ಕರ್ನಾಟಕ

karnataka

ನೆಟ್​ವರ್ಕ್​ ಮೇಲೆ ನಿರ್ಬಂಧ... ಏರ್​ಟೆಲ್ ತೊರೆದ ಇಷ್ಟು ಲಕ್ಷ ಗ್ರಾಹಕರು..!

ಮಾರುಕಟ್ಟೆಯ ಮೇಲೆ ಜಿಯೋ ಬಿಗಿಹಿಡಿತದಿಂದ ಕಂಗಾಲಾಗಿರುವ ಏರ್​ಟೆಲ್​​​ಗೆ ಜಮ್ಮು ಕಾಶ್ಮೀರದ ಬೆಳವಣಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

By

Published : Nov 25, 2019, 1:49 PM IST

Published : Nov 25, 2019, 1:49 PM IST

ETV Bharat / business

ನೆಟ್​ವರ್ಕ್​ ಮೇಲೆ ನಿರ್ಬಂಧ... ಏರ್​ಟೆಲ್ ತೊರೆದ ಇಷ್ಟು ಲಕ್ಷ ಗ್ರಾಹಕರು..!

ಏರ್​ಟೆಲ್

ಮುಂಬೈ:ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ವೇಳೆ ಮೊಬೈಲ್ ನೆಟ್​ವರ್ಕ್​ ಮೇಲೆ ನಿರ್ಬಂಧ ಹೇರಿದ್ದ ಪರಿಣಾಮ ಏರ್​ಟೆಲ್​ ಭಾರಿ ನಷ್ಟ ಅನುಭವಿಸಿದೆ.

ಮಾರುಕಟ್ಟೆಯ ಮೇಲೆ ಜಿಯೋ ಬಿಗಿಹಿಡಿತದಿಂದ ಕಂಗಾಲಾಗಿರುವ ಏರ್​ಟೆಲ್​​​ಗೆ ಜಮ್ಮು ಕಾಶ್ಮೀರದ ಬೆಳವಣಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಿಂಗಳುಗಳ ಕಾಲ ಮೊಬೈಲ್​ ನೆಟ್​ವರ್ಕ್​ ಮೇಲೆ ನಿರ್ಬಂಧದಿಂದ ಏರ್​ಟೆಲ್​​ ಬರೋಬ್ಬರಿ 30 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ಗ್ರಾಹಕರನ್ನು ಕಳೆದುಕೊಂಡ ವಿಚಾರದಲ್ಲಿ ವೊಡಾಫೋನ್ - ಐಡಿಯಾ ಸಹ ಬಾಧಿತವಾಗಿದ್ದು, ಏರ್​ಟೆಲ್​​ ಅಗ್ರಸ್ಥಾನದಲ್ಲಿದೆ.

ನೆಟ್​ವರ್ಕ್​ ನಿರ್ಬಂಧದ ಬಗ್ಗೆ ಕೆಲ ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದು, ನೂತನ ಕೇಂದ್ರಾಡಳಿತ ಪ್ರದೇಶದ ಆಡಳಿತವರ್ಗದಿಂದ ಶಿಫಾರಸು ಬಂದ ತಕ್ಷಣವೇ ನಿರ್ಬಂಧವನ್ನು ಸಂಪೂರ್ಣವಾಗಿ ಹಿಂಪಡೆಯಲಾಗುವುದು ಎಂದಿದ್ದಾರೆ.

ABOUT THE AUTHOR

...view details