ಕರ್ನಾಟಕ

karnataka

ETV Bharat / business

ಕೊರೊನಾ ವಿರುದ್ಧದ ಸಮರಕ್ಕೆ ಕೇಂದ್ರದಿಂದ ರಾಜ್ಯಗಳಿಗೆ 8,873.6 ಕೋಟಿ ರೂ. ಅನುದಾನ ಬಿಡುಗಡೆ

ಆಸ್ಪತ್ರೆಗಳು, ವೆಂಟಿಲೇಟರ್‌, ಏರ್ ಪ್ಯೂರಿಫೈಯರ್‌, ಆ್ಯಂಬುಲೆನ್ಸ್ ಸೇವೆಗಳ ಬಲಪಡಿಸಲು, ಕೋವಿಡ್ -19 ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳಲ್ಲಿನ ಆಮ್ಲಜನಕ ಉತ್ಪಾದನೆ ಮತ್ತು ಶೇಖರಣಾ ಘಟಕಗಳ ವೆಚ್ಚ ಪೂರೈಕೆ ಸೇರಿದಂತೆ ವಿವಿಧ ಕ್ರಮಗಳಿಗಾಗಿ ಈ ಅನುದಾನವನ್ನು ರಾಜ್ಯಗಳು ಬಳಸಬಹುದು..

By

Published : May 1, 2021, 7:55 PM IST

fund
fund

ನವದೆಹಲಿ : ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಜ್ಯಗಳಿಗೆ ನೆರವಾಗಲು ಹಣಕಾಸು ಸಚಿವಾಲಯವು 2022ರ ಹಣಕಾಸು ವರ್ಷದ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಡಿ (ಎಸ್‌ಡಿಆರ್​ಎಫ್) 8,873.6 ಕೋಟಿ ರೂ. ಬಿಡುಗಡೆ ಮಾಡಿದೆ.

ಗೃಹ ಸಚಿವಾಲಯದ ಶಿಫಾರಸುಗಳ ಮೇರೆಗೆ ಎಸ್‌ಡಿಆರ್‌ಎಫ್‌ಗೆ 1ನೇ ಕಂತಿನ ಕೇಂದ್ರದ ಪಾಲನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ. ಸಾಮಾನ್ಯವಾಗಿ, ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಎಸ್‌ಡಿಆರ್‌ಎಫ್‌ನ ಮೊದಲ ಕಂತು ಜೂನ್ ತಿಂಗಳಲ್ಲಿ ಬಿಡುಗಡೆ ಆಗುತ್ತದೆ.

ಸಾಮಾನ್ಯ ಕಾರ್ಯವಿಧಾನದ ವಿನಾಯತಿಯಡಿ ಎಸ್‌ಡಿಆರ್‌ಎಫ್ ಬಿಡುಗಡೆ ಮುಂದುವರೆಸಿದೆ. ಮಾತ್ರವಲ್ಲದೆ ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒದಗಿಸಿದ ಮೊತ್ತದ ಬಳಕೆಯ ಪ್ರಮಾಣಪತ್ರಕ್ಕಾಗಿ ಕಾಯದೆ ಈ ಮೊತ್ತ ನೀಡಿದೆ. ಬಿಡುಗಡೆಯಾದ ಮೊತ್ತದ ಶೇ. 50ರಷ್ಟು ಅಂದರೆ 4,436.8 ಕೋಟಿ ರೂ. ರಾಜ್ಯಗಳು ಕೋವಿಡ್​-19 ನಿಯಂತ್ರಣ ಕ್ರಮಗಳಿಗೆ ಬಳಸಬಹುದು.

ಆಸ್ಪತ್ರೆಗಳು, ವೆಂಟಿಲೇಟರ್‌, ಏರ್ ಪ್ಯೂರಿಫೈಯರ್‌, ಆ್ಯಂಬುಲೆನ್ಸ್ ಸೇವೆಗಳ ಬಲಪಡಿಸಲು, ಕೋವಿಡ್ -19 ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳಲ್ಲಿನ ಆಮ್ಲಜನಕ ಉತ್ಪಾದನೆ ಮತ್ತು ಶೇಖರಣಾ ಘಟಕಗಳ ವೆಚ್ಚ ಪೂರೈಕೆ ಸೇರಿದಂತೆ ವಿವಿಧ ಕ್ರಮಗಳಿಗಾಗಿ ಎಸ್‌ಡಿಆರ್‌ಎಫ್‌ನ ಹಣವನ್ನು ರಾಜ್ಯಗಳು ಬಳಸಬಹುದು.

ABOUT THE AUTHOR

...view details