ಕರ್ನಾಟಕ

karnataka

ಐಎಎಸ್, ಐಪಿಎಸ್ ಕೈ ಹಿಡಿಯದ ಮತದಾರರು.. ತಮಿಳುನಾಡಿನ ರಾಜಕೀಯ ಹೀಗೇ..

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಚುನಾವಣಾ ರಾಜಕೀಯದಲ್ಲಿ ಮಿಂಚಲು ಸಾಧ್ಯವಾಗುತ್ತಿಲ್ಲ ಯಾಕೆ ಎಂದು ವಿವರಿಸಿದ ಅಜಿ ಸೆಂಥಿಲ್​ನಾಥನ್, ರಾಜಕೀಯವು ಕೇವಲ ಆಡಳಿತವನ್ನು ಒಳಗೊಂಡ ವಿಷಯವಲ್ಲ. ಅದು ಅದಕ್ಕಿಂತ ಹೆಚ್ಚು. ರಾಜಕೀಯಕ್ಕೆ ಧುಮುಕುವ ನಿರ್ವಾಹಕರು, ತಮ್ಮದೇ ಆದ ಆಡಳಿತ ಕೌಶಲ್ಯ ಮತ್ತು ಕುಶಾಗ್ರಮತಿಯ ಆಧಾರದ ಮೇಲೆ ಭ್ರಷ್ಟಾಚಾರ ರಹಿತ ಆಡಳಿತವನ್ನು ಒದಗಿಸುವ ಸಾಧ್ಯತೆಯ ಬಗ್ಗೆ ಮಾತನಾಡುತ್ತಾರೆ..

By

Published : May 4, 2021, 5:39 PM IST

Published : May 4, 2021, 5:39 PM IST

anna malai
anna malai

ಚೆನ್ನೈ :ತಮಿಳುನಾಡಿನ ಮಟ್ಟಿಗೆ ಹೇಳುವುದಾದರೆ, ಚುನಾವಣಾ ರಾಜಕೀಯಕ್ಕೆ ಧುಮುಕುವುದೆಂದರೆ ಅಷ್ಟೊಂದು ಸರಳವಲ್ಲ. ಅಲ್ಲಿರುವ ಪಕ್ಷ, ಪಕ್ಷ ಸಂಘಟನೆಗೆ ಹೊಸಬರು ಧೂಳೀಪಟವೆಂದೇ ಹೇಳಬಹುದು. ಆದ್ರೂ ಮೊನ್ನೆ ನಡೆದ ಚುನಾವಣೆಯಲ್ಲಿ ಕೆಲವರು ತಮ್ಮ ಅದೃಷ್ಠ ಪರೀಕ್ಷೆಗೆ ಕೈ ಹಾಕಿದ್ದರು.

ಇಲ್ಲಿನ ರಾಜಕೀಯಕ್ಕೆ ಮುಂದಡಿಯಿಡುವ ಧೈರ್ಯವನ್ನು ಈ ಬಾರಿ ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಮಾಜಿ ಅಧಿಕಾರಿಗಳು ಮಾಡಿದ್ದಾರೆ.

16ನೇ ವಿಧಾನಸಭೆಯ ಚುನಾವಣೆಯಲ್ಲಿ ಮಾಜಿ ಸರ್ಕಾರಿ ಅಧಿಕಾರಿಗಳಾದ ಕೆ ಅಣ್ಣಾಮಲೈ ಮತ್ತು ಕರೂರು ಜಿಲ್ಲೆಯ ಅರಾವಕುರಿಚಿಯಿಂದ ಸಂತೋಷ್ ಬಾಬು ಮತ್ತು ಚೆನ್ನೈನ ವೇಲಾಚೇರಿಯಿಂದ ಕ್ರಮವಾಗಿ ಸ್ಪರ್ಧಿಸಿದ್ದರು. ಆದರೂ ಯಶಸ್ಸು ಅವರ ಕೈ ಬಿಟ್ಟಿತ್ತು.

ದ್ರಾವಿಡ ಪ್ರಮುಖ ಎಐಎಡಿಎಂಕೆ ಜೊತೆಗಿನ ಮೈತ್ರಿಯಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿಯ ಹೈಕಮಾಂಡ್ ಉತ್ತೇಜಿಸಿದರೂ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ 24,816 ಮತಗಳ ಅಂತರದಿಂದ ಸೋಲನುಭವಿಸಿದರು.

ಅವರು 68,553 ಮತಗಳನ್ನು ಗಳಿಸಿದ್ದು, 38.71 ಶೇಕಡಾ ದಾಖಲಿಸಿದ್ದಾರೆ. ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಧನ್ಯವಾದ ಹೇಳುವಾಗ, ಅವರು ತಮ್ಮ ಜೀವನದಲ್ಲಿ ಹಲವಾರು ವೈಫಲ್ಯಗಳಲ್ಲಿ ಇದೂ ಕೂಡಾ ಒಂದಾಗಿದೆ ಎಂದು ಹೇಳಿದರು.

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ಬಲವಾಗಿ ಬೆಳೆಯುತ್ತದೆ. 2026ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಯಶಸ್ಸನ್ನು ಗಳಿಸುತ್ತದೆ ಎಂದು ಹೇಳಿದರು.

