ಕರ್ನಾಟಕ

karnataka

ETV Bharat / briefs

ತಪ್ಪು ಮಾಡ್ಬಿಟ್ಟೇ, ಬಿಟ್ಟು ಹೋಗ್ಬೇಡಾ ನನ್ನಾ.. ಮದ್ವೆ ಹಾಲ್‌ನಲ್ಲಿ ಭಗ್ನ ಪ್ರೇಮಿಯ ಹೈಡ್ರಾಮಾ! - ಮಾಜಿ ಪ್ರೇಯಸಿ

ಹೊಸಬಾಳಿಗೆ ಅಡಿಯಿಡುವ ಸಂಭ್ರಮ. ವಧುವರರು ಪರಸ್ಪರ ರಿಂಗ್‌ ಬದಲಿಸಿಕೊಳ್ಳುವ ಅಪೂರ್ವ ಗಳಿಗೆ. ಅಷ್ಟೊತ್ತಿಗೇ ಅಲ್ಲೊಂದು ಸಿನಿಮಾ ಸ್ಟೈಲ್‌ ದೃಶ್ಯ ನಡೀತು.

lovers

By

Published : Apr 13, 2019, 5:09 PM IST

ಬೀಜಿಂಗ್​(ಚೀನಾ) : ಪ್ರೀತಿ ಅಂದರೇ ಹೀಗೇ ಅನ್ಸುತ್ತೆ. ಒಂದು ಸಾರಿ ಆ ಸೆಳೆತಕ್ಕೆ ಸಿಲುಕಿದರೇ ಹೊರ ಬರೋದು ಕಷ್ಟ. ಹೊರ ಬರುತ್ತೇವಿ ಅಂದ್ಕೊಂಡೇ ಇನ್ನೊಂದು ಜೀವದ ಜತೆ ಬದುಕಿದ್ರೂ ಹಳೆ ನೆನಪು ಕಾಡದೇ ಇರಲ್ಲ. ಪ್ರೀತಿಸಿದವ ಇನ್ನೊಬ್ಬಳ ಜತೆ ಮದ್ವೆ ಆಗಲು ನಿಂತರೇ ಹೃದಯ ಒಡೆದು ಚೂರಾಗುತ್ತೆ. ಇಲ್ಲೊಬ್ಬ ಭಗ್ನ ಪ್ರೇಮಿ ಏನ್ಮಾಡಿದಳು ನೋಡಿ.

ವರನ ಮುಂದೆ ಮಂಡಿಯೂರಿ ಪ್ರೀತಿ ನಿವೇದನೆ

ಮದುವೆ ಹಾಲ್‌ನಲ್ಲಿ ಸಿನಿಮಾ ಸ್ಟೈಲ್‌ನ ದೃಶ್ಯ :
ಹೊಸಬಾಳಿಗೆ ಅಡಿಯಿಡುವ ಸಂಭ್ರಮ. ವಧುವರರು ಪರಸ್ಪರ ರಿಂಗ್‌ ಬದಲಿಸಿಕೊಳ್ಳುವ ಅಪೂರ್ವ ಗಳಿಗೆ. ಅಷ್ಟೊತ್ತಿಗೇ ಅಲ್ಲೊಂದು ಸಿನಿಮಾ ಸ್ಟೈಲ್‌ ದೃಶ್ಯ ನಡೀತು. ಸೂಟ್ ಹಾಕ್ಕೊಂಡು ವರ ಟೀಕುಟಾಕಾಗಿ ನಿಂತಿದ್ದ. ವಧು ಕೂಡ ಮದ್ವೆ ಗೌನ್‌ನಲ್ಲಿ ಮಿರಿ ಮಿರಿ ಹೊಳೀತಾಯಿದ್ದಳು. ಎಲ್ಲರೂ ಇವರಿಬ್ಬರನ್ನೂ ನೋಡಿ ಕಣ್ತುಂಬಿಕೊಳ್ತಾಯಿದ್ದರು. ವಾಹ್‌ ಎಂಥಾ ಜೋಡಿ ಕಣ್ರೀ.. ತುಂಬಾ ಚೆನ್ನಾಗಿ ಕಾಣ್ತಾಯಿದ್ದಾರಲ್ವಾ ಅಂತಾ ಮದ್ವೆ ಹಾಲ್‌ನಲ್ಲಿದ್ದವರೆಲ್ಲ ಮಾತಾಡಿಕೊಳ್ತಾಯಿದ್ದರು. ಆಗಲೇ ಅದೇ ಹಾಲ್‌ಗೆ ಇನ್ನೊಬ್ಬ ಯುವತಿ ಮದ್ವೆಯ ಬಿಳಿ ಗೌನ್‌ ಹಾಕಿಕೊಂಡೇ ಎಂಟ್ರಿಕೊಟ್ಟಿದ್ದಳು. ಎಲ್ಲರ ಕಣ್ಣು ಆಕೆಯ ಮೇಲಿತ್ತು. ಸೀದಾ ಹೋದವಳೇ ಮದ್ವೆಯಾಗ್ತಿರುವ ನವ ಜೋಡಿ ಮುಂದೆ ನಿಂತಳು.

