಿತ ಜಾಹೀರಾತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದು, ಅತಿ ಶೀಘ್ರದಲ್ಲೇ ಯಥಾಸ್ಥಿತಿಗೆ ಬರಲಾಗುವುದು ಎಂದು ಎಫ್‌ಬಿ ಸಂಸ್ಥೆ ಹೇಳಿದೆ.
ಕೋವಿಡ್-19 ನಿಂದಾಗಿ ಕಳೆದ ಬಾರಿಗಿಂತ ಈ ವರ್ಷ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ತಡವಾಗಿ ಪ್ರಕಟವಾಗಿದೆ. ಅತಿ ಹೆಚ್ಚಿನ ಜನರು ಮೇಲ್ ಮೂಲಕ ಮತ ಚಲಾಯಿಸಿದ್ದಾರೆ. ಚುನಾವಣಾ ಸಮಗ್ರತೆಯನ್ನು ಕಾಪಾಡುವ ಸಲುವಾಗಿ ಹಲವು ನಿಯಮಗಳು ಮತ್ತು ಉತ್ಪನ್ನಗಳನ್ನು ಪರಿಚಯಿಸುತ್ತಿದ್ದೇವೆ. ಗೊಂದಲಗಳನ್ನು ಕಡಿಮೆಮಾಡಲು ಅಥವಾ ಆರೋಪ, ಪ್ರತ್ಯಾರೋಪಗಳಿಗೆ ಇದು ಅವಕಾಶ ನೀಡುವುದಿಲ್ಲ ಎಂದು ಫೇಸ್‌ಬುಕ್ ಸಂಸ್ಥೆ ವಿವರಿಸಿದೆ.
ಚುನಾವಣಾ ಮುನ್ನ ಜಾಹೀರಾತುಗಳಿಗೆ ನಿಷೇಧ ಹೇರಿದ್ದ ಈ ಸಂಸ್ಥೆ, ಅಮೆರಿಕ ಚುನಾವಣಾ ಪ್ರಕ್ರಿಯೆಯನ್ನು ಫೇಸ್‌ಬುಕ್ ಮೂಲಕ ಪ್ರಶ್ನೆ ಮಾಡಿದ್ದವರ ಖಾತೆಗಳನ್ನು ಇದೇ ಅಕ್ಟೋಬರ್‌ನಲ್ಲಿ ರದ್ದು ಮಾಡಿತ್ತು.