ಅಂತೆಯೇ, ತಮಿಳುನಾಡು ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯದರ್ಶಿಯಾಗಿದ್ದ ಮತ್ತು ಭಾರತ್ ನೆಟ್​ನಂತಹ ಹಲವಾರು ಐಟಿ ಯೋಜನೆಗಳಲ್ಲಿ ಹೆಸರುವಾಸಿಯಾಗಿದ್ದ ಮಕ್ಕಲ್ ನೀಧಿ ಮೈಯಂ ಅಭ್ಯರ್ಥಿ ಸಂತೋಷ್ ಬಾಬು ಅವರು ಕೇವಲ 23,072 ಮತಗಳನ್ನು ಗಳಿಸಿ 13.06 ಶೇಕಡಾ ಮತಗಳನ್ನು ಗಳಿಸಿದ್ದು, ವೇಲಾಚೇರಿ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ನಗರ ಪ್ರದೇಶಗಳಲ್ಲಿ ಪಕ್ಷವು ಉತ್ತಮ ಬೆಂಬಲವನ್ನು ಗಳಿಸಿದೆ ಎಂದು 2019ರ ಸಂಸತ್ ಚುನಾವಣೆಯಲ್ಲಿ ಎಂಎನ್‌ಎಂ ಸಾಧನೆ ಆಧರಿಸಿದ ಲೆಕ್ಕಾಚಾರ, ಚೆನ್ನೈನಲ್ಲಿ ಸಂತೋಷ್ ಬಾಬು ಅವರಿಗೆ ಸಹಾಯ ಮಾಡಿಲ್ಲ. ಇದಲ್ಲದೆ, ಪಕ್ಷದ ಕಾರ್ಯಕರ್ತರು ಚುನಾವಣಾ ಕಾರ್ಯಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ದೂರುಗಳಿವೆ.

ಅಂತೆಯೇ, 2019ರ ಸಂಸತ್ ಚುನಾವಣೆಯಲ್ಲಿ ದಕ್ಷಿಣ ಚೆನ್ನೈನ ಎಂಎನ್‌ಎಂ ಅಭ್ಯರ್ಥಿ ರಂಗರಾಜನ್ ಅವರು ರಾಜಕೀಯಕ್ಕೆ ಧುಮುಕುವ ಸಲುವಾಗಿ ತಮ್ಮ ಐಎಎಸ್ ಹುದ್ದೆಯನ್ನು ತ್ಯಜಿಸಿದ್ದರು.

ಇನ್ನು, 2016ರ ವಿಧಾನಸಭಾ ಚುನಾವಣೆಯಲ್ಲಿ ಐಎಎಸ್ ಹುದ್ದೆಯನ್ನು ತ್ಯಜಿಸಿ ಡಿಎಂಕೆ ಟಿಕೆಟ್‌ನಲ್ಲಿ ಕಣದಲ್ಲಿದ್ದ ಶಿವಗಾಮಿಗೆ ಶಾಸಕಾಂಗ ವೇದಿಕೆಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಚುನಾವಣಾ ರಾಜಕೀಯದಲ್ಲಿ ಮಿಂಚಲು ಸಾಧ್ಯವಾಗುತ್ತಿಲ್ಲ ಯಾಕೆ ಎಂದು ವಿವರಿಸಿದ ಅಜಿ ಸೆಂಥಿಲ್​ನಾಥನ್, ರಾಜಕೀಯವು ಕೇವಲ ಆಡಳಿತವನ್ನು ಒಳಗೊಂಡ ವಿಷಯವಲ್ಲ.

ಅದು ಅದಕ್ಕಿಂತ ಹೆಚ್ಚು. ರಾಜಕೀಯಕ್ಕೆ ಧುಮುಕುವ ನಿರ್ವಾಹಕರು, ತಮ್ಮದೇ ಆದ ಆಡಳಿತ ಕೌಶಲ್ಯ ಮತ್ತು ಕುಶಾಗ್ರಮತಿಯ ಆಧಾರದ ಮೇಲೆ ಭ್ರಷ್ಟಾಚಾರ ರಹಿತ ಆಡಳಿತವನ್ನು ಒದಗಿಸುವ ಸಾಧ್ಯತೆಯ ಬಗ್ಗೆ ಮಾತನಾಡುತ್ತಾರೆ.

ಆದರೆ, ಆಡಳಿತವು ಸಂಪೂರ್ಣವಾಗಿ ರಾಜಕೀಯವನ್ನು ರೂಪಿಸುವುದಿಲ್ಲ ಎಂಬುದು ಮೂಲ ವಾಸ್ತವ ಎಂದಿದ್ದಾರೆ. ಸ್ಪರ್ಧಿಗಳು ಅವರು ನಗರ-ಗ್ರಾಮೀಣ ವಿಭಜನೆ ಮತ್ತು ಜಾತಿ ಆಧಾರಿತ, ಆರ್ಥಿಕ ಮತ್ತು ಶೈಕ್ಷಣಿಕ ಸಂಕೀರ್ಣತೆಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ.

ಅಂತಹ ಜನರು ಕೆಲವು ದೊಡ್ಡ ರಾಜಕೀಯ ಪಕ್ಷಗಳ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಚುನಾವಣೆಯಲ್ಲಿ ಗೆಲ್ಲಬಹುದು. ಇಲ್ಲದಿದ್ದರೆ, ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿ ಇರುವುದು ಕಠಿಣವಾಗಿದೆ.

ಮತ್ತೊಂದು ನ್ಯೂನತೆಯೆಂದರೆ, ಒಮ್ಮೆ ಅವರು ಚುನಾವಣೆಯಲ್ಲಿ ಸೋಲನುಭವಿಸಿದರೆ, ಅವರು ಮತ್ತೆ ಪ್ರಯತ್ನಿಸುವುದಿಲ್ಲ. ಅವರಿಗೆ ಚಾಲನೆ ಮತ್ತು ದೃಢನಿಶ್ಚಯದ ಕೊರತೆಯಿದೆ ಎಂದು ಅವರು ಹೇಳಿದರು.

ABOUT THE AUTHOR

...view details