ಕರ್ನಾಟಕ

karnataka

ETV Bharat / briefs

ಅನುಮತಿ ಪಡೆಯದೆ ಮದುವೆ ಮಾಡಿದರೆ ಕಠಿಣ ಕ್ರಮ: ಚಿಕ್ಕೋಡಿ ತಹಶೀಲ್ದಾರ್​ - Chikodi Tahsildar

ಚಿಕ್ಕೋಡಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ತಾಲೂಕಾಡಳಿತದ ಅನುಮತಿಯನ್ನು ಪಡೆಯದೇ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ 200-300 ಜನರನ್ನು ಸೇರಿಸಿ ಮದುವೆಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆ ತಹಶೀಲ್ದಾರ್​ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

   Strict action to against marry who did not take permission : Chikodi Tahsildar
Strict action to against marry who did not take permission : Chikodi Tahsildar

By

Published : Apr 25, 2021, 4:12 PM IST

Updated : Apr 25, 2021, 4:47 PM IST

ಚಿಕ್ಕೋಡಿ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಮದುವೆ ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರದಂತೆ ಕಟ್ಟುನಿಟ್ಟಾಗಿ ಸಮಾರಂಭಗಳನ್ನು ನಡೆಸಬೇಕು. ಆಯಾ ತಾಲೂಕಿನ‌ ದಂಡಾಧಿಕಾರಿಗಳ ಅನುಮತಿ ಪಡೆಯಬೇಕೆಂದು ಆದೇಶಿಸಿದೆ. ಆದರೆ, ಚಿಕ್ಕೋಡಿ ತಾಲೂಕಿನಲ್ಲಿ ಯಾವುದೆ ಅನುಮತಿ ಪಡೆಯದೆ ಮದುವೆ ಸಮಾರಂಭಗಳು ನಡೆಯುತ್ತಿವೆ.

ಅನುಮತಿ ಪಡೆಯದೆ ಮದುವೆ ಸಮಾರಂಭಗಳು ನಡೆದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದುದು ಎಂದು ಚಿಕ್ಕೋಡಿ ತಹಶೀಲ್ದಾರ್​ ಹೇಳಿದ್ದಾರೆ.

ಅನುಮತಿ ಪಡೆಯದೆ ಮದುವೆ ಮಾಡಿದರೆ ಕಠಿಣ ಕ್ರಮ: ಚಿಕ್ಕೋಡಿ ತಹಶೀಲ್ದಾರ್​

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚಿಕ್ಕೋಡಿ ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ವೆಂಟಿಲೇಟರ್, ಆಕ್ಸಿಜನ್​, ಡಾಕ್ಟರ್ಸ, ಬೆಡ್​​ಗಳು ಸೇರಿದಂತೆ ಕೊರೊನಾ ಮುಂಜಾಗ್ರತೆಯಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಕ್ಕೋಡಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ತಾಲೂಕಾಡಳಿತದ ಅನುಮತಿಯನ್ನು ಪಡೆಯದೇ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ 200-300 ಜನರನ್ನು ಸೇರಿಸಿ ಮದುವೆಗಳನ್ನು ಮಾಡುತ್ತಿದ್ದಾರೆ. ಅಂತಹ ಪ್ರಕರಣಗಳು ನಮ್ಮ ಗಮನಕ್ಕೆ ಬಂದರೆ ಅಂತಹವರ ಮೇಲೆ ನೇರವಾಗಿ ಯಾವುದೇ ಮುಲಾಜಿಲ್ಲದೆ ಕಾನೂನಿನ ರೀತಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ತಾಲೂಕಾಡಳಿತದ ಅನುಮತಿ ಪಡೆದುಕೊಂಡು ಕೇವಲ 50 ಜನರನ್ನು ಸೇರಿಸಿ ಮಾಸ್ಕ್​ ಧರಿಸಿ, ಸ್ಯಾನಿಟೈಸರ್ ಬಳಸಿ ಮದುವೆಗಳನ್ನು ಮಾಡಿ ತಾಲೂಕಾಡಳಿತಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

Last Updated : Apr 25, 2021, 4:47 PM IST

ABOUT THE AUTHOR

...view details