ವರನ ಮುಂದೆ ಮಂಡಿಯೂರಿ ಪ್ರೀತಿ ನಿವೇದಿಸಿದಳು:
ವರ ಮಹಾಶಯನ ಕೈ ಹಿಡಿದೆಳೆದು, ಮದ್ವೆ ಆಗೋದಿದ್ರೇ ನನ್ನ ಜತೆಗಷ್ಟೇ ಆಗ್ಬೇಕು ಅಂತಾ ಹೇಳಿಬಿಟ್ಟಳು. ಈ ಅನಿರೀಕ್ಷಿತ ಘಟನೆಯಿಂದ ವರನಿಗೆ ಶಾಕ್‌. ಆಕೆ ಮಾತ್ರ ಕೈ ಹಿಡಿದೆಳೀತಾನೆ ಇದ್ದಳು. ಆದರೆ, ವರ ಮುಂದಕ್ಕೆ ಹೆಜ್ಜೆ ಇಡಲಿಲ್ಲ. ಆಕೆ ಹಿಡಿದಿದ್ದ ಕೈ ಹಿಂದಕ್ಕೆ ಎಳೆದುಕೊಂಡ. ಇದನ್ನೆಲ್ಲ ನೋಡ್ತಿದ್ದ ಮದ್ವೆಯಾಗ್ತಿದ್ದ ವಧು ಕೂಡ ಏನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ, ಕಣ್ಣೀರು ತಣ್ಣಿಂದ ತಾನೇ ಹರಿತಾಯಿದ್ದವು. ವರ ಚಿಂತೆ ಮಾಡ್ಬೇಡಾ ಅಂತಾ ಆಕೆಯನ್ನ ಸಂತೈಸುತ್ತಿದ್ದ. ಇತ್ತ ಭಗ್ನ ಪ್ರಿಯತಮೆಯೂ ಅಳುತ್ತಲಿದ್ದಳು. ಭಗ್ನ ಪ್ರಿಯತಮೆ ಗೋಳಿಡುತ್ತಿದ್ದಳು, ಮಂಡಿಯೂರಿ ಪ್ರೀತಿಯ ನಿವೇದನೆ ಮಾಡಿದಳು. ಬಿಟ್ಟು ಹೋಗ್ಬೇಡಾ ನನ್ನ ಅಂತಾ ಕಿರುಚಾಯಿದ್ದಳು. ಇದರಿಂದಾಗಿ ವರನಿಗಂತೂ ಇರಿಸುಮುರಿಸಾಗಿತ್ತು. ವೇದಿಕೆಯಿಂದಲೇ ಆಕೆಯನ್ನ ತಳ್ಳಿ ನವ ಜೋಡಿ ಮುಂದಕ್ಕೆ ಹೋಯಿತು. 30 ನಿಮಿಷದ ಈ ವಿಡಿಯೋ ಈಗ ಚೀನಾದ ಸೋಷಿಯಲ್‌ ಮೀಡಿಯಾದಲ್ಲಿ ವೈರಲಾಗಿದೆ.

ವ್ಯಕ್ತಿತ್ವದ ಭಿನ್ನತೆ ಕಾರಣ ದೂರವಾಗಿದ್ದ ಪ್ರೇಮಿಗಳು :
ಅದು ನನ್ನದೇ ತಪ್ಪು, ನಾನು ತಪ್ಪು ಮಾಡಿದೆ ಅಂತಾ ಭಗ್ನ ಪ್ರಿಯತಮೆ ಹೇಳುತ್ತಿದ್ದಳು. ಆದರೆ, ಕೇಳೋ ಸ್ಥಿತಿಯಲ್ಲಂತೂ ಹಳೆ ಪ್ರೇಮಿ ಇರಲಿಲ್ಲ. ಈ ಟ್ರೈಆ್ಯಂಗಲ್‌ ಲವ್ ಸ್ಟೋರಿಯನ್ನ ಈಗ ಚೀನಾದ ಸೋಷಿಯಲ್‌ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ಜನ ನೋಡಿದ್ದಾರೆ. ಈ ರೀತಿಯ ಡ್ರಾಮಾಗಳನ್ನ ಇತ್ತೀಚೆಗಿನ ರಿಯಾಲಿಟಿ ಶೋಗಳಲ್ಲಿ ನೋಡ್ತಿರುತ್ತೇವೆ. ಆದರೆ, ನಿಜ ಜೀವನದಲ್ಲಿ ಹಾಗೇರಲ್ವಲ್ಲ. ಪ್ರೇಮಿಯನ್ನ ಮರೆತು ಬದುಕೋದು ಹೃದಯ ಭಗ್ನ ಅನ್ನೋದು ಗೊತ್ತು. ಆದರೆ, ಈ ಘಟನೆ ಅದಕ್ಕಿಂತಲೂ ಹೆಚ್ಚು. ಪ್ರೀತಿಸಿದವರು ದೂರಾದಾಗಲೇ ಆ ನೋವು ಏನು ಅಂತಾ ಪ್ರಿಯತಮೆ, ಪ್ರಿಯಕರನ ಕಳ್ಕೊಂಡವರಿಗೇ ಗೊತ್ತಾಗುತ್ತೆ. ಒಂದ್ಸಾರಿ ಪ್ರೀತಿ ಹುಟ್ಟಿದ ಮೇಲೆ ಅದನ್ನ ಮರೆಯೋದಕ್ಕಂತೂ ಸಾಧ್ಯವಿಲ್ಲ ಅನ್ನೋದಂತೂ ಈ ದೃಶ್ಯ ಸಾರಿ ಸಾರಿ ಹೇಳುತ್ತಿದೆ.

ABOUT THE AUTHOR

...view details